ಕನ್ನಡ ವಾರ್ತೆಗಳು

ಬಾಲಕಿಯರ ನಾಪತ್ತೆ ಪ್ರಕರಣ; ಇಬ್ಬರು ಬಾಲಕಿಯರಲ್ಲಿ ಒಬ್ಬಳು ಮನೆಗೆ, ಇನ್ನೊಬ್ಬಳ ಸುಳಿವಿಲ್ಲ…

Pinterest LinkedIn Tumblr

kannamma_shailini_Missing

ಉಡುಪಿ: ಶಿರ್ವ ಠಾಣಾ ವ್ಯಾಪ್ತಿಯ ಪಾಂಬೂರು ಬಳಿ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರಲ್ಲಿ ಒಬ್ಬಳು ಸೋಮವಾರ ಮುಂಜಾನೆ ವಾಪಸ್ಸಾಗಿದ್ದಾಳೆ.  ಇವಳೊಂದಿಗೆ ನಾಪತ್ತೆಯಾದ ಇನ್ನೊಬ್ಬಳು ಹುಡುಗಿ ಮಾತ್ರ ಈವರೆಗೂ ಪತ್ತೆಯಾಗಿಲ್ಲ.

ಪಾಂಬೂರು ನಿವಾಸಿ ಮುತ್ತುಸ್ವಾಮಿ ಎಂಬವರ ಪುತ್ರಿ ಕನ್ನಮ್ಮ(15), ಕೃಷ್ಣಪ್ಪ ಎಂಬವರ ಪುತ್ರಿ ಶಾಲಿನಿ (15) ಫೆ.17ರಂದು ನಾಪತ್ತೆಯಾಗಿದ್ದರು. ಇದೀಗ ಕನ್ನಮ್ಮ ಮರಳಿ ಮನೆಗೆ ಬಂದಿದ್ದು, ಶಾಲಿನಿಯ ಬಗ್ಗೆ ಇನ್ನೂ ಸುಳಿವು ದೊರೆತ್ತಿಲ್ಲ.

ಫೆ.17ರಂದು ನಮ್ಮನ್ನು ಕಾರಿನಲ್ಲಿ ಕೆಲವರು ಬಲವಂತವಾಗಿ ಕರೆದುಕೊಂಡು ಮೈಸೂರಿಗೆ ಹೋಗಿದ್ದಾರೆ. ಅಲ್ಲಿ ನಮ್ಮನ್ನು ಕೂಡಿ ಹಾಕಿದ್ದರು. ನಾನು ಅಲ್ಲಿಂದ ತಪ್ಪಿಸಿಕೊಂಡು, ಭಿಕ್ಷೆ ಬೇಡಿದ ಹಣದಿಂದ ವಾಪಾಸು ಬಂದಿದ್ದೇನೆ . ಶಾಲಿನಿ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ತಪ್ಪಿಸಿಕೊಂಡು ಬಂದ ಕನ್ನಮ್ಮ ಹೇಳಿದ್ದಾಳೆ.

ಆದರೇ ಆಕೆಯ ಹೇಳಿಕೆ ಮಾತ್ರ ಹಲವು ಗೊಂದಲಗಳನ್ನು ಸ್ರಷ್ಟಿಸುತ್ತಿದ್ದು ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿ ಇನ್ನೊಬ್ಬಾಕೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Write A Comment