ಮಂಗಳೂರು, ಫೆ. 18 : ಕಾಪುಚಿನ್ ಸಂಸ್ಥೆಯ ಧರ್ಮಗುರುಗಳು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸೇವೆಗೆ ಹೆಸರಾಗಿದ್ದು, ಇದರಿಂದ ಅವರು ಜನಪ್ರಿಯರಾಗಿದ್ದಾರೆ. ಅವರ ಸೇವಾ ಪರಂಪರೆ ಮುಂದುವರಿಯಲ್ಲಿ ಎಂದು ಮಂಗಳೂರು ಧರ್ಮಪ್ರಾಂತದ ಬಿಷಪ್ ರೈ. ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು. ಕಾಪುಚಿನ್ ಸಂಸ್ಥೆಯ ಧರ್ಮಗುರುಗಳು ನಗರದ ಜೈಲ್‌ರೋಡ್ ಬಳಿ ನಡೆಸುತ್ತಿರುವ ಸೈಂಟ್ ಆ್ಯನ್ಸ್ ರಾಯರಿಯ ‘ಕ್ವೀನ್ ಆ್ ಏಂಜಲ್ಸ್’ ಪ್ರಾರ್ಥನಾ ಮಂದಿರದ ನವೀಕೃತ ಕಟ್ಟಡದ ಬಲಿಪೂಜೆಯ ನೇತೃತ್ವವನ್ನು ಮಂಗಳವಾರ ವಹಿಸಿ ಅವರು ಆಶೀರ್ವಚನ ನೀಡಿದರು,
ಕಾಪುಚಿನ್ ಮಂದಿರ ಉದ್ಘಾಟಿಸಿದ ಕಾಪುಚಿನ್ ಧರ್ಮ ಗುರುಗಳ ಕರ್ನಾಟಕದ ಹೋಲಿ ಟ್ರಿನಿಟಿ ಪ್ರಾಂತದ ಸುಪೀರಿಯರ್ ಾ.ಡೋಲ್ಫಿ ಜೋಸ್ೆ ಪಾಯ್ಸಿ ದೇವಾಲಯಗಳು ವಿಶ್ವಾಸಿಗಳಿಗೆ ಸ್ಫೂರ್ತಿ, ಶಾಂತಿ ಮತ್ತು ನೆಮ್ಮ್ಮದಿಯನ್ನು ನೀಡುತ್ತವೆ. ಹಾಗಾಗಿ ದೇವರಿಗಾಗಿ ಮಂದಿರವನ್ನು ಎಲ್ಲಾ ಧರ್ಮೀಯರೂ ಕಟ್ಟಿಸುತ್ತಾರೆ. ದೇವಳಗಳಲ್ಲಿ ದೇವರ ಆರಾಧನೆಯ ಜೊತೆಗೆ ಮಾನವತೆಯ ವ್ಯಕ್ತಿತ್ವ ನಿರ್ಮಾಣವಾಗಬೇಕು ಎಂದರು.
ಸೈಂಟ್ ಆ್ಯನ್ಸ್ ಫೆರಾಯರಿಯ ಸುಪೀರಿಯರ್.ಪೀಟರ್ ಸಿಪ್ರಿಯನ್ ಡಿ’ಸೋಜಾ, ಮಂಗಳೂರು ಧರ್ಮಪ್ರಾಂತದ ಪ್ರಧಾನ ಗುರು ಮೊ.ಡೆನ್ನಿಸ್ ಮೊರಾಸ್ ಪ್ರಭು ಮತ್ತಿತರ ಹಲವು ಧರ್ಮಗುರುಗಳು ಬಲಿಪೂಜೆಯಲ್ಲಿ ಸಹಭಾಗಿಗಳಾಗಿದ್ದರು. ಬಲಿ ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜಾ ವಹಿಸಿದ್ದರು. ಡೋಲ್ಫಿ ಜೋಸೆಫ್ ಪಾಯ್ಸಿ ಅತಿಥಿಯಾಗಿದ್ದರು. ಫೆರ್‌ವಿಂಡ್ಸ್ ಜಾಹೀರಾತು ಸಂಸ್ಥೆಯ ನಿರ್ದೇಶಕ ಇ. ಫೆರ್ನಾಂಡಿಸ್, ಮಾರ್ಗರೆಟ್ ರೆಬೆಲ್ಲೊ (ಕಾಪುಚಿನ್ ಗುರುಗಳಿಗೆ ನಿವೇಶನ ದಾನ ಮಾಡಿದ್ದ ದಿ.ಜಾರ್ಜ್ ಲೋಬೊರ ಮೊಮ್ಮಗಳು), ಬ್ಲೋಸಂ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಜೆನಿರ್‌ರ ಕಥಾ ಸಂಕಲನ ‘ವೊಯಿಗಾ ಕುಂಪಾದ್ರಿ’ ಹಾಗೂ ಭಕ್ತಿ ಗೀತೆಗಳ ಸಿ.ಡಿ. ಅನಾವರಣ ನೆರವೇರಿತು. ಸೈಂಟ್ ಆ್ಯನ್ಸ್ ಫೆರಾಯರಿಯಲ್ಲಿ ಈ ಹಿಂದೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ನವೀಕೃತ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸೈಂಟ್ ಆ್ಯನ್ಸ್ ಫೆರಾಯರಿಯ ಸುಪೀರಿಯರ್ ಫೆ.ಪೀಟರ್ ಸಿಪ್ರಿಯನ್ ಡಿಸೋಜ ಸ್ವಾಗತಿಸಿ, ವಂದಿಸಿದರು. ಫೆಡೆರೆಲ್ ಫೆರ್ನಾಂಡಿಸ್ ಮತ್ತು ಶೆರೆಲ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.