ಉಡುಪಿ: ಹೆಲ್ಮೇಟ್ ಧರಿಸಿ, ಜರ್ಕೀನು ತೊಟ್ಟು, ಬ್ಯಾಗು ಹಾಕಿಕೊಂಡು ಬಿಳಿ ಬಣ್ಣದ ಆಕ್ಟಿವಾ ಹೊಂಡಾದಲ್ಲಿ ಸರ್ರನೇ ಬಂದಿಳಿದ ಬೈಕು ಉಡುಪಿ ತಾಲೂಕಿನ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಾಡಿಯ ಸಿಂಡಿಕೇಟ್ ಬ್ಯಾಂಕಿನೆದುರಿಗೆ ನಿಂತಿತ್ತು. ಅದರಿಂದಿಳಿದು ಬಂದ ಗ್ರಾಹಕರ ಸೋಗಿನ ವ್ಯಕ್ತಿ ಅಲ್ಲಿ ಅಸಲಿಯಾಗಿ ಬಂದಿದ್ದು ಗ್ರಾಹಕನಾಗಲ್ಲ. ಬದಲಾಗಿ ದರೋಡೆಕೋರನಾಗಿ…!
ಅವನು ಮೂಲತಃ ಕುಂದಾಪುರ ತಾಲೂಕಿನ ಹಕ್ಲಾಡಿಯ ಯುವಕ. ಹೆಸರು ಅಜಿತ್ ಕೆ. ಶೆಟ್ಟಿ (25). ಸದ್ಯ 5 ವರ್ಷದಿಂದ ಬೆಳಗಾಂನಲ್ಲಿ ವಾಸವಿದ್ದು ಅಲ್ಲಿ ತೃತೀಯ ಬಿ.ಕಾಮ್ ಅನುತ್ತೀರ್ಣನಗಿ ಹೋಟೆಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.
ಗುರುವಾರ ಮಧ್ಯಾಹ್ನದ ಸುಮಾರಿಗೆ ಜನವಿಲ್ಲವೆಂದು ತಿಳಿದ ಈ ಖದೀಮ ಹೆಲ್ಮೇಟ್, ಜರ್ಕೀನ್ ಹಾಗೂ ಬ್ಯಾಗು ಧರಿಸಿ ಬ್ಯಾಂಕಿನೊಳಗೆ ಗ್ರಾಹಕನ ಸೋಗಿನಲ್ಲಿ ಹೀಗಿ 15-20 ನಿಮಿಷ ವರ್ತಿಸಿದ್ದ. ಆದರೇ ಅಲ್ಲಿ ಕುಳಿತ ಸಿಂಡಿಕೇಟ್ ಬ್ಯಾಂಕ್ ಹಳ್ಳಾಡಿ ಶಾಖೆ ಮ್ಯಾನೇಜರ್ ಜಯಂತ್ ಬಿ. ಅವರು ಈತನ ಚಲನವಲನದ ಬಗ್ಗೆ ತೀವ್ರ ನಿಗಾ ಇಟ್ಟಿದ್ದಾರೆ. ಈ ಯುವಕ ಗ್ರಾಹಕನಲ್ಲ್, ಆದರೇ ಆಕೆ ಬಂದ ಅನುಮಾನದ ನಡುವೆ, ಸಿಬ್ಬಂದಿಗಳಿಗೆ ಈತನ ಬಗ್ಗೆ ವಿಚರಿಸಲು ಹೇಳುತ್ತಾರೆ.
ಅಕೌಂಟ್ ಬಗ್ಗೆ, ಹಣದ ಜಮಾ ಬಗ್ಗೆ ರಶೀತಿ ಬರೆಯುವ ಸೋಗಿನಲ್ಲಿದ್ದ ಆ ಯುವಕ ಸಿಬ್ಬಂದಿ ಪ್ರಶ್ನೆಗೆ ಉತ್ತರಿಸುತ್ತಾ, ತನ್ನ ಬ್ಯಾಗಿಗೆ ಕೈ ಹಾಕಿ ಕಪ್ಪು ಬಣ್ಣದ ವಸ್ತುವೊಂದನ್ನು ತೆಗೆದು ಬ್ಯಾಂಇನ ಮೂಲೆಯೊಂದಕ್ಕೆ ಎಸೆದು ತನ್ನ ಬ್ಯಾಗಿನಲ್ಲಿದ್ದ ರಿಮೋಟ್ ತರದ ವಸ್ತುವನ್ನು ತೆಗೆದು “ ಇದು ಬಾಂಬು, ಸ್ಪೋಟಿಸಿದರೇ ಈ ಪ್ರದೇಶದ 100 ಮೀ. ವ್ಯಾಪ್ತಿ ಮಸಣವಾಗುತ್ತೆ, ಮೊದಲು ಬ್ಯಾಂಕಿನಲ್ಲಿರುವ ೫೦ ಲಕ್ಷ ಹಣ ತಂದು ಕೊಡಿ, ಇಲ್ಲದಿದ್ದರೇ ಜಾಗ್ರತೆ” ಎಂದು ಬೊಬ್ಬಿಡುತ್ತಾನೆ, ಅಷ್ಟೇ ಅಲ್ಲದೇ ಬ್ಯಾಗಿನಲ್ಲಿದ್ದ ಏರ್‌ಗನ್ (ಪಿಸ್ತೂಲನ್ನು) ತೆಗೆದು ಮ್ಯಾನೇಜರ್ ಸಹಿತ ನಾಲ್ವರು ಸಿಬ್ಬಂದಿಗಳನ್ನು ಬೆದರಿಸುತ್ತಾನೆ.
ಇಷ್ಟು ಸಾಕಿತ್ತು, ಈತನ ಡಮ್ಮಿ (ಆಟಿಕೆ ಪಿಸ್ತೂಲು) ಏರ್‌ಗನ್ ಕಂಡಾಕ್ಷಣವೇ ಮ್ಯಾನೇಜರ್ ಜಯಂತ್ ಅವರ ಮನಸ್ಸು ಜಾಗ್ರತವಾಗಿತ್ತು. ಈತ ದರೋಡೆ ಮಾಡುವ ಸಲುವಾಗಿ ನಾಟಕವಾಡುತ್ತಿದ್ದಾನೆ, ಈತನನ್ನು ಹಿಡಿಯಲೇಬೇಕು ಎಂದು ತನ್ನ ಸಹೋದ್ಯೋಗಿ ಕ್ಲರ್ಕ್ ಸ್ಟಾನಿ ಡಿಸೋಜಾ, ಹಾಗೂ ಅಟೆಂಡರ್ ಸಂದೀಪ್ ನಾಯ್ಕ್ ಅವರಿಗೆ ಕಣ್ಸನ್ನೆ ಮೂಲಕ ಅಪಾಯದ ಮುನ್ಸೂಚನೆ ನೀಡುತ್ತಾರೆ. ಬಳಿಕ ಯುವಕನಿಗೆ ಹಣ ಕೊಡುವ ನಾಟಕವಾಡಿದ ಈ ಮೂವರು ಆತನ ಮೇಲೆ ಎರಗಿ ಆತನನ್ನು ಹಿಡಿಯುತ್ತಾರೆ. ಬ್ಯಾಂಕಿನೊಳಗೆ ಅದ್ಯೇಗೋ ತಪ್ಪಿಸಿಕೊಂಡ ಆತ ಶಟರ್ ದಾಟಿ ಅಲ್ಲಿಂದ ಮುಖ್ಯ ರಸ್ತೆಯತ್ತ ಓಡುತ್ತಾನೆ, ಆದರೇ ಹರ ಸಾಹಸಪಟ್ಟ ಮ್ಯನೇಜರ್ ಹಾಗೂ ಸಿಬ್ಬಂದಿಗಳು ಆತನನ್ನು ಬೆನ್ನಟ್ಟಿ ಹಿಡಿಯುತ್ತಾರೆ, ಈ ವೇಳೆಗೆ ಸ್ಥಳೀಯರೂ ಕೂಡ ಒಗ್ಗೂಡುತ್ತಾರೆ. ಪೊಲೀಸರಿಗೂ ಮಾಹಿತಿ ನೀಡುತ್ತಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಕೋಟ ಪೊಲೀಸರು ಅಜಿತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಾರೆ. ಆತ ಯಾವುದೋ ಚಿನ್ನದ ಜಾಲಕ್ಕೆ ಬೆಸು ಬಿದ್ದು ತನ್ನ ಸೋದರಿಯ ಚಿನ್ನಾಭರಣ ಅಡಮಾನವಿಟ್ಟಿದ್ದು, ಆಕೆಯ ಮದುವೆ ಮುಂದಿನ ತಿಂಗಳಿನಲ್ಲಿದ್ದು ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಈ ಕ್ರತ್ಯಕ್ಕೆ ಕೈ ಹಾಕಿರುವುದಾಗಿ ತಿಳಿಸಿದ್ದಾನೆ ಎಂಬ ಮಾಹಿತಿಯಿದೆ.
ಒಟ್ಟಿನಲ್ಲಿ ದುಡಿದು ತನ್ನ ಕುಟುಂಬವನ್ನು ಸಾಕಿ ಸಲುಹಬೇಕಾಗಿದ್ದ ಯುವಕ ಮಾತ್ರ ಈಗ ಪೊಲೀಸರ ಅತಿಥಿಯಾಗಿದ್ದಾನೆ, ಈತ ಹೇಳಿರುವ ಮಾಹಿತಿಗಳು ಪ್ರಾಥಮಿಕ ತನಿಖೆಯ ವೇಳೆಯಷ್ಟೇ ತಿಳಿಸಿದ್ದಾಗಿದ್ದು, ಈತನ ವರ್ತನೆ ನೋಡಿದರೇ ಈತನ ಹಿಂದೆ ಬೇರ್‍ಯಾರಾದರೂ ಇರಬಹುದೇಂಬ ಅನುಮಾನ ಸ್ಥಳೀಯರಲ್ಲಿ ವ್ಯಕ್ತವಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕಾಗಿದೆ.