ಕನ್ನಡ ವಾರ್ತೆಗಳು

ಮೈನಾರಿಟಿ ಗೈಡ್ ಲೈನ್ಸ್ ಬಿಡುಗಡೆ

Pinterest LinkedIn Tumblr

book_relase_news

ಮಂಗಳೂರು,ಫೆ.16: ಅಖಿಲ ಭಾರತ ಬ್ಯಾರಿ ಪರಿಷತ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಹಿಂದ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಯೂಸುಫ್ ವಕ್ತಾರ್ ರವರು ರಚಿಸಿರುವ “ಮೈನಾರಿಟಿ ಗೈಡ್ ಲೈನ್ಸ್”(ಸ್ಕಾಲರ್ ಶಿಫ್ಸ್) ಪುಸ್ತಕವನ್ನು ದಕ್ಷಿಣ ಕನ್ನಡ ಜಿಲ್ಲಾ ಅಹಿಂದ ಸಂಘಟನೆಯ ಗೌರವಾಧ್ಯಕ್ಷರೂ ದ.ಕ. ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರೂ ಆದ ನವೀನ್ ಚಂದ್ರ ಡಿ. ಸುವರ್ಣರವರು ಬಿಡುಗಡೆಗೊಳಿಸಿದರು.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವ್ಯಾಪ್ತಿಗೊಳಪಟ್ಟ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಬಿ.ಎ ಎಲ್ ಎಲ್.ಬಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು .

ಅಲ್ಪ ಸಂಖ್ಯಾತರ ವಿದ್ಯಾರ್ಥಿವೇತನಗಳ ವಿವರಗಳುಳ್ಳ ಈ ಪುಸ್ತಕದಲ್ಲಿ ಹಿಂದುಳಿದ ಜಾತಿಗಳ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಾತಿ ವಿವರ ಹಾಗೂ ಸ್ಕಾಲರ್ ಶಿಫ್ ವಿವರಗಳನ್ನು ಹೊಂದಿದ್ದು, ಯೂಸುಫ್ ವಕ್ತಾರ್ ರವರ ಈ ಪ್ರಯತ್ನ ಇತರಿಗೂ ಅನುಕರಣೀಯ ಎಂದ ನವೀನ್ ಚಂದ್ರ ಸುವರ್ಣ, ಅಹಿಂದ ವರ್ಗದ ಬಗ್ಗೆ ಸರಕಾರಿ ಸವಲತ್ತುಗಳ ಸಂಪೂರ್ಣ ವಿವರವುಳ್ಳ ಪುಸ್ತಕವನ್ನು ಹೊರತರುವಂತೆ ಸಲಹೆ ಇತ್ತರು.

ಸಮಾರಂಭದಲ್ಲಿ ಅಹಿಂದ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ವಾಸುದೇವ ಬೋಳೂರು, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ, ಕನಾಟಕ ಮುಸ್ಲಿಂ, ಪರಿಷತ್ ಅಧ್ಯಕ್ಷರಾದ ಅಬ್ದುಲ್ ಹಾಜಿ ಹಮೀದ್ ಕಂದಕ್, ಕರ್ನಾಟಕ ಬ್ಯಾರಿ ಅಕಾಡೆಮಿ ಸದಸ್ಯರಾದ ಅಬ್ಬಾಸ್ ಶಿರುಗುಂದ ಮುಖ್ಯ ಅಥಿಗಳಾಗಿ ಭಾಗವಹಿಸಿದ್ದರು.

ಯೂಸುಫ್ ವಕ್ತಾರ್ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೊಲ್ತಮಜಲುರವರು ಕಾರ್ಯಕ್ರಮ ನಿರೂಪಿಸಿದರು. ಎನ್. ಇ ಮೊಹಮ್ಮದ್ ವಂದಿಸಿದರು.

Write A Comment