ಕನ್ನಡ ವಾರ್ತೆಗಳು

ಉಡುಪಿ; ಎಚ್1ಎನ್1, ಐವರು ಸೋಂಕಿತರು ಆಸ್ಪತ್ರೆಗೆ

Pinterest LinkedIn Tumblr

H1N1

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಐವರು ಎಚ್1ಎನ್1 ಸೋಂಕಿತರು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಬ್ಬ ಸೋಂಕಿತ ಐಸಿಯುನಲ್ಲಿದ್ದರೆ, ಉಳಿದ 5 ಮಂದಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಬ್ಬರು ಮಂಗಳವಾರ ದಾಖಲಾಗಿದ್ದರು. ಉಡುಪಿ ತಾಲೂಕಿನಿಂದ 12, ಕಾರ್ಕಳದಿಂದ 2, ಕುಂದಾಪುರದಿಂದ 5 ಮಂದಿ ಈ ತನಕ ಎಚ್1ಎನ್1 ಸೋಂಕಿತರಾಗಿದ್ದು 13ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಈ ತನಕ 104 ಮಾದರಿ ಪರೀಕ್ಷೆ ನಡೆಸಲಾಗಿದೆ. ಔಷಧ ಸಾಕಷ್ಟಿದೆ, ಕಳೆದೆರಡು ತಿಂಗಳಲ್ಲಿ ಎಚ್1ಎನ್1ಗೆ ಸಂಬಂಧಿಸಿ ಉಡುಪಿ ಜಿಲ್ಲೆಯ ವ್ಯಕ್ತಿಗಳ ಯಾವುದೇ ಸಂಭವಿಸಿಲ್ಲ.

Write A Comment