ಕನ್ನಡ ವಾರ್ತೆಗಳು

ಪ್ರದೀಪ್ ಜೈನ್ ಹತ್ಯೆ ಪ್ರಕರಣ: ಭೂಗತ ಪಾತಕಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

abu_salem_photo

ಮುಂಬೈ.ಫೆ.25 : ಉದ್ಯಮಿ ಪ್ರದೀಪ್ ಜೈನ್ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಅಬು ಸಲೇಂಗೆ ಮುಂಬೈ ವಿಶೇಷ ಟಾಡಾ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

1995 ರಲ್ಲಿ ಮುಂಬೈನ ರಿಯಲ್ ಎಸ್ಟೇಟ್ ಉದ್ಯಮಿ ಪ್ರದೀಪ್ ಜೈನ್ ಅವರ ಕೊಲೆ ಆರೋಪದಲ್ಲಿ, ಭಾರತಕ್ಕ ಗಡಿಪಾರಾಗಿರುವ ಅಬು ಸಲೇಂ ಮತ್ತು ಇನ್ನಿತರ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರು ಎಂದು ಕಳೆದ ಸೋಮವಾರ ತೀರ್ಪು ನೀಡಿದ್ದ ಟಾಡಾ ಕೋರ್ಟ್, ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.

ಪ್ರದೀಪ್ ಜೈನ್ ತಮ್ಮ ಬೃಹತ್ ಬಂಗಲೆಯನ್ನು ತೊರೆಯಲು ನಿರಾಕರಿಸಿದ್ದಕ್ಕೆ 1995  ಮಾರ್ಚ್ 7 ರಂದು ಅವರ ಜುಹೂ ಬಂಗಲೆ ಹೊರಗೆ ಗುಂಡಿನ ದಾಳಿಗೆ ಆಹುತಿಯಾಗಿದ್ದರು.
1993 ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ಅಬು ಸೇಲಂನನ್ನು 2005 , ನವೆಂಬರ್ 11 ರಂದು ಪೋರ್ಚುಗಲ್ ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.

Write A Comment