ಕುಂದಾಪುರ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಮನ್ಮಹಾರಥೋತ್ಸವ ಶನಿವಾರ ಸಂಜೆ ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರು ಶ್ರೀದೇವಿಯ ದರ್ಶನ ಪಡೆದರು.
ಕ್ಷಿಪ್ರಬಲಿ, ರಥಬಲಿ, ಅವಳಿ ಉತ್ಸವಮೂರ್ತಿಗಳ ರಥಾರೋಹಣ, ಮಧ್ಯಾಹ್ನ ವಿಶೇಷ ಪೂಜೆ ನಡೆಯಿತು. ಸಂಜೆ ಸುಮಾರಿಗೆ ಮನ್ಮಹಾರಥೋತ್ಸವ ಸಂಭ್ರಮ, ಸಡಗರದಿಂದ ನೆರವೇರಿತು. ವಿವಿದೆಡೆಗಳಿಂದ ಆಗಮಿಸಿದ ಭಕ್ತರು ರಥೋತ್ಸವ ವೀಕ್ಷಿಸಿ ಸಂಭ್ರಮಿಸಿದರು. ಮನ್ಮಹಾರಥೋತ್ಸವ ಅಂಗವಾಗಿ ದೇವಳದ ಪ್ರಧಾನ ತಂತ್ರಿ ರಾಮಚಂದ್ರ ಅಡಿಗ ನೇತತ್ವದಲ್ಲಿ ಬೆಳಗಿನಿಂದ ನಾನಾ ಧಾರ್ಮಿಕ ವಿಧಿ ವಿಧಾನ ನಡೆದವು.
ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ದೇವಳದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಕಷ್ಣಪ್ರಸಾದ್ ಅಡ್ಯಂತಾಯ, ತಾ.ಪಂ.ಸದಸ್ಯರಾದ ರಮೇಶ ಗಾಣಿಗ, ರಾಜು ಪೂಜಾರಿ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಿ ಐತಾಳ್, ದೇವಳದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿ. ಪ್ರಸನ್ನ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕಷ್ಣಮೂರ್ತಿ, ದೇವಳದ ಅಧೀಕ್ಷಕ ರಾಮಕಷ್ಣ ಅಡಿಗ, ವ್ಯವಸ್ಥಾಪನಾ ಸಮಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ನೇತ್ರತ್ವದಲ್ಲಿ, ಬೈಂದೂರು ವ್ರತ್ತನಿರೀಕ್ಷಕ ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ಕೊಲ್ಲೂರು ಠಾಣೆಯ ಉಪನಿರೀಕ್ಷಕ ಜಯಂತ ಅವರು ಬಂದೋಬಸ್ತ್ ನಿರ್ವಹಿಸಿದರು.









































