ಕನ್ನಡ ವಾರ್ತೆಗಳು

ರೋಟರಿ ಕ್ಲಬ್‌ವತಿಯಿಂದ ಜಾಗತಿಕ ತಿಳುವಳಿಕಾ ದಿನಾಚರಣೆ ಜಾಥಾ.

Pinterest LinkedIn Tumblr

rotary_club_day

ಮೂಲ್ಕಿ,ಫೆ.24ಆಧುನಿಕತೆಯ ಪ್ರಭಾವ ಇರುವ ಜಾಗತಿಕ ಮಟ್ಟದಲ್ಲಿ ವಿಶ್ವ ಶಾಂತಿ, ಸಮಾನತೆ ಹಾಗೂ ಪರಸ್ಪರ ಸಹಕಾರದ ಧ್ಯೇಯದಲ್ಲಿ ಮುಖ್ಯವಾಹಿನಿಯಾಗಿ ಹೊರಹೊಮ್ಮಿದೆ ಎಂದು ರೋಟರಿಯ ಮಾಜಿ ರಾಜ್ಯಪಾಲ ಎ‌ಎಸ್‌ಎನ್ ಹೆಬ್ಬಾರ್ ಹೇಳಿದರು. ಅವರು ಮೂಲ್ಕಿಯಲ್ಲಿ ಅಂತಾರಾಷ್ಟ್ರೀಯ ರೋಟರಿ ಕ್ಲಬ್‌ನಿಂದ ಉಡುಪಿ ಶಂಕರಪುರದಲ್ಲಿ ನಡೆಯುವ ಜಾಗತಿಕ ತಿಳುವಳಿಕಾ ದಿನಾಚರಣೆಯ ಬಗ್ಗೆ ಪೂರ್ವಬಾವಿಯಾಗಿ ನಡೆಸಲಾಗುವ ಜಾಥಾವನ್ನು ಮೂಲ್ಕಿ ಪೇಟೆಯಲ್ಲಿ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯ ಶಿಕ್ಷಣ ಹಾಗೂ ಸಮುದಾಯ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ರೋಟರಿಯು ಜಾಗತಿಕ ತಿಳುವಳಿಕೆಯ ಮೂಲಕ ದುಶ್ಚಟಗಳ ನಿವಾರಣೆ ಹಾಗೂ ಸ್ವಾವಲಂಭಿ ಬದುಕಿನ ಬಗ್ಗೆ ತರಬೇತಿ ನೀಡುವುದರಲ್ಲಿ ಈ ರ್‍ಯಾಲಿ ಪೂರಕವಾಗಿದೆ ಎಂದರು.ಸನಿಯೋಜಿತ ರಾಜ್ಯಪಾಲ ಡಾ.ಭರತೇಶ್, ಸಹಾಯಕ ರಾಜ್ಯಪಾಲ ನಾಗೇಂದ್ರ, ವಲಯ ಸೇನಾನಿ ಶರತ್ ಶೆಟ್ಟಿ, ಮೂಲ್ಕಿ ರೋಟರಿಯ ವಿಲ್‌ಹೆಲ್ಮ್ ಮಾಬೆನ್, ರಾಜಾ ಪತ್ರಾವೋ, ಎನ್.ಪಿ.ಶೆಟ್ಟಿ, ಮೋಹನ್ ರಾವ್ ಇನ್ನಿತರರು ಹಾಜರಿದ್ದರು.

ಪ್ರಸ್ತುತ ರ್‍ಯಾಲಿ ಮೂಲ್ಕಿಯಿಂದ ಪಡುಬಿದ್ರಿ, ಎರ್ಮಾಳು, ಕಾಪು ಬಸ್ ನಿಲ್ದಾಣದಿಂದ ಉಡುಪಿ ಶಂಕರಪುರ ತಲುಪಲಿದೆ.

_ನರೇಂದ್ರ ಕೆರೆಕಾಡು

Write A Comment