ಕನ್ನಡ ವಾರ್ತೆಗಳು

ಕೇರಳದ ಬಾನಂಗಳದಲ್ಲಿ ಅಗ್ನಿ ಚೆಂಡು ಪ್ರತ್ಯಕ್ಷ -ಜನತೆಯಲ್ಲಿ ವಿಸ್ಮಯ, ಅಚ್ಚರಿ, ಕೌತುಕ ಮತ್ತು ಭೀತಿ ಸೃಷ್ಟಿ – ವಿವಿಧೆಡೆ ಲಘುಭೂಕಂಪ, ಮಳೆ,

Pinterest LinkedIn Tumblr

Kerala_benki_chendu

ಕಾಸರಗೋಡು  : ಶುಕ್ರವಾರ ರಾತ್ರಿ ಕಾಸರಗೋಡು ಸೇರಿದಂತೆ ಕೇರಳದ ಹಲವೆಡೆ ಬಾನಂಗಳದಲ್ಲಿ ವಿಸ್ಮಯ ಮೂಡಿಸಿದ್ದು, ಅಗ್ನಿ ಚೆಂಡು ಪ್ರತ್ಯಕ್ಷ ಗೊಂಡು ಭೂಮಿಯತ್ತ ಪತನಗೊಂಡಿದ್ದು ಜನತೆಯಲ್ಲಿ ಕೌತುಕ ಮತ್ತು ಭೀತಿ ಸೃಷ್ಟಿಸಿತು.

ಶುಕ್ರವಾರ ರಾತ್ರಿ 10:30ಕ್ಕೆ ಈ ಘಟನೆ ನಡೆದಿದೆ. ಆಕಾಶದಲ್ಲಿ ಬೆಂಕಿಯ ಜ್ವಾಲೆಗಳು ಪ್ರತ್ಯಕ್ಷಗೊಂಡು ಭೂಮಿಗೆ ಉದುರಿದೆ. ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು, ಕಿಯೂರು, ಚೆಂಗಳ, ಪೆರಿಯ, ಕಾಲಿಯಡ್ಕ ಮೊದಲಾದ ಸ್ಥಳಗಳು ಈ ಅಪೂರ್ವ ವಿಸ್ಮಯಕ್ಕೆ ಸಾಕ್ಷಿಯಾಗಿದೆ.

ಬೆಂಕಿಯ ಚೆಂಡು ಭೂಮಿಗೆ ಬೀಳುತ್ತಿರುವುದನ್ನು ಕೆಲವರು ಗಮನಿಸಿದ್ದು, ಇದು ಮಾತ್ರವಲ್ಲ ಎರ್ನಾಕುಲಂ, ಕೊಟ್ಟಾಯಂ, ಇಡುಕ್ಕಿ, ಪಾಲಕ್ಕಾಡ್, ಕೊಝಿಕ್ಕೋಡು ಜಿಲ್ಲೆಗಳಲ್ಲಿ ಗೋಚರಿಸಿದ್ದು, ಹಲವೆಡೆ ಗುಡುಗು ಸಹಿತ ಮಳೆ, ಲಘು ಭೂಕಂಪ ಸಂಭವಿಸಿದೆ.

ಈ ನಡುವೆ ಕೇರಳದ ಪರವೂರಿನಲ್ಲಿ ಬೆಂಕಿ ಚೆಂಡು ನೆಲಕ್ಕಪ್ಪಳಿಸಿದ 4 ಎಕರೆಯಷ್ಟು ಸ್ಥಳವು ಅಗ್ನಿಗಾಹುತಿಯಾಗಿರುವುದು ಇಂದು ಮಧ್ಯಾಹ್ನ ಪತ್ತೆಯಾಗಿದೆ. ಉಲ್ಕಾಪಾತ ಅಥವಾ ರಾಕೆಟ್‌ನ ಅವಶೇಷಗಳಾಗಿರಬಹುದು ಎಂದು ಹವಾಮಾನ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

Write A Comment