ಮಂಗಳೂರು,ಫೆ.08: ಎ.ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನೂತನವಾಗಿ ಪ್ರಾರಂಭವಾದ “ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್”ನ ಉದ್ಘಾಟನೆ ಪ್ರಯುಕ್ತ “ಬಂಟಸಿರಿ” ಕಲಾವೈಭವ -2015 ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ನಗರದ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಟಿ.ಎಂ.ಎ.ಪೈ ಇಂಟರ್ ನ್ಯಾಷನಲ್ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಂಟ ಸಮಾಜದವರಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ‘ಬಂಟ ಸಿರಿ’ ಕಲಾ ವೈಭವ ನಡೆಯಿತು. ಇದರಲ್ಲಿ ನೃತ್ಯ ವಂದನ, ಬಂಟರ ಉಡುಗೆ- ತೊಡುಗೆ, ಹಾಸ್ಯ ರಂಜನೆ, ಯಕ್ಷ ಹಾಸ್ಯ- ಲಾಸ್ಯ, ಬಂಟರ ವೈಭವ, ಮಹಿಳಾ ಸಾಂಸ್ಕೃತಿಕ ವೈವಿದ್ಯ, ಮಿಸ್ ಬಂಟ್- ಮಿಸ್ಟರ್ ಬಂಟ್, ಭಲೇ ಜೋಡಿ, ನಮ್ಮ ಯಜಮಾನ್ರು, ಯಕ್ಷಗಾನ ಬಯಲಾಟ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಸಂಗೀತ ರಸಧಾರೆ ನಡೆಯಿತು.
ಚಿತ್ರ : ಅಮ್ಟೂರ್ ಡಿಜಿಟಲ್ ಸ್ಟೂಡಿಯೋ ಮತ್ತು ಸತೀಶ್ ಕಾಪಿಕಾಡ್