ಕನ್ನಡ ವಾರ್ತೆಗಳು

ಬ್ರಹ್ಮಾವರ: ಅನಾರೋಗ್ಯದಿಂದ ಜಿಗುಪ್ಸೆಗೊಂಡು ಪೊಲೀಸ್ ಪೇದೆ ನೇಣಿಗೆ ಶರಣು

Pinterest LinkedIn Tumblr

Barhmvara_Police_Arun

ಉಡುಪಿ: ಬಡತನದ ಕುಟುಂಬ ಒಂದೆಡೆ, ಇಡೀ ಮನೆಯ ನಿರ್ವಹಣೆ ಇನ್ನೊಂದೆಡೆಯಾದರೇ ತನ್ನ ಅನಾರೋಗ್ಯ ನಿತ್ಯ ತನ್ನ ಬದುಕನ್ನು ಹೈರಾಣಾಗಿಸಿತ್ತು. ಅಂತೂ ಇಂತೂ…ಕೆಲ ಸಮಯವನ್ನು ಪೊಲೀಸು ಇಲಾಖೆ ಸೇವೆಯಲ್ಲಿ ಕಳೆದರು. ಆದರೇ ಈ ಮೂರು ತಿಂಗಳ ಹಿಂದೆ ಉಲ್ಬಣಿಸಿದ ಮೂಲವ್ಯಾದಿ ರೋಗದಿಂದ ಮಾನಸಿಕವಾಗಿ ಜಿಗುಪ್ಸೆಗೊಂಡ ಪೊಲೀಸು ಪೇದೆಯೋರ್ವರು ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬ್ರಹ್ಮಾವರ ವೃತ್ತನಿರೀಕ್ಷಕರ ಕಚೇರಿಯ ವಾಹನದಲ್ಲಿ ಚಾಲಕರಾದ ಮೂಲತಃ ಬಾರ್ಕೂರಿನ ಹೊಸಾಳ ಸಮೀಪದ ನಾಗರಮಠ ನಿವಾಸಿ ಅರುಣಕುಮಾರ್ (36) ಅವರೇ ನೇಣಿಗೆ ಶರಣಾದವರು. ಇವರು ಬ್ರಹ್ಮಾವರ ವೃತ್ತನಿರೀಕ್ಷಕರ ಕಚೇರಿಯ ಜೀಪು ಚಾಲಕರಾಗಿ ಕೆಲ ವರ್ಷಗಳಿಂದ ಕಾರ್ಯ ಮಾಡುತ್ತಿದ್ದರು.

ಘಟನೆ ವಿವರ: ಮೃತ ಅರುಣ್ ಕಳೆದ ಕೆಲವು ತಿಂಗಳುಗಳಿಂದ ಮೂಲವ್ಯಾಧಿ ರೋಗದಿಂದ ಚಿಕಿತ್ಸೆ ಪಡೆದು ಗುಣಮುಖವಾಗದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು. ಈ ಹಿನ್ನೆಲೆಯಲಲಿ ಕಳೆದ ಮೂರು ತಿಂಗಳಿನಿಂದ ರಜೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಅವರು ಅನಾರೋಗ್ಯ ಪೀಡಿತರಾಗಿದ್ದ ತಂದೆ, ಗ್ರಹಿಣಿ ತಾಯಿ, ಓರ್ವ ಸಹೋದರಿ ಹಾಗೂ ಸಹೋದರಿಯ ಪತಿಯನ್ನು ಅಗಲಿದ್ದಾರೆ. ಅವಿವಾಹಿತರಾಗಿದ್ದ ಇವರು ಇಡೀ ಕುಟುಂಬದ ನಿರ್ವಹಣೆಯ ಜೊತೆಗೆ ತನ್ನ ಅನಾರೋಗ್ಯದ ಬಾರೀ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ..

ಆತ್ಮಹತ್ಯೆ ಮಾಡಿಕೊಂಡ ಅರುಣ್ ನಿವಾಸಕ್ಕೆ ಉಡುಪಿ ಎಸ್ಪಿ ಅಣ್ಣಾಮಲೈ, ಎ.ಎಸ್ಪಿ ಸಂತೋಷ್ ಕುಮಾರ್, ಬ್ರಹ್ಮಾವರ ಪೊಲೀಸ್ ವೃತ್ತನಿರೀಕ್ಷಕ ಅರುಣ್ ಕುಮಾರ್ ಮೊದಲಾದವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

Write A Comment