ಕನ್ನಡ ವಾರ್ತೆಗಳು

ಮೂರುಕಟ್ಟ ಬಲ್ಯ ರಸ್ತೆಗೆ ಚಾಲನೆ

Pinterest LinkedIn Tumblr

Murukatte_road_repar_1

ಉಳ್ಳಾಲ, ಫೆ.20: ಕೋಟೆಕಾರು ಮತ್ತು ಸೋಮೆಶ್ವರ ಗ್ರಾಮ ಪಂಚಾಯತ್ ಸಂಪರ್ಕ ರಸ್ತೆ ಈ ಎರಡು ಗ್ರಾಮಗಳ ಕೊಂಡಿಗಳಲಿದ್ದಂತಹ ಊರು ಕುಂಪಲ. ರಸ್ತೆ ಡಾಮರೀಕಾರಣ ಮಾಡಿದರೆ ಒಂದೇ ಮಳೆಗೆ ಕೊಚ್ಚಿಹೋಗುವ ಕಾರಣ ಶಾಶ್ವತ ರಸ್ತೆಯ ಉದ್ದೇಶದಿಂದ ಕಾಂಕ್ರಿಟಿಕಾರಣ ಮಾಡಲು ಪ್ರಯತ್ನಸಿ ರಸ್ತೆಯ ಕಾಮಗಾರಿ ಸಂಪೂರ್ಣವಾಗಿ ಮುಗಿಸಿ ಗುರುವಾರ ಚಾಲನೆ ನೀಡಿದ್ದರು.

ವಿಷೇಶವಾಗಿ ಇಲ್ಲಿಯ ಜನರ ಪ್ರೋತ್ಸಾಹದಿಂದ ಇಂತಹ ಅರ್ಥಪೂರ್ಣ ಕೆಲಸಮಾಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ನಾನು ಪ್ರಮಾಣಿಕವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೆನೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಅವರು ಕೋಟೆಕಾರು ಗ್ರಾಮದ ಮೂರುಕಟ್ಟ ಬಲ್ಯ ರಸ್ತೆ ಚಾಲನೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ವಹಿಸಿ ಮಾತನಾಡಿದರು.

Murukatte_road_repar_2

ಕೋಟೆಕಾರು ಗ್ರಾಮದ ಮೂರುಕಟ್ಟ ಬಲ್ಯ ರಸ್ತೆಗೆ ಕೋಟೆಕಾರು ಗ್ರಾಮ ಪಂಚಾಯತ್ ಸದಸ್ಯೆ ಪುಷ್ಪಲತ ಡಿ, ಶೆಟ್ಟಿ, ಅನಿಲ್ ಬಗಂಬಿಲ, ಚಂದ್ರಹಾಸ್ ಬಿ.ಜೆ, ಕೇಶವ್‌ದಾಸ್, ಶ್ರೀನಿವಾಸ್, ಅಶೋಕ್ ಕುಮರ್ ರಾವ್, ದನಂಜಯ, ರಾಜೇಶ್, ಚಂದ್ರಹಾಸ್ ಮೂರುಕಟ್ಟ, ಕಿಶೋರ್ ಡಿ.ಕೆ, ಉಷಾದನಂಜಯ, ಮುಂತಾದವರು ಉಪಸ್ಥತರಿದ್ದರು.

Write A Comment