ಕನ್ನಡ ವಾರ್ತೆಗಳು

ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆ.

Pinterest LinkedIn Tumblr
mumabi_news_photo
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್
 
ಮುಂಬಯಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆಯು ಫೆ. 3 ರಂದು ಸಂತಾಕ್ರೂಜ್ ಪೂರ್ವ ಬಿಲ್ಲವ ಭವನದಲ್ಲಿ  ಸಮಿತಿಯಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರಗಿತು.
ಸಮಿತಿಯು ಮುಂದೆ ಅವಿಭಜಿತ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸದಸ್ಯರೆಲ್ಲರೂ ಸಹಕರಿಸಬೇಕಾರಿ ವಿನಂತಿಸಿದರು. ಗ್ರಾಮೀ ಣ ಪ್ರದೇಶಗಳಲ್ಲಿ ಸ್ವಚ್ಚತಾ ಅಭಿಯಾನ ಮಾತ್ರವಲ್ಲದೆ ಸೌಚಾಲಯಗಳನ್ನು ನಿರ್ಮಿಸುವ ಯೋಜನೆ ಬಗ್ಗೆ ವಿವರಿಸಿದರು.
 
ಸಮಿತಿಯ ಅಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿಯವರು ಮಾತನಾಡುತ್ತಾ, ಗ್ರಾಮೀ ಣ ಪ್ರದೇಶಗಳಲ್ಲಿನ ಕನ್ನಡ ಶಾಲೆಗಳಲ್ಲಿ ಸೌಚಾಲಯ ನಿರ್ಮಾಣ ಮಾತ್ರವಲ್ಲದೆ ಸ್ಮಶಾನ ಭೂಮಿಯ ಕೊರತೆಯಿರುವ ಗ್ರಾಮಗಳಲ್ಲಿ ಸ್ಮಶಾನ ಭೂಮಿಯನ್ನು ನಿರ್ಮಿಸುವ ಬಗ್ಗೆ ಸಭೆಗೆ ತಿಳಿಸುತ್ತಾ ಸಮಿತಿಯ ಮುಂದಿನ ವಾರ್ಷಿಕೋತ್ಸವವನ್ನು ಮಂಗಳೂರು ಯಾ ಉಡುಪಿಯಲ್ಲಿ ಆಚರಿಸಲಾಗುವುದು ಎಂದರು. ಸಂಘದ ಸದಸ್ಯರುಗಳಾದ ಬೋಂಬೆ ಬಂಟ್ಸ ಅಸೋಸಿಯೇಶನ್ ನ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಬಂಟರ ಸಂಘದ  ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಕುಲಾಲ ಸಂಘದ ಅಧ್ಯಕ್ಷ ಗಿರೀಶ್ ಬಿ.  ಸಾಲ್ಯಾನ್ ಅವರನ್ನು ಗೌರವಿಸಲಾಯಿತು.
 
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ಎಲ್. ವಿ. ಅಮೀನ್, ವಿಶ್ವನಾಥ ಮಾಡಾ, ಪಿ. ಕೆ. ಸಾಲ್ಯಾನ್, ನಿತ್ಯಾನಂದ ಡಿ. ಕೋಟ್ಯಾನ್ ಪದಾಧಿಕಾರಿಗಳಾದ ರಾಮಚಂದ್ರ ಗಾಣಿಗ, ಶಿಮುಂಜೆ ಪರಾರಿ, ಜಯಂತ್ ಶೆಟ್ಟಿ, ಡಾ. ಪ್ರಭಾಕರ್ ಶೆಟ್ಟಿ, ಸುರೇಂದ್ರ ಸಾಲ್ಯಾನ್, ಸಂಜೀವ ಪೂಜಾರಿ, ತುಳಸೀದಾಸ್ ಅಮೀನ್, ಕೆ. ಎಂ. ಕೋಟ್ಯಾನ್, ಹ್ಯಾರಿ ಸಿಕ್ವೇರ ಮೊದಲಾದವರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Write A Comment