ಕನ್ನಡ ವಾರ್ತೆಗಳು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನ ಸೆರೆ : 16 ಲಕ್ಷ ರೂ.ಗಳ ಚಿನ್ನ ವಶ

Pinterest LinkedIn Tumblr

gold_airport_photo_m

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಯಾಣಿಕನಿಂದ 15,90,300 ಲಕ್ಷ ರೂ. ಮೌಲ್ಯದ 570 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ದುಬೈಯಿಂದ ಮಂಗಳೂರಿಗೆ ಜೆಟ್‌ಏರ್‌ವೇಸ್ ವಿಮಾನದಲ್ಲಿ ಬಂದ ಕಾಸರಗೋಡಿನ ಚೆಂಗಳ ನಿವಾಸಿ ಮುಹಮ್ಮದ್ ಸಮೀರ್ ಪಿ.ಎ. ತಂದಿದ್ದ ಎರಡು ಟ್ರಾಲಿ ಸೂಟ್‌ಕೇಸ್‌ನ ಒಳಗಡೆ ಬೇಗಡೆ ಬಳಸಿ ಚಿನ್ನವನ್ನು ಬ್ಯಾಗ್‌ಗೆ ಜೋಡಿಸಲಾಗಿತ್ತು. ಹೊರಗಡೆಯಿಂದ ಮಾಮೂಲು ಸೂಟ್‌ಕೇಸ್‌ನ ಕವರ್ ಇತ್ತು. ಈ ಬಗ್ಗೆ ಅನುಮಾನಗೊಂಡ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ತಪಾಸಣೆ ನಡೆಸಿದಾಗ ಎರಡು ಸೂಟ್‌ಕೇಸ್ ಒಳಗಡೆ ಚಿನ್ನವನ್ನು ಹಾಳೆ ಮಾಡಿ ಜೋಡಿಸಿಟ್ಟಿರುವುದು ಪತ್ತೆಯಾಗಿದೆ.

gold_sezed_photo_2 gold_sezed_photo_1

ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ಸಹಾಯಕ ಆಯುಕ್ತ ಉದಯಶಂಕರನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಆಯುಕ್ತ ಪುರುಷೋತ್ತಮ ಅವರಿಗೆ ಹಸ್ತಾಂತರಿಸಲಾಗಿದೆ.

Write A Comment