ಮಂಗಳೂರು,ಫೆ.28: ಸಮಾಜದಲ್ಲಿ ಶಾಂತಿ, ಕಾನೂನು ಕೈಗೆತ್ತಿಕೊಳ್ಳುವವರನ್ನು ಹಾಗೂ ನೈಜ ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರ ಜಾತಿ, ಧರ್ಮ, ಭಾಷೆ, ಪ್ರಭಾವ, ಶ್ರೀಮಂತಿಕೆ ಯಾವುದನ್ನೂ ಪರಿಗಣಿಸದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಜಿಲ್ಲಾಡಳಿ ಮತ್ತು ಪೊಲೀಸರಿಗೆ ಸೂಚಿಸಿದರು. ಮಾ.1ರಂದು ಮಂಗಳೂರಿನಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದ ಪೂರ್ವಭಾವಿ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಅವರು ಎಷ್ಟು ದೊಡ್ಡವರಾದರೂ ಕಾನೂನು ಕ್ರಮ ಕೈಗೊಳ್ಳಬೇಕು. ಅದಕ್ಕೆ ಯಾರೂ ಕೂಡ ಅಕಾರಿಗಳ ಮೇಲೆ ಒತ್ತಡ ತರುವುದಕ್ಕೆ ಮುಂದಾಗಬಾರದು ಎಂದರು ಅವರು ಹೇಳಿದರು. ಹಿಂದೂ ಸಮಾಜೋತ್ಸವ ಅತ್ಯಂತ ಶಾಂತಿಯುತವಾಗಿ ನಡೆಯಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತಪಡಿಸಿದರು.
ಆರಂಭದಲ್ಲಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಈ ಹಿಂದೆ ಇಂತಹ ಕಾರ್ಯಕ್ರಮ ನಡೆದಾಗ ಸಾಮರಸ್ಯಕ್ಕೆ ತೊಂದರೆ ಆಗಿದ್ದೂ ಇದೆ. ಈ ಹಿನ್ನೆಲೆಯಿಂದ ಜಿಲ್ಲೆಯ ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಶಾಂತಿ ಸಭೆ ಆಯೋಜಿಸಲಾಗಿದೆ. ಅನಪೇಕ್ಷಿತ ಘಟನೆಗಳು ಸಂಭವಿಸಿದಾಗ ಅಮಾಯಕರಿಗೆ ತೊಂದರೆ ಆಗುತ್ತದೆ. ಈಗಾಗಲೇ ರಾಜ್ಯದಿಂದ ಎಡಿಜಿಪಿ ಬಂದು ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ನಡೆಸಿದ್ದಾರೆ. ನಿಗದಿಯಾಗದಂತೆ 5.30ಕ್ಕೆ ಕಾರ್ಯಕ್ರಮ ಮುಗಿಸುವ ಜವಾಬ್ದಾರಿಯನ್ನು ಸಂಘಟಕರು ಮಾಡಬೇಕು ಎಂದರು.
ಸಂಘಟಕರಲ್ಲಿ ಓರ್ವರಾದ ವಿಜಯ ವಿಠಲನಾಥ ಶೆಟ್ಟಿ ಮಾತನಾಡಿ, ಶಾಂತಿಯುತವಾಗಿ ಸಮಾಜೋತ್ಸವ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿದ್ದೇವೆ. ಯಾವುದೇ ಆತಂಕ ಬೇಡ ಎಂದರು. ಸಂಘಟಕರಾದ ಎನ್. ಗಣೇಶ್ ರಾವ್ ಮಾತನಾಡಿ, ಸಂವಿಧಾನದ ತತ್ವದಡಿ, ಕಾನೂನು ಚೌಕಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಯಾವುದೇ ಅಹಿತಕರ ನಡೆದರೆ ಯಾವುದೇ ಪೂರ್ವಾಗ್ರಹ ಇಲ್ಲದೆ ನಿಷ್ಠುರವಾಗಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.
ಜೆ. ಆರ್. ಲೋಬೋ ಮಾತನಾಡಿ, ಪರಸ್ಪರ ವಿಶ್ವಾಸ ಹೆಚ್ಚಿಸಬೇಕು. ಎಲ್ಲ ಧರ್ಮಕ್ಕಿಂತ ಮಾನವೀಯ ಧರ್ಮ ದೊಡ್ಡದು. ಹೊರ ಪ್ರದೇಶದಿಂದಬಂದು ಇಲ್ಲಿ ಶಾಂತಿ ಕದಡಿದರೆ, ಇಲ್ಲಿರುವವರು ತೊಂದರೆ ಅನುಭವಿಸಬೇಕಾಗುತ್ತದೆ. ಇದನ್ನು ಗಮನಿಸಬೇಕು ಎಂದರು. ಮಾಜಿ ಶಾಸಕ ಎನ್. ಯೋಗೀಶ್ ಭಟ್ ಮಾತನಾಡಿ, ಪರಸ್ಪರ ನಂಬಿಕೆ ಆಧಾರದಲ್ಲಿ ಮುಂದೆ ಸಾಗೋಣ ಎಂದರು. ಕೋಡಿಜಾಲ್ ಇಬ್ರಾಹಿಂ ಮಾತನಾಡಿ, ಮತೀಯ ಭಾವನೆ ಕೆರಳಿಸುವುದು ಬೇಡ. ಹೊರ ರಾಜ್ಯದಿಂದ ಬಂದು ಒಳ್ಳೆಯ ವಿಷಯದ ಭಾಷಣ ಮಾಡಲಿ. ಅನ್ಯ ಧರ್ಮೀಯರನ್ನು ದೂಷಿಸುವುದು ಬೇಡ. ಶಾಂತಿಯುತವಾಗಿ ಸಮಾಜೋತ್ಸವ ನಡೆಯಲಿ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ರಹೀಂ ಉಚ್ಚಿಲ್ ಮಾತನಾಡಿ, ಎರಡೂ ಸಮುದಾಯದಲ್ಲೂ ಆಶಾಂತಿ ಉಂಟು ಮಾಡುವವರು ಇದ್ದಾರೆ. ಅಥವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಿ ಎಂದರು. ಯಾವುದೇ ಘಟನೆ ಆದಾಗ ಅಮಾಯಕರನ್ನು ಬಂಸುವ ಬದಲು ನೈಜ ಆರೋಪಿಗಳನ್ನು ಬಂಸಬೇಕು ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಲಿ ಹಸನ್ ಹೇಳಿದರು.
ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ, ಹಿಂದೂ ಸಮಾಜೋತ್ಸವದ ಬಗ್ಗೆ ಯಾವುದೇ ಪೂರ್ವಾಗ್ರಹ ಬೇಡ. ಬಹುಸಂಖ್ಯಾತರಾದರೂ ತುಳಿತಕ್ಕೊಳಗಾಗುತ್ತಿರುವ ಹಿಂದೂ ಸಮಾಜದ ಬಗ್ಗೆ ವಿಮರ್ಶೆ ಮಾಡಲು ಉತ್ಸವ ಆಯೋಜಿಸುತ್ತಿದ್ದೇವೆ. ಅತ್ಯಂತ ಶಿಸ್ತು, ಶಾಂತಿ ರೀತಿಯಲ್ಲಿ ಆಯೋಜಿಸಲಾಗಿದೆ ಎಂದರು.
ಮುಸ್ಲಿಂ ಸೆಂಟ್ರಲ್ ಕಮಿಟಿಯ ಮೊಹಮ್ಮ ದ್ ಮಸೂದ್, ನಾವೆಲ್ಲರೂ ಭಾರತೀಯರು, ಪರಸ್ಪರ ಪ್ರೀತಿ, ಪ್ರೇಮ, ವಿಶ್ವಾಸದಿಂದ ಇರುವುದು ಅಗತ್ಯ. ದ್ವೇಷದಿಂದ ಯಾವುದನ್ನೂ ಸಾಸಲು ಸಾಧ್ಯವಿಲ್ಲ. ಸಮಾಜೋತ್ಸವ ಯಶಸ್ವಿಯಾಗಿ ನಡೆಯಲಿ ಎಂದರು.
ಡಿ. ಎಂ.ಅಸ್ಲಂ ಮಾತನಾಡಿ, ಈ ಮೈದಾನವು ಫುಟ್‌ಬಾಲ್‌ಗೆ ಮೀಸಲಿಟ್ಟದ್ದಾಗಿದ್ದು, ಅದಕ್ಕೆ ಮೀಸಲಿಡಬೇಕು. ಇಂತಹ ಯಾವುದೇ ಕಾರ್ಯಕ್ರಮವನ್ನು ನಗರದ ಹೊರ ಪ್ರದೇಶದಲ್ಲಿ ಸ್ಥಳಾವಕಾಶ ಕಲ್ಪಿಸಬೇಕು ಎಂದರು. ಮಾಜಿ ಸಚಿವ ನಾಗರಾಜ ಶೆಟ್ಟಿ ಮಾತನಾಡಿ, ಎಲ್ಲರೂ ಅಂತರಾಳದಿಂದ ಸಹಕಾರ ನೀಡಬೇಕು ಎಂದರು.
ಶಾಸಕ ಮೊಯ್ದೀನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಡಿವೈಎಫ್‌ಐನ ದಯಾನಂದ ಶೆಟ್ಟಿ, ಬಿ. ಕೆ. ಇಮ್ತಿಯಾಜ್, ಸಿಪಿಐಎಂನ ವಸಂತ ಆಚಾರಿ, ನೂಯಿ ಬಾಲಕೃಷ್ಣ ರಾವ್, ಸುರೇಶ್ ಶೆಟ್ಟಿ, ಹಮೀದ್ ಕುದ್ರೋಳಿ, ಮಾಜಿ ಮೇಯರ್ ಅಶ್ರಫ್, ಸಂತೋಷ್ ಬಜಾಲ್, ಅಬ್ಬಾಸ್ ಸಲಹೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಕಾರಿ ತುಳಸಿ ಮದ್ದಿನೇನಿ, ಪೊಲೀಸ್ ಕಮಿಷನರ್ ಎಸ್. ಮುರುಗನ್, ಡಾ. ಎಸ್ಪಿ ಶರಣಪ್ಪ ಉಪಸ್ಥಿತರಿದ್ದರು.