ಮಂಗಳೂರು,ಜ.27 : ಭಾರತ ಸರ್ಕಾರದ ಗೀತೆ ಮತ್ತು ನಾಟಕ ವಿಭಾಗದ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಸುರತ್ಕಲ್ ನ ಗೋವಿಂದ ದಾಸ್ ಕಾಲೇಜಿನಲ್ಲಿ ‘ಸ್ವಚ್ಛ ಭಾರತ’ ವಿಷಯದ ಬಗ್ಗೆ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಶ್ರೀಯುತರಾದ ಮೊಯಿದಿನ್ ಬಾವರವರು ದೀಪ ಬೆಳಗಿಸಿ ಚಂಡೆ ಬಾರಿಸಿ ಚಾಲನೆ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ರಾಜಮೋಹನ್ ರಾವ್, ರಾ. ಸೇ. ಯೋಜನೆಯ ಯೋಜನಾಧಿಕಾರಿ ಮಾರ್ಸೆಲ್ ಲೂಯೀಸ್ ಮತ್ತು ರೋಟರಿ ಕ್ಲಬ್ನ ಸದಸ್ಯರು, ಯಕ್ಷದೇಗುಲದ ಕಲಾವಿದರು ವೇದಿಕೆಯಲ್ಲಿದ್ದರು. ಮುಂದೆ ಈ ಯಕ್ಷಗಾನ ಕಾರ್ಯಕ್ರಮ ತಡಂಬೈಲ್, ಕೋಡಿಕೆರೆ, ಕಾಟಿಪಳ್ಳ ಮತ್ತು ಚೇಳಾರಿನಲ್ಲಿ ಕೂಡ ನಡೆಯಲಿದೆ.