ಮಂಗಳೂರು,ಮಾರ್ಚ್.13: ಜಮ್ಮು ಕಾಶ್ಮೀರದಲ್ಲಿ ಪಿ.ಡಿ.ಪಿ ಸರಕಾರ ಪ್ರತ್ಯೇಕವಾದಿ ದೇಶದೋಹಿ ಮಸ್ರತ್ ಅಲಂ ನನ್ನು ಬಿ.ಜೆ.ಪಿ ಸರಕಾರದ ಕುಮ್ಮಕ್ಕಿನಿಂದಾಗಿ ಬಿಡುಗಡೆಗೊಳಿಸಿದೆ ಎಂದು ಆರೋಪಿಸಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತುಂಬೆ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರು, ಬಿಜೆಪಿ ಜೊತೆಗೂಡಿ ಆಡಳಿತಾ ನಡೆಸುತ್ತಿರುವ ಪಿಡಿಪಿ ಸರ್ಕಾರ ದೇಶದೋಹಿ ಮಸ್ರತ್ ಅಲಂ ನನ್ನು ಬಿಡುಗಡೆಗೊಳಿಸಿರುವ ಪ್ರಕರಣದಲ್ಲಿ ಬಿಜೆಪಿದ್ದು ಪಾಲಿದೆ. ಇಂಥ ಹೇಯ ಕೃತ್ಯವನ್ನು ಕಾಂಗ್ರೆಸ್ ಯುವ ಘಟಕ ತೀವ್ರವಾಗಿ ಖಂಡಿಸುವುದಾಗಿ ಅಕ್ರೋಷ ವ್ಯಕ್ತಪಡಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈ ನೇತ್ರತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೇಸ್ ಉಪಾಧ್ಯಕ್ಷ ಮರ್ವೀನ್, ಸೇವಾದಳದ ಮಾಜಿ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಶೆಟ್ಟಿ,ರಾಜ್ಯ ಪ್ರಧಾನ ಕಾರ್ಯದರ್ಶಿ ತೇಜಸ್ವಿ ರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ಬುಡ್ಲೆಗುತ್ತು, ಶೋಯಬ್,ಸಾಹೀಲ್, ನೇಮಿರಾಜ್ ಶೆಟ್ಟಿ, ಮೋಹನ್ ಗೌಡ, ಸಾರ್ಥಕ್ ರೈ, ಮಂಗಳೂರು ದಕ್ಷಿಣ ಅಧ್ಯಕ್ಷ ಮೇರಿಲ್ ರೋಶನ್, ಉತ್ತರ ಅಧ್ಯಕ್ಷ ಗಿರೀಶ್ ಆಳ್ವ, ಸುಳ್ಯ ಮಹಮ್ಮದ್ ಪವಾಜ್, ಬಂಟ್ವಾಳ ಪ್ರಶಾಂತ್ ಕುಲಾಲ್, ಬೆಳ್ತಂಗಡಿ ಹರೀಶ್ ಗೌಡ, ಅನ್ಸರುದ್ದೀನ್, ಬಿಲಾಲ್, ನಾಸೀರ್ ಅಸೈಗೊಳಿ, ವರುಣ್ ರಾಜ್, ಪ್ರಸಾದ್ ಮಲ್ಲಿ, ಶ್ರೀರಾಮ ಹೈಕಳ, ಕಾರ್ತಿಕ್ ರೈ, ರಮಾನಂದ ಪೂಜಾರಿ ಮತ್ತೀತರರು ಪಾಲ್ಗೊಂಡಿದ್ದರು.