ಮಂಗಳೂರು,ಜ22 : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವಕರ್ಮ ಸಮುದಾಯ ಭವನದ ನಿರ್ಮಾಣದ ಬಗ್ಗೆ ಕರ್ನಾಟಕ ಸರಕಾರದಿಂದ ವಿಶೇಷ ಆರ್ಥಿಕ ಸಹಾಯ ನೀಡುವರೇ ಮನವಿಯನ್ನು ಶ್ರೀಕ್ಷೇತ್ರದ ಸಚಿವ ಬಿ.ರಮಾನಾಥ ರೈ ಮೂಲಕ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ನವರಿಗೆ ಬೆಂಗಳೂರಿನ ವಿಧಾನ ಸೌಧದಲ್ಲಿ ಕಛೆರಿಯಲ್ಲಿ 21-1-2015 ರಂದು ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರರ ಕೆ.ಲೋಕೇಶ್ ಆಚಾರ್ಯರು ನೀಡಿದರು.
ಜಿಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಮೂಲಕ ನಿಯೋಗ ಮುಖ್ಯಮಂತ್ರಿಗಳ ಕಛೇರಿಯಲ್ಲಿ ನೀಡಿದ ವಿಶೇಷ ಅನುದಾನದ ಕೋರಿಗೆ ಮಾನ್ಯ ಮುಖ್ಯ ಮಂತ್ರಿಗಳು ಸ್ಪಂದಿಸಿರುತ್ತಾರೆ.
ಶ್ರೀಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಹಾಗೂ ಪ್ರಸ್ತುತ ಆಡಳಿತ ಮಂಡಳಿ ಸದಸ್ಯ ಕೆ.ಕೇಶವ ಆಚಾರ್ಯ ಮಡಿಕೇರಿ. ಕೆ.ಚಿನ್ನಯ್ಯ ಆಚಾರ್ಯ ಸುಳ್ಯ ಹಾಗೂ ಕಾರ್ಯಕರ್ತರಾದ ತೀರ್ಥರಾಮ್ ಸುಳ್ಯ ವಸಂತ್ ಸುಳ್ಯ, ನಯನ್ ಕುಮಾರ್ ಮಡಿಕೇರಿ, ಆಶೋಕ್ ಆಚಾರ್ಯ ಸಿದ್ದಕಟ್ಟೆ ಈ ಸಂದರ್ಭ ಉಪಸ್ಥಿತರಿದ್ದರು.