ಮುಂಬೈ,ಮಾರ್ಚ್.13 : ಮಹಾರಾಷ್ಟ್ರದಲ್ಲಿ ಟೋಲ್ ತೆರಿಗೆಯಿಂದ ರಾಜ್ಯದ ಜನರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರಿದಿದ್ದಾರೆ. ಮಹಾರಾಷ್ಟ್ರದಲ್ಲಿನ ಟೋಲ್ ಗೇಟ್‌ಗಳ ನಿರ್ವಹಣೆಯ ಬಗ್ಗೆ ಸಚಿನ್ ಮಹಾ ಸರ್ಕಾರದ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಮುಂಬೈಯಿಂದ ಹೋಗುವ ಮತ್ತು ಬರುವ ಪ್ರಯಾಣಿಕರು ಟೋಲ್ ಗೇಟ್‌ನಿಂದ ಮಾನಸಿಕ ಮತ್ತು ಶಾರೀರಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಟೋಲ್ ಗೇಟ್ ನಿರ್ವಹಣೆಯ ಬಗ್ಗೆ ಮರುಚಿಂತನೆ ನಡೆಸಿ ಸುಧಾರಣೆ ಕೈಗೊಳ್ಳುವುದೊಳಿತು ಎಂದು ಸಚಿನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಟೋಲ್ ಗೇಟ್‌ಗಳಿಂದಾಗಿ ಪ್ರಯಾಣಿಕರು ಸಂಕಷ್ಟ ಅನುಭವಿಸಬಾರದು ಎಂದು ಸಚಿನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಏತನ್ಮಧ್ಯೆ, ಸಚಿನ್ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಚಂದ್ರಕಾಂತ್ ಪಾಟೀಲ್, ಪ್ರಯಾಣಿಕರ ಕಷ್ಟಗಳಿಗೆ ಶೀಘ್ರದಲ್ಲೇ ಪರಿಹಾರ ಕೈಗೊಳ್ಳಲಾಗುವುದು ಎಂದಿದ್ದಾರೆ.