ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ “ವೀವ್ಸ್” ಕಾಟನ್ ಮತ್ತು ಸಿಲ್ಕ್ ಸೀರೆಗಳ ಮಾರಾಟ ಹಾಗೂ ಪ್ರದರ್ಶನ

Pinterest LinkedIn Tumblr

weaves_saree_exbition_1

ಮಂಗಳೂರು,ಫೆ.12  : ಕಾಟನ್ ಮತ್ತು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟದ ‘ವೀವ್ಸ್’ ನಗರದ ಸಂತ ಅಲೋಶಿಯಸ್ ಕಾಲೇಜಿನ ಲಯೋಲಾ ಸಭಾಂಗಣದಲ್ಲಿ ಬುಧವಾರ ಆರಂಭಗೊಂಡಿದ್ದು, ಫೆ.15ರ ವರೆಗೆ ನಡೆಯಲಿದೆ.

14 ರಾಜ್ಯಗಳ 42 ಮಳಿಗೆಗಳ ಮೂಲಕ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇಶಾದ್ಯಂತ 54 ಸಾವಿರ ವೀವ್ಸ್‌ನ ನಿತ್ಯ ಗ್ರಾಹಕರಿದ್ದಾರೆ. ಉತ್ಪನ್ನಗಳನ್ನು ಒಂದೇ ಸೂರಿನಡಿ ಖರೀದಿಸುವ ಅವಕಾಶ ಇಲ್ಲಿದ್ದು, ಉತ್ತರ ಪ್ರದೇಶ ಶೈಲಿಯ ಲಕ್ನೋವಿ ಚಿಕಾನ್, ಜಂದಾನಿ ವಸ್ತ್ರಗಳು, ಪಶ್ಚಿಮ ಬಂಗಾಳದ ಬಾಲಚರ, ಕಾಂತಾ, ಸಾಂಪ್ರದಾಯಿಕ ಶೈಲಿಯ ಕಲಾತ್ಮಕ ಸೀರೆಗಳು ಇವೆ ಎಂದು ರೇವತಿ ಕ್ರಿಯೇಟಿವ್ ಕಮ್ಯುನಿಕೇಶನ್ಸ್‌ನ ಆಡಳಿತ ನಿರ್ದೇಶಕ ಸರ್ವೇಶ್ವರ ರೆಡ್ಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

weaves_saree_exbition_2 weaves_saree_exbition_3weaves_saree_exbition_4a

ಅತ್ಯಾಕರ್ಷಕ ರೀತಿಯ ಸೀರೆಗಳು, ಡ್ರೆಸ್ ಮೆಟೀರಿಯಲ್ಸ್, ಕಂಠವಸ್ತ್ರ, ದುಪಟ್ಟಾ, ಕುರ್ತಾ, ಕಿಡ್ಸ್‌ವೇರ್, ಹೋಮ್ ಲಿನೆನ್ ಗುಣಮಟ್ಟದ ಕಾಟನ್ ಮತ್ತು ಸಿಲ್ಕ್ ಸೀರೆ, ಕೈ ಮಗ್ಗದಿಂದ ಮೂಡಿಬಂದ ಅತ್ಯಾಕರ್ಷಕ ರೀತಿಯ ಸೀರೆ ಮುಂತಾದ ಉತ್ಪನ್ನಗಳು ಇಲ್ಲಿವೆ.

ಆಂಧ್ರ ಪ್ರದೇಶದ ಧರ್ಮಾವರಂ, ವೆಂಕಟಗಿರಿ, ಮಂಗಳಗಿರಿ, ಕಲಾಮ್ ಕರಿ ಮತ್ತು ಉಪ್ಪಾಡ, ಅಸ್ಸಾಂನ ಮುಗಾ ಮತ್ತು ಎರಿ ಸಿಲ್ಕ್, ಬಿಹಾರದ ತುಷಾರ ಮತ್ತು ಕಾಂತ, ಛತ್ತೀಸ್‌ಗಡದ ಕಾಂತ, ಬುಡಕಟ್ಟು ಕುಸುರಿ, ಕೋಸಾ ಸಿಲ್ಕ್, ಗುಜರಾತ್‌ನ ಬಂಧನಿ, ಕಛ್ ಎಂಬ್ರಾಯ್ಡರಿ ಉಡುಗೆ ಮತ್ತು ಸೀರೆಗಳು, ರಾಜಾಸ್ಥಾನದ ಕೋಟಾ, ಬಂಧೇಜ್ ಹೀಗೆ 14 ರಾಜ್ಯಗಳ ವಸ್ತ್ರ ವಿನ್ಯಾಸಗಳು ವೀವ್ಸ್‌ನಲ್ಲಿವೆ ಎಂದು ಅವರು ವಿವರಿಸಿದರು. ವೀವ್ಸ್ ಪ್ರದರ್ಶನದ ಮಾನವ ಸಂಪನ್ಮೂಲ ವಿಭಾಗದ ಪ್ರಸಾದ್ ಸುದ್ದಿಗೋಷ್ಠಿಯಲ್ಲಿದ್ದರು.

Write A Comment