ಕನ್ನಡ ವಾರ್ತೆಗಳು

ವಾರ್ತಾಭಾರತಿ ಪತ್ರಿಕೆಯ ಹೊಸ ಕಚೇರಿ ಶುಭಾರಂಭ : ಗಣ್ಯರಿಂದ ಶುಭಶಾಯಗಳ ಮಹಾಪೂರ

Pinterest LinkedIn Tumblr

Vartha_Bharati_Office

ಮಂಗಳೂರು,ಫೆ.15: ‘ವಾರ್ತಾಭಾರತಿ’ ಪತ್ರಿಕೆಯ ವಿಶಾಲವಾದ ನೂತನ ಕಚೇರಿಯು ಮಂಗಳೂರಿನ ವೆಲೆನ್ಸಿಯಾ ಸರ್ಕಲ್ ನಲ್ಲಿ ಶನಿವಾರ ಶುಭಾರಂಭಗೊಂಡಿದ್ದು, ನೂತನ ಕಚೇರಿಗೆ ನೂರಾರು ಗಣ್ಯರು, ಹಿತೈಷಿಗಳು, ಅಭಿಮಾನಿ ಓದುಗರು ಭೇಟಿ ನೀಡಿ ಪತ್ರಿಕಾ ಬಳಗದೊಂದಿಗೆ ಬೆರೆತು ಶುಭ ಕೋರಿದರು.

ಪ್ರಮುಖ ರಾಜಕಾರಣಿಗಳು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಓದುಗರು, ಹಿತೈಷಿಗಳು, ಅಭಿಮಾನಿಗಳು, ಪತ್ರಕರ್ತ ಮಿತ್ರರು ಪತ್ರಿಕೆಯ ಕಚೇರಿಗೆ ಆಗಮಿಸಿ ನಗರ ಸುದ್ದಿ ವಿಭಾಗ, ಜಾಹೀರಾತು ಮತ್ತು ಪ್ರಸರಣಾ ವಿಭಾಗ, ಆಡಳಿತ ಹಾಗೂ ಅಕೌಂಟ್ಸ್ ವಿಭಾಗ, ಸಂಪಾದಕೀಯ ವಿಭಾಗಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಗಳನ್ನು ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ ಎ.ಎಸ್.ಪುತ್ತಿಗೆ ಸ್ವಾಗತಿಸಿದರು.

ಪತ್ರಿಕೆ ಕೇವಲ ಕರಾವಳಿ ಭಾಗಕ್ಕೆ ಸೀಮಿತವಾಗಿಲ್ಲ. ತನ್ನ ನಿಷ್ಪಕ್ಷಪಾತ ವರದಿಯಿಂದ ರಾಜ್ಯಾದ್ಯಂತ ಮನೆಮಾತಾಗಿದೆ. ಯಾವುದೇ ಪ್ರಭಾವಕ್ಕೆ ಒಳಗಾಗದೆ ನೈಜ ಸುದ್ದಿಗಳನ್ನು ಓದುಗರಿಗೆ ನೀಡುವ ಮೂಲಕ ಜನರ ಮನ ಗೆದ್ದಿದೆ. ಅಲ್ಪಸಂಖ್ಯಾತರ, ದಲಿತರ, ಹಿಂದುಳಿದ ವರ್ಗದ ಜನರ ಧ್ವನಿಯಾಗಿರುವ ‘ವಾರ್ತಾಭಾರತಿ’ ಅಭಿವೃದ್ಧಿಪಥದಲ್ಲಿ ಸಾಗಲಿ ಎಂದು ಅರಣ್ಯ ಸಚಿವ, ಬಿ.ರಮಾನಾಥ ರೈ ಶುಭ ಹಾರೈಸಿದ್ದಾರೆ.

ಸಮಾಜದಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳನ್ನು ಕಟ್ಟಕಡೆಯ ವ್ಯಕ್ತಿಗಳಿಗೆ ಮುಟ್ಟಿಸುವಂತಹ ಪ್ರಯತ್ನವನ್ನು ‘ವಾರ್ತಾಭಾರತಿ’ ಮಾಡುತ್ತಿದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸುದ್ದಿಗಳ ನೈಜ ಚಿತ್ರಣವನ್ನು ನೀಡಿ ಸಮಾಜದ ಪ್ರೀತಿಗೆ ಪಾತ್ರವಾಗಿದೆ. ಭವಿಷ್ಯದಲ್ಲಿ ಅತ್ಯುತ್ತಮ ವಿಚಾರವನ್ನು ಮುಟ್ಟಿಸುವ ಪ್ರಯತ್ನ ಮುಂದುವರಿಸಲಿ. ಸರ್ವರ ವಿಶ್ವಾಸ ಗಳಿಸಲಿ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಶುಭ ಕೋರಿದ್ದಾರೆ.

‘ವಾರ್ತಾಭಾರತಿ’ಯು ಕಳೆದ 12 ವರ್ಷಗಳಿಂದ ನಾಡಿನ ಸಮಸ್ಯೆಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಅದರ ಘನತೆಯನ್ನು ಮುಂದುವರಿಸಿಕೊಂಡು ಹೋಗಲಿ. ಭವಿಷ್ಯದಲ್ಲಿ ಸಮೃದ್ಧಿಭರಿತ ಸುದ್ದಿಯೊಂದಿಗೆ ಉನ್ನತ ಮಟ್ಟಕ್ಕೇರಲಿ ಎಂದು ಯುವಜನ, ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹಾರೈಸಿದರು.

‘ವಾರ್ತಾಭಾರತಿ’ ಜನರ ಮೆಚ್ಚುಗೆಗೆ ಪಾತ್ರವಾದ ಪತ್ರಿಕೆ. ಇದು ಜನರ ವಾಹಿನಿ, ಜನರ ನಾಡಿಯಾಗಿದೆ. ನಾನು ಪತ್ರಿಕೆಯನ್ನು ನಿರಂತರವಾಗಿ ಓದುತ್ತಾ ಬಂದವ. ಸಾಮಾಜಿಕ ಕಳಕಳಿ ವಾರ್ತಾಭಾರತಿಯ ಜೀವಾಳ. ಸರ್ವ ಜನಾಂಗದ ಧ್ವನಿಯಾಗಿರುವ ‘ವಾರ್ತಾಭಾರತಿ’ ಹೀಗೇ ಮುಂದುವರಿಯಲಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಶುಭ ಕೋರಿದರು.

‘ವಾರ್ತಾಭಾರತಿ’ಯು ಪರಿವರ್ತನೆಯ ಕನಸನ್ನು ಹೊತ್ತು ಮುನ್ನಡೆಯುತ್ತಿದೆ. ‘ವಾರ್ತಾಭಾರತಿ’ಯು ನಿಷ್ಠೆ ಮತ್ತು ಶಿಸ್ತಿನ ಮಾಧ್ಯಮವಾಗಿ ಹೆಸರು ಗಳಿಸಿದೆ. ಭವಿಷ್ಯದಲ್ಲಿ ಇದು ಇನ್ನಷ್ಟು ಸಮಾಜಮುಖಿಯಾಗಿ ಕೆಲಸ ಮಾಡಲಿ ಎಂದು ಮಂಗಳೂರು ಮಹಾನಗರ ಜನತೆಯ ಪರವಾಗಿ ಶುಭ ಹಾರೈಕೆಗಳು ಎಂದು ಮಂಗಳೂರು ಮೇಯರ್ ಮಹಾಬಲ ಮಾರ್ಲ ಅವರು ಶುಭ ಕೋರಿದರು.

‘ವಾರ್ತಾಭಾರತಿ’ ಶೋಷಿತರ, ನೊಂದವರ ಬಗ್ಗೆ ಕಾಳಜಿಯೊಂದಿಗೆ ಸುದ್ದಿಗಳನ್ನು ನೀಡುತ್ತಾ ಬಂದಿರುವ ವಿಶೇಷ ಪತ್ರಿಕೆ. ‘ಮುಂಗಾರು’ ಪತ್ರಿಕೆಯ ಮಾದರಿಯಲ್ಲಿ ‘ವಾರ್ತಾಭಾರತಿ’ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ – ಎ.ಬಿ.ಇಬ್ರಾಹೀಂ, ದ.ಕ.ಜಿಲ್ಲಾಧಿಕಾರಿ

‘ವಾರ್ತಾಭಾರತಿ’ಬಳಗ ನಿರ್ಭಯವಾಗಿ ಕೆಲಸ ಮಾಡುತ್ತಿದೆ. ಇದು ನನ್ನ ಅಚ್ಚುಮೆಚ್ಚಿನ ಪತ್ರಿಕೆ. ನಿಷ್ಪಕ್ಷವಾಗಿ ಸುದ್ದಿ ನೀಡಿ ಓದುಗರ ಮನ ತಟ್ಟುತ್ತಿದೆ. ಪತ್ರಿಕೆಯನ್ನು ಅಚ್ಚುಕಟ್ಟಾಗಿ ತರುತ್ತಿರುವ ಸಂಪಾದಕೀಯ ಸಹಿತ ಎಲ್ಲಾ ಸಿಬ್ಬಂದಿ ವರ್ಗಕ್ಕೆ ನನ್ನ ಹೃದಯಾಂತರಾಳದ ಕೃತಜ್ಞತೆಗಳು – ಯೆನಪೊಯ ಅಬ್ದುಲ್ಲ ಕುಂಞಿ, ಯೆನೆಪೊಯ ವಿ.ವಿ. ಕುಲಪತಿ

ಸುದ್ದಿಯಲ್ಲಿ ಯಾವುದೇ ಜಾತಿಮತ ಭೇದ ಹಾಗೂ ತಾರತಮ್ಯವಿಲ್ಲದೆ ವಾರ್ತಾಭಾರತಿ ಜನಸಾಮಾನ್ಯರ ಹೃದಯ ಗೆದ್ದಿದೆ. ಭವಿಷ್ಯದಲ್ಲಿ ಇದು ವಿದ್ಯಾರ್ಥಿಗಳ ಪಾಲಿಗೆ ಕಲಿಕಾ ಕೇಂದ್ರವಾಗಿಯೂ ರೂಪುಗೊಳ್ಳಲಿ – ಡಾ.ವಿನಿತಾ ರೈ, ಪ್ರೊಫೆಸರ್ ರೋಶನಿ ನಿಲಯ

‘ವಾರ್ತಾಭಾರತಿ’ ಪತ್ರಿಕೆಯು ಕರಾವಳಿಯ ವಿವಿಧ ಜನಸಾಮಾನ್ಯರ ಭಾವನೆಗಳನ್ನು ಅರ್ಥೈಸಿ, ಗುರುತಿಸಿ, ಗೌರವಿಸುವ ಕೆಲಸ ಮಾಡಿದೆ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವುದು ಪತ್ರಿಕೆಯ ಸಾಧನೆಯಾಗಿದೆ – ರೆ.ಫಾ.ಸ್ವೀಬರ್ಟ್ ಡಿಸಿಲ್ವ, ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ.

ನೂತನ ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದ ಇತರ ಪ್ರಮುಖ ಗಣ್ಯರು.

ದ.ಕ.ಜಿಲ್ಲಾ ಎಸ್ಪಿ ಡಾ.ಎಸ್.ಡಿ.ಶರಣಪ್ಪ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ರೆ.ಫಾ.ವೆಲೇರಿಯನ್ ಡಿಸೋಜ, ಬ್ಯಾರೀಸ್ ಗ್ರೂಪ್‌ನ ಸೈಯದ್ ಮುಹಮ್ಮದ್ ಬ್ಯಾರಿ, ಇನ್‌ಲ್ಯಾಂಡ್ ಬಿಲ್ಡರ್ಸ್‌ನ ಸಿರಾಜ್ ಅಹ್ಮದ್, ಪ್ರಾಪರ್ಟಿ ರಿಯಲ್ ಎಸ್ಟೇಟ್‌ನ ರೋಹನ್ ಮೊಂತೆರೊ, ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ಅಬ್ದುರ್ರವೂಫ್ ಪುತ್ತಿಗೆ, ವೆಸ್ಟ್‌ಲೈನ್ ಬಿಲ್ಡರ್ಸ್‌ನ ನಾಸಿರ್ ಮೊಯ್ದಿನ್, ಉದ್ಯಮಿ ಅಬ್ದುಲ್ ರಹೀಂ ಟಿ.ಕೆ., ರಫೀಕ್ ಅಸ್ಸಾದಿ, ಸುಲ್ತಾನ್ ಗೋಲ್ಡ್‌ನ ನಿರ್ದೇಶಕ ಅಬ್ದುಲ್ ರಹೀಂ, ಸುಲ್ತಾನ್ ಗೋಲ್ಡ್‌ನ ಜಿಎಂ ಉನ್ನಿತ್ತಾನ್, ಡೈಮಂಡ್ ಬಿಲ್ಡರ್‌ನ ಸಲೀಂ ಅಲ್ತಾಫ್, ಹೋಮ್ ಪ್ಲಸ್‌ನ ಆಸಿಫ್, ಟೋಪ್ಕೊ ಜುವೆಲ್ಲರ್ಸ್‌ನ ಮುಹಮ್ಮದ್, ಜುವೆಲ್ ಹೌಸ್‌ನ ಸಲೀಂ, ಮರಿಯಂ ರಿಯಾಲಿಟಿಯ ಅನ್ವರ್ ಶಬೀರ್, ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಉಡುಪಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಸಿ.ಎ. ರಾಮ್ ಭಟ್, ಸಿ.ಎ.ಝಮೀರ್ ಅಂಬರ್, ಹಿರಿಯ ನ್ಯಾಯವಾದಿ ವಿವೇಕಾನಂದ ಪನಿಯಾಲ, ಪ್ರಾಧ್ಯಾಪಕಿ ಡಾ.ಶಶಿಕಲಾ ಗುರುಪುರ, ಕಾರ್ಪೊರೇಟರ್‌ಗಳಾದ ಅಬ್ದುರ್ರವೂಫ್, ಮುಹಮ್ಮದ್ ಕುಂಜತ್ತಬೈಲ್, ಪ್ರಕಾಶ್, ಲತೀಫ್ ಕಂದುಕ, ಮಾಜಿ ಕಾರ್ಪೊರೇಟರ್ ಅಬೂಬಕರ್ ಕುದ್ರೋಳಿ, ಕಾಂಗ್ರೆಸ್ ನಾಯಕರಾದ ಶಾಹುಲ್ ಹಮೀದ್, ಬಿ.ಎಚ್.ಖಾದರ್, ಅಶ್ರಫ್ ಬಸ್ತಿಕಾರ್, ಟಿ.ಕೆ.ಸುಧೀರ್, ಎಸ್‌ಡಿಪಿಐ ಮುಖಂಡರಾದ ಜಲೀಲ್ ಕೃಷ್ಣಾಪುರ, ನವಾಝ್ ಉಳ್ಳಾಲ, ಪಿಎಫ್‌ಐ ಮುಖಂಡರಾದ ಅಬ್ದುಲ್ ಖಾದರ್ ಪುತ್ತೂರು, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ರಿಜಿಸ್ಟ್ರಾರ್ ಉಮರಬ್ಬ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಹಾಜಿ ಶರೀಫ್ ಚೊಕ್ಕಬೆಟ್ಟು, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಬಂದರ್, ದ.ಕ. ಜಿಲ್ಲಾ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಸಾದುದ್ದೀನ್ ಸಾಲಿಹ್, ಪ್ರಧಾನ ಕಾರ್ಯದರ್ಶಿ ನಝೀರ್, ಮಾಜಿ ಅಧ್ಯಕ್ಷ ಪಿ.ಬಿ.ರಝಾಕ್, ಹಾಜಿ ಬಶೀರ್ ಜೆಪ್ಪು, ಹಿರಾ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಕೆ.ಎಂ.ಶರೀಫ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ, ಜಿಲ್ಲಾ ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್, ಬ್ಯಾರಿ ಕಲಾರಂಗದ ಅಧ್ಯಕ್ಷ ಹಾಜಿ ಅಝೀಝ್ ಬೈಕಂಪಾಡಿ, ಹಿದಾಯ ಫೌಂಡೇಶನ್‌ನ ಟಿ.ಕೆ.ಬಶೀರ್, ಅಲ್ ಇಹ್ಸಾನ್ ಸಂಸ್ಥೆಯ ಮುಸ್ತಫ ಸಅದಿ, ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ.ಎ.ಎಂ.ನರಹರಿ, ಲೇಖಕ ಸುರೇಶ್ ಭಟ್ ಬಾಕ್ರಬೈಲ್, ವೆಲೊರೆಡ್ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ, ಚಿತ್ರನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್, ಕಲಾವಿದ ದಿನೇಶ್ ಹೊಳ್ಳ, ಗೋವಿಂದ್ ಬೆಳಗಾಂವ್ಕರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ರವೀಂದ್ರ ಶೆಟ್ಟಿ, ಪಿ.ಬಿ.ಹರೀಶ್ ರೈ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್.ರಾಮಕೃಷ್ಣ, ಮುಂಬೈ ಕನ್ನಡಿಗ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ, ಕೆನರಾ ಬ್ಯಾಂಕ್‌ನ ಚೀಫ್ ಮ್ಯಾನೇಜರ್ ಕೆದಿಲಾಯ, ಮುರಳೀಧರ್, ಹಮೀದ್ ಕೃಷ್ಣಾಪುರ, ಡಿ.ಐ.ಅಬೂಬಕರ್ ಕೈರಂಗಳ, ಸಿಪಿಎಂ ಮುಖಂಡ ಕೆ.ಆರ್.ಜಯಾನಂದ, ದಲಿತ ಮುಖಂಡ ಪಿ.ಕೇಶವ ಪ್ರೊ.ಬಿ.ಎಂ.ಇಚ್ಲಂಗೋಡು, ಉಮರ್ ಯು.ಎಚ್., ಬಿ.ಎ.ಮುಹಮ್ಮದ್ ಅಲಿ, ಅಬ್ದುರ್ರಹ್ಮಾನ್ ಕುತ್ತೆತ್ತೂರು, ಹುಸೈನ್ ಕಾಟಿಪಳ್ಳ, ಇಕ್ಬಾಲ್ ಪಾಂಡೇಲ್ ಹಾಗೂ ಜಾಹೀರಾತು ಸಂಸ್ಥೆಯ ಮುಖ್ಯಸ್ಥರು/ಪ್ರತಿನಿಧಿಗಳಾದ ರಾಹುಲ್ ಸಂಸ್ಥೆಯ ಟೈಟಸ್ ನೊರೊನ್ಹಾ, ಪ್ರೋಮೋಶನ್ಸ್‌ನ ವಿಜಯ್ ಶೆಟ್ಟಿ, ಮಣಿಪಾಲ್ ಆಡ್ಸ್‌ನ ಸುರೇಖಾ, ಮ್ಯಾಗ್ನಂನ ಕೃಷ್ಣಪ್ರಸಾದ್, ಫೋರ್‌ವಿಂಡ್ಸ್‌ನ ಇ.ಫೆರ್ನಾಂಡಿಸ್, ನಂದನ್, ಎಡ್ವರ್ಡ್, ಅಬ್ಬ, ಕ್ಲಿಫರ್ಡ್, ಮೀಡಿಯಾ ಮರ್ಚಂಟ್ಸ್‌ನ ಬಾಲಕೃಷ್ಣ ಶೆಟ್ಟಿ, ಮರಿಯಾ ಸಂಸ್ಥೆಯ ಎಚ್.ಆರ್.ಆಳ್ವ, ಭೇಟಿ ನೀಡಿದರು.

Write A Comment