ಉಡುಪಿ: ಮನೆಯೊಳಗೆ ನುಗ್ಗಿದ ಕಳ್ಳರು ರೂಮಿನಲ್ಲಿದ್ದ ಲ್ಯಾಪ್ ಟಾಪ್ ಮತ್ತು ಕ್ಯಾಮರಾ ಕಳವು ಮಾಡಿದ ಘಟನೆ ಮಣಿಪಾಲ ಈಶ್ವರ ನಗರದ ರೀಗಲ್ ಎಂಬಾಸ್ಸಿ ಎದುರಿನ ಜ್ಯೋತಿ ಹೆಸರಿನ ಮನೆಯಲ್ಲಿ ಶುಕ್ರವಾರ ನಡೆದಿದೆ.
ಎಲ್. ಪ್ರಿತ್ವಿ ಗೌಡ ಅವರು ಸ್ನೇಹಿತರಾದ ಉಣ್ಣಿಕೃಷ್ಣ, ಶಹಾನ್, ಶಾಮಿಲ್ ಅವರೊಂದಿಗೆ ರಾತ್ರಿ ಮಲಗಿದ್ದಾಗ, ಶಹಾನ್ ಹಾಗೂ ಶಾಮಿಲ್ ಬೆಳಗ್ಗೆ ಚಾ ಕುಡಿಯಲು ಹೊರಗೆ ಹೋದ ಸಮಯದಲ್ಲಿ ಕಳ್ಳರು ರೂಮಿನೊಳಗೆ ಬಂದು ಎರಡುವರೆ ಲಕ್ಷ ಮೌಲ್ಯದ ಲ್ಯಾಪ್ ಟಾಪ್, ಕ್ಯಾಮರಾ ಕಳವು ಮಾಡಿದ್ದು ಈ ಬಗ್ಗೆ ಪ್ರಿತ್ವಿ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![theft]](http://kannadigaworld.com/wp-content/uploads/2015/03/theft.jpg)