ಕನ್ನಡ ವಾರ್ತೆಗಳು

ಕುವೈತ್‌ನಲ್ಲಿ ರಸ್ತೆ ಅಪಘಾತ : ಕಾಸರಗೋಡು ನಿವಾಸಿ ದಾರುಣ ಸಾವು.

Pinterest LinkedIn Tumblr

umarul_farook_caracdent

ಕಾಸರಗೋಡು, ಜ.26: ಕುವೈತ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಸರಗೋಡು ನಿವಾಸಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕುಂಬಳೆ ಸಮೀಪದ ಬಾಡೂರು ಚಾಕಟ್ಟೆಚಾಲ್‌ನ ಹುಸೈನಾರ್ ಎಂಬವರ ಪುತ್ರ ಉಮರುಲ್ ಫಾರೂಕ್ (27) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಫಾರೂಕ್ ಸೇರಿದಂತೆ ಇಬ್ಬರು ಭಾರತೀಯರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಇನ್ನೋರ್ವ ಮೃತ ವ್ಯಕ್ತಿಯನ್ನು ಉತ್ತರಪ್ರದೇಶದ ಸೈಯದ್ ಎಂದು ಗುರುತಿಸಲಾಗಿದೆ. ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದ ಆರು ಮಂದಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಈ ದುರ್ಘಟನೆ ಸಂಭವಿಸಿದೆ. ಆದರೆ ಅಪಘಾತ ಹೇಗೆ ಸಂಭವಿಸಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ.

ಫಾರೂಕ್ 4 ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕಾಗಿ ಕುವೈತ್‌ಗೆ ತೆರಳಿದ್ದರು. ಮೃತದೇಹವನ್ನು ಊರಿಗೆ ತರಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Write A Comment