ಕನ್ನಡ ವಾರ್ತೆಗಳು

ಮಹಿಳೆ ಸ್ನಾನ ಮಾಡುವಾಗ ಮೊಬೈಲ್‌ನಲ್ಲಿ ಚಿತ್ರೀಕರಣ : ಆರೋಪಿ ಸೆರೆ

Pinterest LinkedIn Tumblr

vittal_mobile_shooter

ವಿಟ್ಲ,ಮಾರ್ಚ್.07: ಬೊಳಂತೂರು ಗ್ರಾಮದ ಬಂಗಾರಕೋಡಿ ಎಂಬಲ್ಲಿಯ ಬಾಡಿಗೆ ಮನೆಯಲ್ಲಿ ವಾಸವಿರುವ ವಿವಾಹಿತ ಶಿಕ್ಷಕಿಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ಯುವಕನೊಬ್ಬ ಕಿಟಕಿ ಮೂಲಕ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದು, ಬಳಿಕ ಮನೆ ಕೆಲಸದಾಕೆ ಮೇಲೆ ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ.

ಹೊರ ಜಿಲ್ಲೆಯ ವಿವಾಹಿತ ಪ್ರೌಢಶಾಲೆ ಶಿಕ್ಷಕಿಯೊಬ್ಬರು ಸ್ನಾನಕ್ಕೆ ತೆರಳಿದ್ದ ಸಂದರ್ಭ ಯುವಕನೊಬ್ಬ ಮೊಬೈಲ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಶಬ್ದ ಹಾಗೂ ನೆರಳಿನ ಛಾಯೆ ಕಂಡ ಹಿನ್ನೆಲೆಯಲ್ಲಿ ಶಿಕ್ಷಕಿ ಹೊರಗಿದ್ದ ಕೆಲಸದಾಕೆಯಲ್ಲಿ ಯಾರೆಂದು ನೋಡುವಂತೆ ಸೂಚಿಸಿದ್ದಾಳೆ. ನೋಡಲು ಹೋದ ಕೆಲಸದಾಕೆಯ ಬಟ್ಟೆ ಎಸೆದು ಆಕೆಯ ಮಾನಭಂಗಕ್ಕೂ ಆರೋಪಿ ಯತ್ನಿಸಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.

ಬೈಕ್ ಗುರುತಿನ ಆಧಾರದಲ್ಲಿ ಬೊಳಂತೂರು ಆಸುಪಾಸಿನ ಇನ್‌ಫೋಸಿಸ್ ಉದ್ಯೋಗಿಯಾಗಿರುವ ಅದ್ದು ಯಾನೆ ಅಬ್ದುಲ್ ನೌಶಾದ್ (24), ಗೂಳಿ ಶಾಫಿ ಯಾನೆ ಮಹಮ್ಮದ್ ಶಾಫಿ (30), ಉನೈಸ್ ಮದಕ (25) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಗೂಳಿ ಶಾಫಿ ಯಾನೆ ಮಹಮ್ಮದ್ ಶಾಫಿ (30) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉಳಿದಿಬ್ಬರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Write A Comment