ಕನ್ನಡ ವಾರ್ತೆಗಳು

ರಾಷ್ಟ್ರೀಯ ಮಟ್ಟದ ಸಿನರ್ಜಿ -ಸಿಗ್ಮ 2015 ಉದ್ಯಮೋತ್ಸವಕ್ಕೆ ಚಾಲನೆ

Pinterest LinkedIn Tumblr

sdm_synerg_sangam_1

ಮಂಗಳೂರು,ಜ.23 : ದ.ಕ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀಧರ್ಮಸ್ಥಳ ಮಂಜುನಾಥೇಶವ ಉದ್ಯಮಾಡಳಿತ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ “ಸಿನರ್ಜಿ 2015”  ಉದ್ಯಮೋತ್ಸವವು ‘ನಿರ್ಮಾಣ ಎಂಬ ವಿಚಾರಧಾರೆಯು ಶುಕ್ರವಾರ ನಡೆಯಿತು. ಬಿಸಿಎ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಸಿಗ್ಮ -2015 ರೆಟ್ರೋಸ್ಫೆಕ್ಟ್ರ ಎಂಬ ವಸ್ತುವನ್ನು ಒಳಗೊಂಡ ಮಾಹಿತಿ ತಂತ್ರಜ್ಞಾನ ಉತ್ಸವವನ್ನು ಏರ್ಪಡಿಸಲಾಗಿತ್ತು.

sdm_synerg_sangam_2 sdm_synerg_sangam_3

ದೇಶಾದ್ಯಂತ ಹರಡಿಕೊಂಡಿರುವ ಮೆನೇಜ್ ಮೆಂಟ್ ವಿಧ್ಯಾರ್ಥಿಗಳನ್ನು ಒಟ್ಟು ಗೂಡಿಸಿ ತಾಯಿನಾಡನ್ನು ಅಭಿವೃದ್ಧಿಗೊಳಿಸುವಲ್ಲಿನ ತಮ್ಮ ಆಲೋಚನೆಗಳಿಗೆ ಹಾಗೂ ಹೊಸ ವಿಚಾರದಾರೆಗಳಿಗೆ ಬೆಳಕು ಚೆಲ್ಲುವುದು ಈ ಉದ್ಯಮೋತ್ಸವದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಈ ಸಿನರ್ಜಿ 2015  ಅನ್ನು ಆಯೋಜಿಸಲಾಗಿದೆ ಎಂದು ಇಗ್ನಿಟೀ ಟು ದ ನ್ಯೂ ಮುಂಬೈ ಇದರ ಅಧ್ಯಕ್ಷರಾದ ಅತುಲ್ ಹೆಗ್ಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು. ಮುಖ್ಯ ಅಥಿತಿಯಾಗಿ ಭಾರತ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಎಕ್ಸಿಕ್ಯುಟಿವ್ ಡೈರೆಕ್ಟರ್ ಅನಂತ್ ಜಿ ಪೈ ಉಪಸ್ಥಿತರಿದ್ದರು.

sdm_synerg_sangam_4 sdm_synerg_sangam_5 sdm_synerg_sangam_6 sdm_synerg_sangam_7 sdm_synerg_sangam_8 sdm_synerg_sangam_9

ಈ ಉದ್ಯಮೋತ್ಸವದಲ್ಲಿ ಉದ್ಯಮಕ್ಕೆ ಸಂಬಂಧ ಪಟ್ಟ ಮಾರ್ಕೆಟಿಂಗ್, ಫೈನಾನ್ಸ್, ಬಿಸ್ ನೆಸ್ ಕ್ವಿಜ್, ಪಬ್ಲಿಸಿಸ್ಟ್, ಹ್ಯೂಮನ್ ರಿಸೋರ್ಸ್ ಬೆಸ್ಟ್ ಮ್ಯಾನೇಜರ್ ಹಾಗೂ ಫೋಟೋಗ್ರಾಫಿ ಮೊದಲಾದವುಗಳನ್ನು ಆಯೋಸಲಾಗಿದ್ದು, ವಿಧ್ಯಾರ್ಥಿಗಳಲ್ಲಿ ವ್ಯವಾಹಾರಿಕ ಪ್ರಪಂಚದ ವಿವಿಧ ಮಜಲುಗಳನ್ನು ಪರಿಚಯಿಸುವುದು ಹಾಗೂ ಅತ್ಮಸ್ಥೈರ್ಯವನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ.

Write A Comment