ಕನ್ನಡ ವಾರ್ತೆಗಳು

ಉನ್ನತ ತಾಂತ್ರಿಕ ತರಬೇತಿಗಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಸಿಸ್ಟೆಂಟ್ ಕಂಟ್ರೋಲರ್ ಮಹಮ್ಮದ್ ಅನ್ವರ್ ಜಪಾನ್ ದೇಶಕ್ಕೆ

Pinterest LinkedIn Tumblr

ಕುಂದಾಪುರ: ಕರ್ನಾಟಕ ಸರ್ಕಾರದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಸಿಸ್ಟೆಂಟ್ ಕಂಟ್ರೋಲರ್, ಮಹಮ್ಮದ್ ಅನ್ವರ್ ಅವರನ್ನು ಹೆಚ್ಚಿನ ತಾಂತ್ರಿಕ ತರಬೇತಿಗಾಗಿ ಜಪಾನ್ ದೇಶಕ್ಕೆ ಕಳುಹಿಸಲು ಸರಕಾರ ನಿರ್ದೇಶಿಸಿದ್ದು ದಿನಾಂಕ 19 ರಂದು ಅವರು ನವದೆಹಲಿ ಮೂಲಕ ತೆರಳಿದ್ದಾರೆ.
ಫೆಬ್ರವರಿ 22 ರಿಂದ ಮಾರ್ಚ್ 14 ರ ತನಕ “ಸೋಷಿಯಲ್ ಎಂಡ್ ಇಂಡಸ್ಟ್ರಿಯಲ್ ಇನ್‌ಫ್ರಾಶಕ್ಚರ್ ಇನ್ ಲೀಗಲ್ ಮೆಟ್ರೋಲಜಿ ಇನ್ ಇಂಡಿಯಾ” ಎಂಬ ತಾಂತ್ರಿಕ ತರಬೇತಿ ಅಧ್ಯಯನ ನಡೆಯಲಿದೆ.

anvar

ಕುಂದಾಪುರ ಜೇಸಿಸ್‌ನ ಅಧ್ಯಕ್ಷರಾಗಿ, ಓರ್ವ ರಾಷ್ಟ್ರೀಯ ವ್ಯಕ್ತಿ ವಿಕಸನ ತರಬೇತುದಾರರಾಗಿರುವ ’ಅನ್ವರ್’ ಅವರು ಜೆಸಿಯಲ್ಲಿ ’ತರಬೇತುದಾರರ ತರಬೇತುದಾರ’ ಎಂದ ಗುರುತಿಸಿ ಗೌರವಿಸಲ್ಪಟ್ಟಿದ್ದಾರೆ. ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು.
ಡಿಪ್ಲೋಮಾ ಇಂಜಿನಿಯರ್ ಆಗಿ ಸರಕಾರ ಸೇವೆಗೆ ಸೇರಿದ ಇವರು ಅನಂತರ ಕನೂನು ಪದವಿ ಅಲ್ಲದೆ ಎಂ.ಎ, ಎಂ.ಎಸ್.ಸಿ, ಎಂ.ಬಿ.ಎ, ಸ್ನಾತಕೋತ್ತರ ಪದವಿ, ಮೌಲ್ಯಯುತ ಶಿಕ್ಷಣ, ಆಧ್ಯಾತ್ಮಿಕತೆ ಕುರಿತು ಪಿ.ಜಿ ಡಿಪ್ಲೋಮಾ ಸಹ ಮಾಡಿದ್ದಾರೆ.

ಉತ್ತಮ ವಾಗ್ಮಿ, ಚಿಂತಕ, ಪರಿಣಾಮಕಾರಿ ತರಬೇತುದಾರ ಅನಿಸಿಕೊಂಡಿರುವ ಇವರು ದೂರದರ್ಶನದ ಚಾನೆಲ್‌ಗಳು ಆಕಾಶವಾಣಿ ಸಹಿತ ಹಲವು ಮಾಧ್ಯಮಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ್ದಾರೆ.

ಕುಂದಾಪುರದಲ್ಲೇ, ಸರಕಾರಿ ಸೇವೆಯಲ್ಲಿದ್ದು ಕುಂದಾಪುರ ಹುಡುಗಿಯನ್ನೆ ಮದುವೆಯಾಗಿ ಕುಂದಾಪುರದವರೇ ಅನಿಸಿಕೊಂಡಿರುವ ಮಹಮ್ಮದ್ ಅನ್ವರ್ ಈಗ ಬೆಂಗಳೂರಿನ ಮುಖ್ಯ ಕಛೇರಿಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ.

Write A Comment