ಕನ್ನಡ ವಾರ್ತೆಗಳು

ಸಚಿವ ರೈ ಅವರಿಂದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ, 94 ಸಿ ಹಕ್ಕುಪತ್ರ ವಿತರಣೆ, ಸವಲತ್ತು ವಿತರಣೆ

Pinterest LinkedIn Tumblr

Rai_Progrm_Bantwala

ಬಂಟ್ವಾಳ, ಮಾ.8: 94 ಸಿ ಮನೆಯಡಿ ಹಕ್ಕುಪತ್ರ ವಿತರಣೆ ರಾಜ್ಯದಲ್ಲಿ ಹೊಸ ಕ್ರಾಂತಿಯನ್ನೇ ಉಂಟುಮಾಡಿದೆ. ಆದರೆ ಇದರ ಪರಿಶೀಲನೆ ಸಂದಭರ್ ಗೋಮಾಳ, ಅರಣ್ಯ ಜಮೀನಿನ ತಾಂ ತ್ರಿಕ ತೊಂದರೆಗಳು ಎದುರಾಗಿದ್ದು, ಇವುಗಳನ್ನು ಪರಿಹರಿಸಲು ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಕ್ಕಿಪ್ಪಾಡಿ, ಚೆನ್ನೈತ್ತೋಡಿ ಮತ್ತು ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಭೇಟಿ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ, 94 ಸಿ ಹಕ್ಕುಪತ್ರ ವಿತರಣೆ, ಸವಲತ್ತು ವಿತರಣೆ ಹಾಗೂ ಅಹವಾಲು ಸ್ವೀಕರಿಸಿ ಮಾತನಾಡುತ್ತಿದ್ದರು.

ಹೆಚ್ಚು ಜನರಿಗೆ ಪ್ರಯೋ ಜನ ಸಿಗಲಿ ಎಂಬ ಉದ್ದೇಶದಿಂದ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರ ಣೆಗೂ ಸರಕಾರ ಚಿಂತನೆ ನಡೆಸಿದೆ ಎಂದರು. ಚೆನ್ನೈತ್ತೋಡಿ ಗ್ರಾಪಂ ವ್ಯಾಪ್ತಿಯಲ್ಲಿ 27 ಲಕ್ಷ ರೂ. ವೆಚ್ಚದಲ್ಲಿ ನೂತನ ಪಶು ಆಸ್ಪತ್ರೆ ಮಂಜೂರಾಗಿದ್ದು, ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು. ಅಲ್ಲದೆ ಅಜ್ಜಿಬೆಟ್ಟು ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಸೇರ್ಪ ಡೆಗೊಳಿಸಲಾಗಿದ್ದು ಆ ಮೂಲಕ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದು ಸಚಿವ ರಮಾನಾಥ ರೈ ಹೇಳಿದರು.

ನೂರಾರು ಮಂದಿಗೆ ಸವಲತ್ತು ವಿತರಣೆ : ದಿನವಿಡೀ ನಡೆದ ಗ್ರಾಮ ಭೇಟಿ ಯಲ್ಲಿ ಸಚಿವರು ಮೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 35 ಮಂದಿಗೆ 94ಸಿ ಹಕ್ಕುಪತ್ರ, 10 ಮಂದಿಗೆ ಸಂಧ್ಯಾ ಸುರಕ್ಷಾ, 3 ವಿಕಲಚೇತನರಿಗೆ ಅಂಗವಿಕಲ ವೇತನ, 8 ಗಾಲಿಕುರ್ಚಿ, 2 ಗೂಡಂಗಡಿ, 104 ಬಿಪಿಎಲ್ ಕಾರ್ಡ್‌ದಾರರಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ಸಹಿತ ಗ್ಯಾಸ್ ಸ್ಟವ್‌ಗಳನ್ನು ವಿತರಿಸಿದರು.

ಅಭಿವೃದ್ಧಿ ಕಾಮಗಾರಿಗಳು:

ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುರದಮೇಲು ಬಸ್ ತಂಗುದಾಣ ಉದ್ಘಾಟನೆ, 15 ಲಕ್ಷ ರೂ. ವೆಚ್ಚದ ಕರಂದಬೆಟ್ಟು-ಚೆನ್ನೈತ್ತೋಡಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ, 35 ಲಕ್ಷ ರೂ. ವೆಚ್ಚದ ಅಂದ್ರಳಿಕೆ ಪರಿಶಿಷ್ಟ ಕಾಲನಿ ರಸ್ತೆ ಕಾಂಕ್ರಿಟೀಕರಣ, 5 ಲಕ್ಷ ರೂ. ಮೊತ್ತದ ಪಿಲಿಮೊಗರು ಗ್ರಾಮದ ಜತ್ತನಕೆರೆ ಹೊಯ್ಗೆದಡ್ಡ ರಸ್ತೆ ಕಾಂಕ್ರಿಟ್, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣ ವಿಸ್ತರಣೆ ಮತ್ತು ಬಾಸ್ಕೆಟ್‌ಬಾಲ್ ಅಂಗಣ ನಿರ್ಮಾಣಕ್ಕೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

ಇದೇ ವೇಳೆ ಪಿಲಿಮೊಗರು ಪಂಜೊಟ್ಟುವಿನಲ್ಲಿ ಕಾಲುಬಾಯಿರೋಗ ಲಸಿಕೆ ಕಾರ್ಯ ಕ್ರಮಕ್ಕೆ ಸಚಿವರು ಚಾಲನೆ ನೀಡಿದರು.

ಬಂಟ್ವಾಳ ಪ್ರಭಾರ ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯ್ ಮಿರಾಂದ, ಅಕ್ರಮ- ಸಕ್ರಮ ಸಮಿತಿಯ ಅಧ್ಯಕ್ಷ ಕೆ.ಮಾಯಿಲಪ್ಪಸಾಲ್ಯಾನ್, ಉಪ ತಹಶೀಲ್ದಾರ್ ಸಾಧು, ತಾ.ಪಂ.ಸದಸ್ಯರಾದ ರಮೇಶ್ ಕುದ್ಮೇರು, ರೇವತಿ ಆರ್. ಪೂಜಾರಿ, ಕುಕ್ಕಿಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ, ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ಹರೀಶ್, ಉಪಾಧ್ಯಕ್ಷ ಆನಂದ ಆಚಾರ್ಯ, ಮಾಜಿ ಅಧ್ಯಕ್ಷ ರಾದ ಯುವರಾಜ ಆಳ್ವ, ನವೀನ್ಚಂದ್ರ ಶೆಟ್ಟಿ, ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸುಶೀಲಾ, ಉಪಾಧ್ಯಕ್ಷೆ ಜಲಜಾ, ಮಾಜಿ ಅಧ್ಯಕ್ಷರಾದ ಶಿವಾನಂದ ರೈ, ಪ್ರಭಾಕರ ಪ್ರಭು, ಮಾಜಿ ಉಪಾಧ್ಯಕ್ಷ ದೇವಪ್ಪಕರ್ಕೇರ, ಉಸ್ಮಾನ್ ಕರೋ ಪಾಡಿ, ಗುತ್ತಿಗೆದಾರ ಅಮ್ಮು ರೈ ಹರ್ಕಾಡಿ ಮತ್ತಿತರರು ಉಪಸ್ಥಿತರಿದ್ದರು.

Write A Comment