ಕನ್ನಡ ವಾರ್ತೆಗಳು

2023 ವೇಳೆಗೆ ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಿ ಪರಿವರ್ತನೆಗೊಳ್ಳುವುದು : ಕಾಶಿನಾಥ್ ಪ್ರಭು

Pinterest LinkedIn Tumblr

Hindu_nation_1

ಮಂಗಳೂರು,ಮಾರ್ಚ್.09: ಸಮಸ್ತ ಹಿಂದೂಗಳ ರಕ್ಷಣೆಯ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು, ಅದರ ಫಲವಾಗಿ 2023ರ ವೇಳೆಗೆ ಭಾರತವು ಸಂಪೂರ್ಣ ಹಿಂದೂ ರಾಷ್ಟ್ರವಾಗಿ ಪರಿವರ್ತನೆಗೊಳ್ಳಲಿದೆ ಎಂದು ಸಮಿತಿಯ ಉತ್ತರ ಕನ್ನಡ ಜಿಲ್ಲೆ ಸಮನ್ವಯಕಾರ ಕಾಶಿನಾಥ್ ಪ್ರಭು ತಿಳಿಸಿದ್ದಾರೆ.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪ್ರಾಂತೀಯ ಹಿಂದೂ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು.

Hindu_nation_2 Hindu_nation_3 Hindu_nation_4 Hindu_nation_5

ಈ ಹತ್ತು ವರ್ಷಗಳ ಅವಧಿಯು ಮಾತ್ರ ಭಾರತಕ್ಕೆ ಘನಘೋರವಾಗಲಿದೆ. ದೇಶದಲ್ಲಿ ಭಯೋತ್ಪಾದನೆ, ಮತಾಂಧರ ದಾಳಿ, ಕೋಮು ಗಲಭೆಯಂಥ ಕೃತ್ಯಗಳು ಹೆಚ್ಚಾಗುತ್ತಿವೆ. ಐಸಿಸ್‌ನಂಥ ಸಂಘಟನೆಗಳು ರಾಕ್ಷಸೀ ಕೃತ್ಯ ನಡೆಸುವ ಸಲುವಾಗಿ ಭಾರತ ಪ್ರವೇಶಿಸಲು ಸಂಚು ಹೂಡುತ್ತಿವೆ.ಇಂಥ ಪರಿಸ್ಥಿತಿಯಲ್ಲಿ ಧರ್ಮ ಕ್ರಾಂತಿಯಾಗಬೇಕಿದೆ. ಅದರಿಂದಲೇ ಹಿಂದೂ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹೇಳಿದರು.

Hindu_nation_6 Hindu_nation_7

ಹಿಂದೂ ರಾಷ್ಟ್ರ ನಿರ್ಮಾಣ ರಾಜಕೀಯ ವ್ಯಕ್ತಿಗಳಿಂದ ಸಾಧ್ಯವಿಲ್ಲ . ಬಿಜೆಪಿಯವರು ಅಧಿಕಾರಕ್ಕೆ ಬಂದ ಬಳಿಕ ಹಿಂದುತ್ವವನ್ನೇ ಮರೆತು ಬಿಡುತ್ತಾರೆ. ವೀರ ಸಾವರ್ಕರ್ ಹೇಳಿದಂತೆ ಸಂಘರ್ಷದಿಂದ ಧರ್ಮ ಕ್ರಾಂತಿ ಸಾಧ್ಯ.ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕಿದೆ. ಅದಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ನಾಳೆಯಿಂದಲ್ಲ , ಇಂದಿ ನಿಂದಲೇ ಸಿದ್ಧತೆ ನಡೆಸಿಕೊಳ್ಳಬೇಕಿದೆ ಎಂದು ಹೇಳಿದರು.

ಸಮಿತಿಯ ವಕ್ತಾರ ಜಯರಾಜ್ ಸಾಲ್ಯಾನ್ ಮಾತನಾಡಿ, ಹಿಂದುಗಳಲ್ಲಿ ಸಂಘಟನೆಗಳಿಗೇನೂ ಕಡಿಮೆ ಇಲ್ಲ. ಆದರೆ ಎಲ್ಲದರಲ್ಲೂ ಕಾಲೆಳೆಯುವವರೇ ಹೆಚ್ಚು ಮಂದಿ ಇದ್ದಾರೆ. ಸಂಘಟನೆಗಳು ವಿಘಟನೆಯಾಗದಂತೆ ನೋಡಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

Write A Comment