ಮಂಗಳೂರು,ಮಾರ್ಚ್.02: ಪಿಲಿಕುಳ ನಿಸರ್ಗಧಾಮದಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡೆಮಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2015 ಕಾರ್ಯಕ್ರಮವನ್ನು‘ರಾಷ್ಟ್ರಕಟ್ಟುವಲ್ಲಿ ವಿಜ್ಞಾನ’ ಎಂಬ ಘೋಷವಾಕ್ಯ ದೊಂದಿಗೆ ಆಯೋಜಿಸಲಾಗಿತ್ತು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡೆಮಿ, ಬೆಂಗಳೂರು ಇವರು ಕಾರ್ಯಕ್ರಮದ ಪ್ರಾಯೋಜಕತ್ವವಹಿಸಿದ್ದರು.ಇದರ ಅಂಗವಾಗಿ ಜಿಲ್ಲೆಯ ಆಯ್ದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಮತ್ತು ಉಪನ್ಯಾಸ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ವಿಜ್ಞಾನಿಗಳಾದ ಶ್ರೀ ಎಚ್.ಎನ್. ಸುರೇಶಕುಮಾರ್ ಉದ್ಘಾಟಸಿದರು. ತಮ್ಮಉದ್ಘಾಟನಾ ಮಾತುಗಳಲ್ಲಿ ಅವರು ವಿಜ್ಞಾನವು ರಾಷ್ಟ್ರವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ತಮ್ಮ ಸುತ್ತಲಿನ ವಿದ್ಯಾಮಾನಗಳನ್ನು ಗಮನಿಸಿ ಪ್ರಶ್ನೆಗಳು ಕೇಳಿಕೊಂಡು ಸಂಶೋಧನೆಯತ್ತ ಗಮನಹರಿಸಿದಲ್ಲಿ ರಾಷ್ಟ್ರವು ಅಭಿವೃದ್ಧಿಯಾಗುತ್ತದೆ ಎಂದರು.ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕಡಾ| ಕೆ.ವಿ. ರಾವ್‌ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಕ್ಯುರೇಟರ್ ಶ್ರೀ ಜಗನ್ನಾಥ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶ್ರೀ ಸುಧಾಕರ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.
ನಂತರ ವಿದ್ಯಾರ್ಥಿಗಳಿಗೆಕೇಂದ್ರ ವಿಷಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ, ಪ್ರಬಂಧ, ಪೈಂಟಿಂಗ್ ಸ್ಪರ್ಧೆಗಳನ್ನು ನಡೆಸಲಾಯಿತು.
ವಿಜೇತ ವಿದ್ಯಾರ್ಥಿಗಳು : ರಸಪ್ರಶ್ನೆ- ದೀಷ್ಣು, ಕಿಟ್ಟೆಲ್ ಮೆಮೋರಿಯಲ್ ಪ್ರೌಢ ಶಾಲೆ, ಗೋರಿಗುಡ್ಡ (ಪ್ರಥಮ) ವೃಂದಾ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ (ದ್ವಿತೀಯ) ವಿಜಯಕುಮಾರಎಸ್.ಕೆ., ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆ, ಮೂಡಬಿದಿರೆ (ತೃತೀಯ).
ಪ್ರಬಂಧ- ಸುಷ್ಮಾ ಜಿ., ವಿದ್ಯಾಬೋಧಿನಿ ಪ್ರೌಢ ಶಾಲೆ, ಬಾಳಿಲ (ಪ್ರಥಮ) ದೇವಿ ಮುರಳಿಕೃಷ್ಣ, ವಿವೇಕಾನಂದಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಪುತ್ತೂರು (ದ್ವಿತೀಯ) ಅಶ್ವಿನಿ ಕೆ., ಸೇಕ್ರೆಡ್ ಹಾರ್ಟ್ಸ್ ಪ್ರೌಢ ಶಾಲೆ, ಕುಲಶೇಖರ (ತೃತೀಯ)
ಪೈಂಟಿಂಗ್– ಸುಜಿತ್ ಕೆ.ವಿ.,ವಿದ್ಯಾಬೋಧಿನಿ ಪ್ರೌಢ ಶಾಲೆ, ಬಾಳಿಲ (ಪ್ರಥಮ), ಶಕೀಲ್, ಸೇಕ್ರೆಡ್‌ಹಾರ್ಟ್ಸ್ ಪ್ರೌಢ ಶಾಲೆ, ಕುಲಶೇಖರ (ದ್ವಿತೀಯ), ಮಯೂರ್‌ಅಂಬೆಕಲ್ಲು, ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆ, ಮೂಡಬಿದಿರೆ (ತೃತೀಯ).
ಕಾರ್ಯಕ್ರಮದ ಅಂಗವಾಗಿ ಶ್ರೀ ಎಚ್.ಎನ್. ಸುರೇಶ ಕುಮಾರ್ ರವರು ಅಂಗಳದಿಂದ ಮಂಗಳದವರೆಗೆ ಕುರಿತು ಉಪನ್ಯಾಸ ನೀಡಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಇಸ್ರೋದ ಪಾತ್ರ ಕುರಿತು ಚರ್ಚಿಸಿದರು. ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು.
ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಶ್ರೀ ಸುರೇಶ ಕುಮಾರ್‌ರವರು ಮಾತನಾಡಿ ಇಂತಹ ಮನೋಭಾವ ಉತ್ತಮ ವಿಜ್ಞಾನಿಗಳನ್ನು ರೂಪಿಸುತ್ತದೆ ಎಂದರು.ಶ್ರೀ ರಘುನಾಥ ಭಟ್ ವಂದಿಸಿದರು.