ಕನ್ನಡ ವಾರ್ತೆಗಳು

ರೋಗಿಗಳ ಸ್ನೇಹಿ ಆಸ್ಪತ್ರೆ ಎಂದು ಪ್ರಶಸ್ತಿ ಪಡೆದ ಎ.ಜೆ. ಆಸ್ಪತ್ರೆ

Pinterest LinkedIn Tumblr

aj_hospitl_ward_photo

ಮಂಗಳೂರು,ಫೆ.28: ಭಾರತದ ಆರೋಗ್ಯ ಸೇವಾ ಸಂಸ್ಥೆಗಳ ಸಂಘಟನೆಯಾಗಿದ್ದು, ಭಾರತದಾದ್ಯಂತ ಸಾವಿರಾರು ಆರೋಗ್ಯ ಸೇವಾ ಸಂಸ್ಥೆಗಳನ್ನು ಸದಸ್ಯರನ್ನಾಗಿಸಿದೆ. ಆರೋಗ್ಯ ಸೇವಾ ಸಂಸ್ಥೆಗಳು ತಮ್ಮ ಸೇವೆಯ ಗುಣಮಟ್ಟವನ್ನು ಪರೀಕ್ಷಿಸಿ, ಅದನ್ನು ಕಾಯ್ದುಕೊಳ್ಳುವಲ್ಲಿ ಎನ್.ಎ.ಬಿ.ಎಚ್. (ನ್ಯಾಶನಲ್ ಆಕ್ರೇಡಿಶನ್ ಬೋರ್ಡ್ ಓಫ್ ಹೋಸ್ಪಿಟಲ್ಸ್ ಆಂಡ್ ಹೆಲ್ತ್‌ಕೇರ್ ಪ್ರೊವೈಡರ್‌ಸ್) ನೊಂದಿಗೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಅತ್ಯುತ್ತಮ ಆರೋಗ್ಯ ಸೇವಾ ಕ್ಷಮತೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಅನೇಕ ವಾರ್ಷಿಕ ಸಾಧನಾ ಪ್ರಶಸ್ತಿಗಳನ್ನು ಪರಿಚಯಿಸಿದೆ.

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಎರಡನೇ ಜಾಗತಿಕ ಸಮ್ಮೇಳನದಲ್ಲಿ ರೋಗಿಗಳ ಸ್ನೇಹಿ ಆಸ್ಪತ್ರೆ ಎಂಬ ಪ್ರಶಸ್ತಿಯನ್ನು ಆಂದ್ರ ಮತ್ತು ತೆಲಂಗಾಣದ ಗವರ್ನರ್‌ರಾದ ಶ್ರೀಯುತ ಇ.ಎಸ್.ಎಲ್ ನರಸಿಂಹನ್‌ರವರಿಂದ ಪಡೆದುಕೊಂಡಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭವು ಹೈದರಾಬಾದಿನ ಮ್ಯಾರಿಯೊಟ್ ಹೋಟೆಲ್ ಮತ್ತು ಕನ್ವೆನ್ಶನ್ ಸೆಂಟರಿನಲ್ಲಿ ಜರುಗಿತು. ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಪ್ರಶಾಂತ್ ಮಾರ್ಲರವರು ಪ್ರಶಸ್ತಿಯನ್ನು ಸ್ವೀಕರಿಸಿದರು.

Write A Comment