ಕುಂದಾಪುರ: ತಾಲೂಕಿನ ಖಾರ್ವಿಕೇರಿಯಲ್ಲಿ ವಾರಗಳ ಕಾಲ ಆಚರಿಸಿಕೊಂಡು ಬಂದ ಕೊಂಕಣ ಖಾರ್ವಿ ಸಮಾಜ ಭಾಂದವರ ವಾರ್ಷಿಕ ಹೋಳಿ ಆಚರಣೆ ಶನಿವಾರ ಸಂಜೆ ಸಂಭ್ರಮದ ತೆರೆ ಬಿದ್ದಿತ್ತು.
ಹೋಳಿ ಅಂಗವಾಗಿ ವಾರಗಳ ಕಾಲದಿಂದಲೂ ಹೋಣಿ ಕುಣಿತ, ಹೋಳಿ ಉತ್ಸವ, ಓಕುಳಿ, ಕಾಮಧಹನ ಮೊದಲಾದ ಆಚರಣೆಗಳನ್ನು ನಡೇಸಿದ್ದರು. ಶನಿವಾರ ಸಂಜೆ ನಡೆದ ಹೋಳಿ ಉತ್ಸವದ ಓಕುಳಿಯ ಮೆರವಣಿಗೆಯಲ್ಲಿ ಕೊಂಕಣ ಖಾರ್ವಿ ಸಮಾಜ ಭಾಂದವರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡರು.
ಕುಂದಾಪುರ ಖಾರ್ವಿಕೇರಿಯ ಮಹಾಂಕಾಳಿ ದೇವಸ್ಥಾನದಿಂದ ಆರಂಭಗೊಂಡ ಮೆರವಣೀಗೆ ಕುಂದಾಪುರ ನಗರದಾದ್ಯಂತ ಸಂಚರಿಸಿತು. ಗಂಡಸರು, ಹೆಂಗಸರು, ಯುವಕ-ಯುವತಿಯರು ಬಣ್ಣದೋಕುಳಿಯಲ್ಲಿ ಮಿಂದು ಸಂಭ್ರಮಿಸಿದರು, ಅಲ್ಲದೇ ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಶುಭಾಶಯ ವಿನಿಮಯಿಸಿಕೊಂಡರು. ಇನ್ನು ಈ ಹೋಳಿ ಸಂಭ್ರಮದಲ್ಲಿ ವಿದೇಶಿಗರೂ ಪಾಲ್ಗೊಂಡಿದ್ದು ಅವರುಗಳು ಬಣ್ಣದ ರಂಗಿನಾಟದಲ್ಲಿ ಖುಷಿಪಟ್ಟರು.