ಕನ್ನಡ ವಾರ್ತೆಗಳು

ಪೂಜಾಗಾಂಧಿಯ ಚೊಚ್ಚಲ ನಿರ್ಮಾಣದ ಪೂಜಾಫಲ ‘ಅಭಿನೇತ್ರಿ’

Pinterest LinkedIn Tumblr

pooja_gandi_abhinetri

ಬೆಂಗಳೂರು,ಜ.21 : ಪೂಜಾಗಾಂಧಿ ಅವರ ಚಿತ್ರಗಳು ತೆರೆಕಂಡು ಬಹಳ ಸಮಯವೇ ಸರಿದುಹೋಗಿದೆ. ಕಳೆದ ವರ್ಷ ‘ಕಲ್ಯಾಣಮಸ್ತು’ ಎಂಬ ಚಿತ್ರ ಬಂದು ಹೋಗಿದ್ದೇ ಗೊತ್ತಾಗಲಿಲ್ಲ. ಇದೀಗ ಅವರ ಮಹತ್ವಾಕಾಂಕ್ಷೆಯ ಚೊಚ್ಚಲ ನಿರ್ಮಾಣದ ಚಿತ್ರ ‘ಅಭಿನೇತ್ರಿ’ ತೆರೆಗೆ ಬರಲು ಸಿದ್ಧವಾಗಿದೆ. ಇದೇ ಜನವರಿ 30ರಂದು ‘ಅಭಿನೇತ್ರಿ’ ಚಿತ್ರ ರಾಜ್ಯದಾದ್ಯಂತ 150 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ತಮ್ಮ ಪಾತ್ರಕ್ಕಾಗಿ ಪೂಜಾಗಾಂಧಿ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡು ಇದೀಗ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿನ ಕೆಲವೊಂದು ಹಾಟ್ ದೃಶ್ಯಗಳು, ಇದು ಮಿನುಗುತಾರೆ ಕಲ್ಪನಾ ಅಥವಾ ಮಂಜುಳಾ ಅವರ ಕಥೆ ಇರಬಹುದೇ ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ.

ಅರುವತ್ತು, ಎಪ್ಪತ್ತರ ದಶಕದ ತಾರೆಯೊಬ್ಬಳ ಕಥೆ ಇದು ಎಂದಿರುವ ಪೂಜಾಗಾಂಧಿ, ಅಂದಿನ ಚಿತ್ರೋದ್ಯಮ ಹೇಗಿತ್ತು ಎಂಬ ಬಗ್ಗೆಯೂ ಬೆಳಕು ಚೆಲ್ಲುತ್ತಿದ್ದಾರೆ. ಈ ಚಿತ್ರ ಯಾವುದೇ ತಾರೆ ಕುರಿತಾದ ಚಿತ್ರವಲ್ಲ. ಅರುವತ್ತು, ಎಪ್ಪತ್ತರ ದಶಕದಲ್ಲಿ ತಾರೆಯೊಬ್ಬಳ ಕಥೆ. ಈ ಚಿತ್ರ ಎಲ್ಲಾ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಅಭಿನೇತ್ರಿಯರಿಗೆ ಅರ್ಪಣೆ ಎಂದಿದ್ದಾರೆ.

Write A Comment