ಕನ್ನಡ ವಾರ್ತೆಗಳು

ರಿಕ್ಷಾಗೆ ಅಡ್ಡ ಬಂದ ಕಾಡುಬೆಕ್ಕು – ರಿಕ್ಷಾ ಚರಂಡಿಗೆ ಬಿದ್ದು ಮೂವರಿಗೆ ಗಾಯ.

Pinterest LinkedIn Tumblr

auto_ricsko_photo_1

ವಿಟ್ಲ,ಜ.22 : ಆಟೋರಿಕ್ಷಾಗೆ ಭಾರೀ ಗಾತ್ರದ ಕಾಡು ಬೆಕ್ಕೊಂದು ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ಕಳೆದು ಆಟೋರಿಕ್ಷಾ ರಸ್ತೆ ಪಕ್ಕದ ಚರಂ ಡಿಗೆ ಉರುಳಿದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅಪಘಾತಕ್ಕೆ ಕಾರಣವಾದ ಕಾಡುಬೆಕ್ಕು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಚಿ ಸಮೀಪ ಬುಧವಾರ ನಡೆದಿದೆ.

ಆಟೋ ಚಾಲಕ ಕಂಚಿಲ ನಿವಾಸಿ ಶ್ರೀಕಾಂತ್, ಪ್ರಯಾಣಿಕರಾದ ಕಂಚಿಲ ನಿವಾಸಿ ಶರತ್, ಕೋಕಳ ನಿವಾಸಿ ನಾರಾಯಣ ಎಂಬವರು ಗಾಯಗೊಂಡಿದ್ದು, ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

auto_ricsko_photo_2

ಸಾಲೆತ್ತೂರು-ಮಂಚಿ ರಸ್ತೆಯ ಕೋಕಳದಿಂದ ಪನೋಲಿಬೈಲುವಿಗೆ ಸಂಚರಿಸುತ್ತಿದ್ದ ಆಟೋರಿಕ್ಷಾಗೆ ಮಂಚಿ ಶಾಲಾ ಸಮೀಪ ಗುಡ್ಡದಿಂದ ಇಳಿದು ಬಂದ ಕಾಡು ಬೆಕ್ಕೊಂದು ಅಚಾನಕ್ ಆಗಿ ಅಡ್ಡಬಂದಿದೆ. ಪರಿಣಾಮ ಕಾಡು ಬೆಕ್ಕನ್ನು ಬಚಾವು ಮಾಡಲು ಹೋದ ಚಾಲಕನ ಹತೋಟಿ ತಪ್ಪಿದ ಆಟೋ ರಿಕ್ಷಾ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ರಿಕ್ಷಾದಡಿಗೆ ಸಿಲುಕಿದ ಕಾಡುಬೆಕ್ಕು ಗಂಭೀರವಾಗಿ ಗಾಯ ಗೊಂಡು ಸ್ಥಳದಲ್ಲೇ ಸಾವನ್ನಪ್ಪಿದೆ. ಬೆಕ್ಕಿನ ರಾದ್ಧಾಂತದಿಂದಾಗಿ ಚರಂಡಿಗೆ ಉರುಳಿ ಬಿದ್ದ ಆಟೋ ಹಾನಿಗೀಡಾ ಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಕಾಡುಬೆಕ್ಕನ್ನು ದಫನ ಮಾಡಿದ್ದಾರೆ.

Write A Comment