ಕನ್ನಡ ವಾರ್ತೆಗಳು

ಆದಿವಾಸಿ ಹಕ್ಕು ಕಸಿಯಲು ಸರಕಾರ ಸಿದ್ಧತೆ: ಜಿತೇಂದ್ರ ಚೌಧುರಿ

Pinterest LinkedIn Tumblr

kprs_protest_photo_1

ಮಂಗಳೂರು,ಫೆ.12  : ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿ ಜನರ ಭೂ ಹಕ್ಕನ್ನು ಕಸಿಯುವ ನಿಟ್ಟಿನಲ್ಲಿ ಹಿಂದಿನ ಯುಪಿಎ ಸರಕಾರ ಪ್ರಯತ್ನಿಸಿದ್ದರೆ, ಪ್ರಸ್ತುತ ಬಿಜೆಪಿ ಸರಕಾರ ಕಸಿಯುವ ಎಲ್ಲ ಸಿದ್ಧತೆ ನಡೆಸಿದೆ ಎಂದು ತ್ರಿಪುರದ ಸಂಸದ, ಆದಿವಾಸಿ ಹಕ್ಕುಗಳ ರಾಷ್ಟ್ರೀಯ ಸಮಿತಿ ಮುಖಂಡ ಜಿತೇಂದ್ರ ಚೌಧುರಿ ಹೇಳಿದ್ದಾರೆ. ಅವರು ನಗರದ ಡಿವೈಎಫ್‌ಐ ಕಚೇರಿ ಸಭಾಂಗಣದಲ್ಲಿ ಬುಧವಾರ ಮಾತನಾಡಿ, ಗರಿಷ್ಠ ನಾಲ್ಕು ಎಕರೆ ಭೂಮಿ ಆದಿವಾಸಿಗಳ ಹಕ್ಕು ಎಂಬುದಾಗಿ ಹಿಂದಿನ ಕಾನೂನಿನಲ್ಲಿದ್ದರೆ, ಅಭಿವೃದ್ಧಿ ಹೆಸರಿನಲ್ಲಿ ಹಕ್ಕು ಮೊಟಕುಗೊಳಿಸಲಾಗುತ್ತಿದೆ ಎಂದರು.

ದೇಶದಲ್ಲಿ 8 ಕೋಟಿಗೂ ಅಧಿಕ ಮಂದಿ ಆದಿವಾಸಿ ಜನರು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದು, ಅರಣ್ಯ ಕಾಯಿದೆಯಲ್ಲಿ ತಿದ್ದುಪಡಿಯಾದರೆ ಅವರೆಲ್ಲ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಅವರು ತಿಳಿಸಿದರು.

kprs_protest_photo_3

ನೈಜವಾಗಿ ಆದಿವಾಸಿ ಜನರು ಶಿಕ್ಷಣ ಜ್ಞಾನವಿಲ್ಲದಿದ್ದರೂ ದೇಶದ 270 ಜಿಲ್ಲೆಯಲ್ಲಿ ವ್ಯಾಪಿಸಿರುವ ಅರಣ್ಯವನ್ನು ನೈಸರ್ಗಿಕವಾಗಿ ಸಂರಕ್ಷಿಸುತ್ತಿದ್ದಾರೆ ಎಂದು ಹೇಳಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ಕಾಡು ನಾಶವಾಗುತ್ತಿದೆ ಎಂದರು.

ನರೇಗಾ ಯೋಜನೆಗೆ ದೇಶದಲ್ಲಿ ಸುಮಾರು 12 ಕೋಟಿ ಕುಟುಂಬ ಹೆಸರು ನೋಂದಾಯಿಸಿದ್ದು, ಸರಕಾರ ಕನಿಷ್ಠ 2 ಲಕ್ಷ ಕೋಟಿ ರೂ.ವನ್ನು ಮೀಸಲಿಡಬೇಕಿತ್ತು. ಆದರೆ ಯುಪಿಎ ಸರಕಾರ ಕೇವಲ 63 ಸಾವಿರ ಕೋಟಿ ರೂ.ಗೆ ಮಿತಿ ನಿಗದಿ ಪಡಿಸಿದ್ದರೆ, ಮೋದಿ ಸರಕಾರ ಕೇವಲ 33 ಸಾವಿರ ಕೋಟಿ ರೂ. ನಿಗದಿಗೊಳಿಸಿದೆ ಎಂದು ಅವರು ತಿಳಿಸಿದರು.

kprs_protest_photo_2

ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಎಸ್.ವೈ. ಗುರುಶಾಂತ್ ಮಾತನಾಡಿ, ಎಲ್ಮಾ (ಎನ್ವಿರಾನ್‌ಮೆಂಟ್ ಲಾ ಮ್ಯಾನೇಜ್‌ಮೆಂಟ್ ಆ್ಯಕ್ಟ್) ತಿದ್ದುಪಡಿಯಿಂದ ಉಂಟಾಗುವ ತೊಂದರೆ ಬಗ್ಗೆ 11 ಜಿಲ್ಲೆಯಲ್ಲಿ ಫೆ.20ರಿಂದ ಮಾ.15ರ ವರೆಗೆ ಸಭೆ, ಸಮಾಲೋಚನೆ ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪದಾಧಿಕಾರಿ ಶೇಖರ್ ಎಲ್. ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.

Write A Comment