ಕನ್ನಡ ವಾರ್ತೆಗಳು

2ನೇ ವರ್ಷದ “ಅಮ್ಮನೆಡೆಗೆ ನಮ್ಮ ನಡೆ” ಪಾದಯಾತ್ರೆಗೆ ಗಣ್ಯರಿಂದ ಚಾಲನೆ.

Pinterest LinkedIn Tumblr

nalini_kateel_nadige_1a

ಮಂಗಳೂರು/ಕಟೀಲು,ಜ.26 : ಮರವೂರು ಗುರುಪುರ ನದಿ ಸೇತುವೆಯ ಸಮೀಪದಲ್ಲಿರುವ ದುರ್ಗಾಪರಮೇಶ್ವರೀ ದೇವಸ್ಥಾನದಿಂದ 2ನೇ ವರ್ಷದ “ಅಮ್ಮನೆಡೆಗೆ ನಮ್ಮ ನಡೆ” ಎಂಬ ಪಾದಯಾತ್ರೆಗೆ ಕಟೀಲು ದೇವಳದ ಅರ್ಚಕ ಕೆ.ವಾಸುದೇವ ಆಸ್ರಣ್ಣ, ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಮೂಡಬಿದಿರೆ ಆಳ್ವಾಸ್‌ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಡಾ| ಮೋಹನ್‌ ಆಳ್ವ, ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಈ ಪಾದಯಾತ್ರೆಗೆ ಚಾಲನೆ ನೀಡಿದರು.ಪಾದಯಾತ್ರೆಯಲ್ಲಿ ಸುಮಾರು 10ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡರು.

nalini_kateel_nadige_2 nalini_kateel_nadige_3a

ಕಟೀಲು ಶ್ರೀ ದುರ್ಗಾಪರಮೇಶ್ವರೀ ಚಿತ್ರಪಟವನ್ನೊಳಗೊಂಡ ಪುಷ್ಪಾಲಂಕೃತ ದೇವರ ರಥ, ಯಕ್ಷಗಾನ ವೇಷಧಾರಿಗಳು, ವಿವಿಧ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಚೆಂಡೆ ವಾದನದೊಂದಿಗೆ ಭಕ್ತ ಸಮೂಹದ ಭಕ್ತಿಯಿಂದ ನಡೆ. ಸುಮಾರು40ರಷ್ಟು ಸಂಘ-ಸಂಸ್ಥೆಗಳು ಮಕ್ಕಳು, ಯುವಕ-ಯುವತಿಯರು, ವಯಸ್ಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

nalini_kateel_nadige_4a nalini_kateel_nadige_5a

ಈ ಸಂದರ್ಭದಲ್ಲಿ ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ, ಮಾಲಾಡಿ, ಆಶಾ ಜ್ಯೋತಿ ರೈ, ಬಡಗ ಎಡಪದವು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಶಶಿಧರ್‌ ಶೆಟ್ಟಿ, ಸುಧಾಕರ್‌ ಪಿ.ಶೆಟ್ಟಿ, ಶ್ರೀನಿವಾಸ ಉಪಾಧ್ಯಾಯ, ಪಾದಯಾತ್ರೆ ಸಮಿತಿಯ ಅಧ್ಯಕ್ಷ ಸಂದೀಪ್‌ ಶೆಟ್ಟಿ ಮರವೂರು, ಸಂಚಾಲಕರಾದ ಭಾಸ್ಕರ ರೈ ಕುಕ್ಕುವಳ್ಳಿ, ಸುಕೇಶ್‌ ಶೆಟ್ಟಿ ಮುಂಡಾರುಗುತ್ತು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಘವ ಎಂ., ವೇಣುಗೋಪಾಲ್‌ ಕೆ.ಪುತ್ರನ್‌, ರಿತೇಶ್‌ ಶೆಟ್ಟಿ, ಪ್ರತೀಕ್‌ ಶೆಟ್ಟಿ, ಭುಜಂಗ ಕುಲಾಲ್‌, ಉಲ್ಲಾಸ್‌ ಆರ್‌.ಶೆಟ್ಟಿ ಪೆರ್ಮುದೆ, ಮಹಿಳಾ ವಿಭಾಗದ ನಿವೇದಿತಾ ಎನ್‌. ಶೆಟ್ಟಿ, ಶಕೀಲಾ ಕಾವಾ ಮುಂತಾವದರು ಉಪಸ್ಥಿತರಿದ್ದರು.

Write A Comment