ಕನ್ನಡ ವಾರ್ತೆಗಳು

ಆರು ಪೆಟ್ರೋಲ್ ಬಾಂಬ್ ಸಹಿತ ನಾಲ್ಕು ಆರೋಪಿಗಳ ಬಂಧನ.

Pinterest LinkedIn Tumblr

petorl_bom_photo

ಮಂಗಳೂರು,ಮಾ.03 : ಪೆಟ್ರೋಲ್ ಬಾಂಬ್ ಎಸೆದು ಗಲಭೆ ಸೃಷ್ಟಿಸಲು ಹೊಂಚುಹಾಕಿದ್ದ ನಾಲ್ವರ ತಂಡವನ್ನು ಸಿಸಿಬಿ ಪೊಲೀಸರು ಆರು ಪೆಟ್ರೋಲ್ ಬಾಂಬ್ ಸಹಿತ ಬಂಧಿಸಿ, ಉಳ್ಳಾಲ ಪೊಲೀಸರಿಗೆ ಹಸ್ತಾಂತರಿ ಸಿದ್ದಾರೆ.

ಬಂಧಿತರನ್ನು ಕೆ.ಸಿ.ನಗರ ನಿವಾಸಿ ಅಬ್ದುಲ್ ಸತ್ತಾರ್ (45), ತಲಪಾಡಿಯ ನಾಸೀರ್(28) ಮತ್ತು ನಿಯಾಝ್ (26), ದೇವಿನಗರದ ಬಶೀರ್ (27) ಗುರುತಿಸಲಾಗಿದೆ. ಆರೋಪಿಗಳನ್ನು ಕೆ.ಸಿ.ರೋಡು ಮಸೀದಿಯಲ್ಲಿ ನಮಾಜು ಮುಗಿಸಿ ವಾಪಸ್ಸಾಗುತ್ತಿದ್ದ ಸಂದರ್ಭ ಪೊಲೀಸರು ಬಂಧಿಸಿದ್ದಾರೆ. ಪೆಟ್ರೋಲ್ ಸಾಗಾಟ ಮಾಡುತ್ತಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ತಲಪಾಡಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಕೆ.ಸಿ.ರೋಡು ಜಂಕ್ಷನ್ನಿನಲ್ಲಿ ಸಿಂಗಾರ ಮಾಡಲು ಹೊರಟಿದ್ದ ತಂಡಕ್ಕೆ ಗುಂಪೊಂದು ಕಲ್ಲು, ಬಾಟಲಿಗಳನ್ನು ಎಸೆದ ಪರಿಣಾಮ ಗಲಾಟೆ ನಡೆದಿತ್ತು. ನಂತರದ ಬೆಳವಣಿಗೆಯಲ್ಲಿ ಮತ್ತೆ ಕೆ.ಸಿನಗರ ಸಮೀಪ ಹಿಂದು ಸಮಾಜೋತ್ಸವ ಮತ್ತು ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ತೆರಳುವವರ ಮೇಲೆ ಪೆಟ್ರೋಲ್ ಬಾಂಬೆಸೆದು ಗಲಭೆ ನಡೆಸುವ ಹುನ್ನಾರವನ್ನು ತಂಡ ರೂಪಿಸಿತ್ತೆನ್ನಲಾಗಿದೆ.

ಆರೋಪಿಗಳೆಲ್ಲರೂ ಸಂಘಟನೆಯೊಂದರ ಸದಸ್ಯರಾಗಿದ್ದು, ಪ್ರಮುಖ ಅಬ್ದುಲ್ ಸತ್ತಾರ್ ಬಂದರಿನಲ್ಲಿರುವ ಸಂಘಟನೆ ಕಚೇರಿಯಲ್ಲಿ ಕಾರ್ಯನಿರ್ವಹಿಸುವವ ನಾಗಿದ್ದಾನೆ. ನಿಯಾಝ್ ಎಂಬಾತ ಪದವೀಧರನಾಗಿದ್ದು, ತಾಂತ್ರಿಕವಾಗಿ ಬಹಳ ಜ್ಞಾನವನ್ನು ಪಡೆದುಕೊಂಡವನಾಗಿದ್ದಾನೆ.  ಆರೋಪಿಗಳೆಲ್ಲರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸುವ ಕುರಿತು ತಿಳಿದುಬಂದಿದೆ.

ಈ ಭಾಗದಲ್ಲಿ ಹಿಂದು-ಮುಸ್ಲಿಮರು ಅನ್ಯೋನ್ಯತೆಯಿಂದಿದ್ದರೂ, ದುಷ್ಕರ್ಮಿಗಳು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಕಿಡಿಗೇಡಿಗಳ ಕೃತ್ಯ ಕೆ.ಸಿ.ರೋಡು ಸಮೀಪದ ಮಸೀದಿ ಆಡಳಿತ ಮಂಡಳಿಯೂ ವಿರೋಧಿಸಿದೆ. ಶಾಂತಿಯುತವಾಗಿ ಇರುವ ಪ್ರದೇಶದಲ್ಲಿ ವಿನಾಕಾರಣ ಗಲಾಟೆ ಸೃಷ್ಟಿಸಿ ಅದರ ಲಾಭವನ್ನು ಪಡೆಯುವ ಇಂತಹ ದುಷ್ಕರ್ಮಿಗಳು ಸಮಾಜಕ್ಕೆ ಕಂಟಕ, ಪೊಲೀಸರ ಕಾರ್ಯ ವೈಖರಿಯಿಂದ ಸ್ಥಳದಲ್ಲಿ ನಡೆಯುವ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

Write A Comment