ಕನ್ನಡ ವಾರ್ತೆಗಳು

ಮಾ.15: ಬಾವಾಸ್ ಕಾಲೇಜ್ ಕ್ಯಾಂಪಸ್‌ನಲ್ಲಿ ಉದ್ಯೋಗ ಮೇಳ

Pinterest LinkedIn Tumblr

Moideen-Bava-Press

ಮಂಗಳೂರು, ಮಾ.08: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಿರುದ್ಯೋಗಿ ಯುವ ಸಮೂಹದ ಹಿತದೃಷ್ಟಿಯಿಂದ ಕೂಳೂರಿನ ಬಾವಾಸ್ ಕಾಲೇಜ್ ಕ್ಯಾಂಪಸ್‌ನಲ್ಲಿ ಮಾ.15ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವ ತಿಳಿಸಿದ್ದಾರೆ.

ಶನಿವಾರ ತನ್ನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೇಳದಲ್ಲಿ ಜಿಲ್ಲೆಯ ವಿವಿಧ ಉದ್ದಿಮೆ ಕಂಪೆನಿಗಳಲ್ಲದೆ ವಿದೇಶದಲ್ಲಿರುವ ಕೆಲವು ಕಂಪೆನಿಗಳೂ ಪಾಲ್ಗೊಳ್ಳಲಿವೆ. ಸುಮಾರು 1,500 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ನಿರೀಕ್ಷೆ ಇದೆ. ಸ್ಥಳದಲ್ಲೇ ನೋಂದಾಯಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಸ್ಥಳೀಯರಿಗೆ ಆದ್ಯತೆ: ಕೇಂದ್ರ ಸರಕಾರ ಎನ್‌ಎಂಪಿಟಿ ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ಮುಂದಾದರೂ ಕೂಡ ಈ ಹಿಂದಿನಂತೆ ಎಸ್ಸಿ-ಎಸ್ಟಿ ಹಾಗೂ ಅಹಿಂದ ವರ್ಗಕ್ಕೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಮುಂದುವರಿಸಬೇಕು ಎಂದು ಮೊಯ್ದಿನ್ ಬಾವಾ ಆಗ್ರಹಿಸಿದರು.

ಚೆಕ್ ವಿತರಣೆ:

ಕಿಡ್ನಿ ಸಮಸ್ಯೆಯಿಂದ ತೊಂದರೆಗೊಳಾಗಿದ್ದ ಉಡುಪಿ ಜಿಲ್ಲೆಯ ಕಟ್ಪಾಡಿಯ ವ್ಯಕ್ತಿಯೊಬ್ಬರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ.ನ ಚೆಕ್ಕನ್ನು ಶಾಸಕ ಮೊಯ್ದಿನ್ ಬಾವ ಇದೇ ಸಂದರ್ಭ ವಿತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಫೀಕ್ ಮಾಸ್ಟರ್, ಮಾಜಿ ಕಾರ್ಪೊರೇಟರ್ ನವಾಝ್, ಕೇಶವ ಸನೀಲ್, ಶಕುಂತಳಾ ಕಾಮತ್ ಉಪಸ್ಥಿತರಿದ್ದರು.

25 ಹಸುಗಳ ವಿತರಣೆ

ಮಾ.22ಕ್ಕೆ ತನ್ನ 50ನೆ ಹುಟ್ಟು ಹಬ್ಬ ನಿಮಿತ್ತ ಕ್ಷೇತ್ರದ 25 ಅರ್ಹ ಕುಟುಂಬ ಗಳು ಸ್ವಾವಲಂಬಿ ಜೀವನ ನಡೆಸುವ ಸಲುವಾಗಿ ತಲಾ ಒಂದರಂತೆ 25 ಹಸು ಗಳನ್ನು ವಿತರಿಸುವ ಮತ್ತು ಶಾಸಕರಾಗಿ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇದುವರೆಗೆ ಮಾಡಿರುವ ಸಾಧನೆಗಳ ಸಮಾವೇಶ ಮಾಡಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಎಲ್ಲಾ ಮಾಹಿತಿಗಳನ್ನು ನೀಡುವುದಾಗಿ ಮೊಯ್ದಿನ್ ಬಾವ ಅವರು ಈ ಸಂದರ್ಭ ತಿಳಿಸಿದರು.

Write A Comment