ಹೈಕೋರ್ಟ್ ತೀಪಿನ ಪ್ರಕಾರ 14.27 ಎಕರೆ ಎಂಆರ್‌ಪಿಎಲ್ ಸ್ವಾಧೀನಕ್ಕೆ ಬಂದಿದ್ದು, ನೀಡಬೇಕಾದ ಪರಿಹಾರವನ್ನು ಬ್ಯಾಂಕ್ ಖಾತೆಗೆ ಹಾಕಲಾಗಿದೆ ಎಂದು ವಿಶೇಷ ಜಿಲ್ಲಾಧಿಕಾರಿ ದಾಸೇಗೌಡ ತಿಳಿಸಿದರು. ಪತ್ರಾವೊ ಎಂಆರ್‌ಪಿಎಲ್ ವ್ಯಾಪ್ತಿಯಲ್ಲಿನ ಬಾಳ ಪಂಚಾಯಿತಿನ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದು ಅವರ ಬೆಂಬಲಕ್ಕೆ ಯಾರೂ ಬರಲಿಲ್ಲ. ಸತತ 5ವರ್ಷ ಹೈಕೋರ್ಟಿನಲ್ಲಿ ಸತತ ಹೋರಾಟ ನೀಡಿದ್ದ ಗ್ರೆಗರಿ ಪತ್ರಾವೊ ಹೈಕೋರ್ಟ್ ತೀರ್ಪು ತಮ್ಮ ವಿರುದ್ಧ ಬಂದ ಹಿನ್ನೆಲೆಯಲ್ಲಿ ಏಕಾಂಗಿಯಾಗಿದ್ದರಿಂದ ಈ ಬಾರಿ ಅವರು ಹೆಚ್ಚಿನ ಪ್ರತಿರೋಧ ಒಡ್ಡದ ದೃಶ್ಯ ಕರುಣಾಜನಕವಾಗಿತ್ತು.
ಲೋಕಸಭೆಯಲ್ಲಿ ರೈತ ವಿರೋಧಿ ಎನ್ನಲಾದ ಭೂಸ್ವಾಧೀನ ಮಸೂದೆ ಅಂಗೀಕಾರ ನಡೆದ ದಿನವೇ ಎಂಆರ್ಪಿಎಲ್ ಪರವಾಗಿ ತೀರ್ಪು ಬಂದಿದೆ. ಎಪ್ರಿಲ್ 22,2010ರಂದು ಅಧಿಕಾರಿಗಳು ಪೊಲೀಸ್ ಬಲದೊಂದಿಗೆ ಅಧಿಕಾರಿಗಳು ಆಗಮಿಸಿ ಪತ್ರಾವೊ ಮನೆಯನ್ನು ಜೆಸಿಬಿಯಂಥ ಯಂತ್ರಗಳಿಂದ ಧ್ವಂಸ ಗೊಳಿಸಿದ್ದ ಸಂಗತಿ ರಾಜ್ಯಮಟ್ಟದಲ್ಲಿ ಗಮನ ಸೆಳೆದಿತ್ತು. ಆಗ ಮಠಾಧೀಶರು, ರಾಜಕಾರಣಿಗಳು ಭೇಟಿ ನೀಡಿದ್ದರು. ಪತ್ರಾವೊ ಇದೇ ಪರಿಸರದಲ್ಲಿ ತಾತ್ಕಾಲಿಕ ನೆಲೆಯಲ್ಲಿ ವಾಸಿಸುತ್ತ ಹೈಕೋರ್ಟಿನಲ್ಲಿ ಹೋರಾಟ ನಡೆಸುತ್ತಿದ್ದರು.
ಸುರತ್ಕಲ್ ಇನ್ಸ್‌ಪೆಕ್ಟರ್ ಎಂ. ಎ. ನಟರಾಜ್, ಎಸ್ಐ ಕುಮಾರೇಶ್ವರನ್ ಮತ್ತು ಸಿಬಂದಿಗಳು ಕಾರ್ಯಾಚರಣೆ ಸಂದರ್ಭ ಉಪಸ್ಥಿತರಿದ್ದರು.