ಮಂಗಳೂರು, ಮಾ.12 :ಮಂಗಳೂರು ಮಹಾನಗರ ಪಾಲಿಕೆಯ ಈ ಬಾರಿಯ ಮೇಯರ್ ಪಟ್ಟ ಯಾರ ಮುಡಿಗೆ ಎಂಬ ತೀವ್ರ ಕುತೂಹಲಕ್ಕೆ ಗುರುವಾರ ತೆರೆ ಬಿದ್ದಿದ್ದು, ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಜೆಸಿಂತಾ ವಿಜಯ್ ಅಲ್ಫ್ರೇಡ್ ( ಫಳ್ನಿರ್ – 39ನೇ ವಾರ್ಡ್) ಅವರು ಅಯ್ಕೆಯಾಗಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ದ್ವೀತಿಯ ಅವಧಿಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ರೂಪಾ .ಡಿ. ಬಂಗೇರಾ ಹಾಗೂ ಕಾಂಗ್ರೆಸ್‌ನ ಜೆಸಿಂತಾ ವಿಜಯ್ ಅಲ್ಫ್ರೇಡ್ ನಡುವೆ ಸ್ಫರ್ಧೆ ನಡೆಯಿತು. ಮನಪಾ ಸದಸ್ಯರು ತಮ್ಮ ಪ್ರತಿನಿದಿಗಳ ಪರವಾಗಿ ಕೈ ಎತ್ತುವ ಮೂಲಕ ಚುನಾವಣೆಯಲ್ಲಿ ಪಾಲ್ಗೊಡರು. ಅಂತಿಮವಾಗಿ ಜೆಸಿಂತಾ ವಿಜಯ್ ಅಲ್ಫ್ರೇಡ್ ಅವರು ಹೆಚ್ಚು ಮತಗಳಿಸುವ ಮೂಲಕ ಮೇಯರ್ ಆಗಿ ಅಯ್ಕೆಯಾದರು
ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಪುರುಷೋತ್ತಮ್ ಚಿತ್ರಾಪುರ ಅಯ್ಕೆಯಾಗಿದ್ದಾರೆ.
ಈ ಬಾರಿ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳಾ ವರ್ಗ ಹಾಗೂ ಉಪಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಾತಿ ಮಾಡಿ ಸರ್ಕಾರ ಅದೇಶ ಹೊರಡಿಸಿತ್ತು.
ಚುನಾವಣಾಧಿಕಾರಿಯಾಗಿ ಭಾಗವಹಿಸಿದ ಮೈಸೂರು ಪ್ರಾಂತೀಯ ವಿಭಾಗೀಯ ಅಧಿಕಾರಿ ಎಸ್.ಎಸ್.ಪಟ್ಟಣ ಶೆಟ್ಟಿಯವರು ಚುನಾವಣೆ ನಡೆಸಿಕೊಟ್ಟರು. ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಹಫ್ಸಿಬಾ ರಾಣಿ ಕೊರ್ಲಾಪತಿ ಹಾಗೂ ಎಡಿಷನಲ್ ಕಮಿಷನರ್ ಗಾಯತ್ರಿ ಉಪಸ್ಥಿತರಿದ್ದರು.