ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ಇನ್ನೊಂದು ಹೊಸ ಆಟದ ಮೈದಾನ ಯೋಜನೆ: ಮಹಾಬಲ ಮಾರ್ಲ.

Pinterest LinkedIn Tumblr

maha_bala_marla

ಮಂಗಳೂರು, ಫೆ. 5 : ಮಂಗಳೂರು ಮಹಾನಗರ ಪಾಲಿಕೆ ಮತ್ತೊಂದು ಮೈದಾನ ನಿರ್ಮಾಣಕ್ಕೆ ಮುಂದಾಗಿದೆ. ಕೋಡಿಕಲ್ ಬಳಿ ಫಲ್ಗುಣಿ ನದಿ ತೀರಕ್ಕೆ ಸಮೀಪದಲ್ಲಿರುವ ಕಲ್ಲಕಂಡದ ಐದು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದೆ. ಮಂಗಳೂರು ನಗರದಲ್ಲಿ ಮಂಗಳಾ ಕ್ರೀಡಾಂಗಣ ವನ್ನು ಹೊರತು ಪಡಿಸಿದರೆ ಉಳಿದ ಮೈದಾನಗಳು ಕ್ರೀಡಾ ತರಬೇತಿಗೆ ಬೇಕಾದ ಮೂಲಸೌಕರ್ಯ ಹೊಂದಿಲ್ಲ. ಇಂಥ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕೆಂಜಾರು ಬಳಿ 100 ಎಕರೆ ಪ್ರದೇಶವನ್ನು ಕ್ರೀಡಾ ಸಂಕೀರ್ಣಕ್ಕೆ ಮೀಸಲಿಡಬೇಕು ಎಂಬ ಪ್ರಸ್ತಾಪವನ್ನು ಸರಕಾರಕ್ಕೆ ಸಲ್ಲಿಸಿದೆ ಎಂದು ಮೇಯರ್ ಮಹಾಬಲ ಮಾರ್ಲ ತಿಳಿಸಿದ್ದಾರೆ

ಪ್ರಥಮ ಹಂತದಲ್ಲಿ ಆವರಣಗೋಡೆ ನಿರ್ಮಾಣಕ್ಕೆ 95 ಲಕ್ಷ ರೂ. ಮೀಸಲಿಡಲಾಗಿದೆ. ಬಳಿಕ ಜಾಗವನ್ನು ಸಮತಟ್ಟುಗೊಳಿಸಿ ಯಾವ ಕ್ರೀಡೆಗೆ ಸೂಕ್ತ ಎಂಬುದನ್ನು ನಿರ್ಣಯಿಸಿ ಅದಕ್ಕೆ ತಕ್ಕಂತೆ ಮೈದಾನ ರಚಿಸಲಾ ಗುವುದು ಎಂದು ತಿಳಿಸಿದರು. ರಾಜ್ಯ ಸರ್ಕಾರ ಎಸ್‌ಎಫ್‌ಸಿ ವಿಶೇಷ ನಿಧಿಯಲ್ಲಿ 2.50 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಇದರಿಂದ ಮೈದಾನ ರಚನೆಗೆ ಸಿದ್ಧತೆ ನಡೆಸಲಾಗಿದೆ ಎಂದು ಅಧೀಕ್ಷಕ ಎಂಜಿನಿಯರ್ ಕಾಂತರಾಜು ತಿಳಿಸಿದ್ದಾರೆ.

Write A Comment