ಕನ್ನಡ ವಾರ್ತೆಗಳು

ಪೌರತ್ವ ತರಬೇತಿ ಶಿಬಿರ ಉದ್ಘಾಟನೆ

Pinterest LinkedIn Tumblr

education_workdhop_1

ಮಂಗಳೂರು ಮಾರ್ಚ್.12 : ‘ಮಾನವನಿಗೆ ಪಂಚೇಂದ್ರಿಯಗಳಂತೆ ನಾಗರೀಕ ಪ್ರಜ್ಞೆ (ಸಿವಿಕ್ ಸೆನ್ಸ್) ಕೂಡಾ ತುಂಬಾ ಮಹತ್ವದ್ದಾಗಿದೆ. ಶಿಕ್ಷಕನಲ್ಲಿ ಪೌರತ್ವ ಗುಣದ ಮಹತ್ವ ಹಾಗೂ ಗೌರವ ಎರಡೂ ಹೇರಳವಾಗಿರಬೇಕು. ಮಾನವನನ್ನು ಸಾಮಾಜಿಕ ಜೀವಿ ಎಂದು ಕರೆಯಲಾಗಿದೆ. ಕಾಲಕಳೆದಂತೆ ಸಾಮಾಜಿಕ ಚಿಂತನೆಗಳು ಅಧಃಪತನಕ್ಕೆ ಒಳಗಾಗುತ್ತಿರುವುದು ಅಪಾಯಕಾರಿಯಾಗಿದೆ’ ಎಂದು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್‍ಯರಾದ ಎಸ್. ನಾಗೇಂದ್ರ ಮಧ್ಯಸ್ಥ ಹೇಳಿದರು. ಅವರು ಸರ್ಕಾರಿ ಪ್ರೌಢಶಾಲೆ, ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ, ನಾಲ್ಯಪದವು ಇಲ್ಲಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ ಪೌರತ್ವ ತರಬೇತಿ ಶಿಬಿರದ ಉದ್ಘಾಟಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಆಶಯ ಭಾಷಣಕಾರರಾಗಿ ಚಿಂತಕ ಅರವಿಂದ ಚೊಕ್ಕಾಡಿ, ಪ್ರವಾಚಕರಾದ ಮೊಸೆಸ್ ಜಯಶೇಖರ್, ಕೃಷ್ಣಾಜಿ ಕರಿಚಣ್ಣವರ್, ಮುಖ್ಯ ಶಿಕ್ಷಕರಾದ ವಿಜಯ ಕುಮಾರಿ, ಉದಯ ಕುಮಾರಿ, ಕೆನರಾ ಬ್ಯಾಂಕ್ ನ ಪ್ರಬಂಧಕರಾದ ಎಂ.ಕೆ.ಎಸ್. ಪ್ರಭು ಇವರು ಉಪಸ್ಥಿತರಿದ್ದರು.

ಮೂರು ದಿನಗಳ ಕಾಲ ಶ್ರಮದಾನ, ಆಕಾಶ ವೀಕ್ಷಣೆ ಮುಂತಾದ ಕಾರ್‍ಯಕ್ರಮಗಳು ನಡೆಯಲಿವೆ.

Write A Comment