ಕನ್ನಡ ವಾರ್ತೆಗಳು

ಪವಿತ್ರ ಹಜ್ ಯಾತ್ರೆಯ  ಹಜ್ ಫಾರ್ಮ್ ಬಿಡುಗಡೆ

Pinterest LinkedIn Tumblr

haj_froum_relises

ಮಂಗಳೂರು, ಜ.21: ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ನೀಡುವ ಅರ್ಜಿಗಳನ್ನು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಕಚೇರಿಯಲ್ಲಿ ರಾಜ್ಯ ವಕ್ಫ್ ಮಂಡಳಿ ಸದಸ್ಯ ಹಾಗೂ ಮಂಗಳೂರು ಹಜ್ ನಿರ್ವಾಹಣಾ ಸಮಿತಿ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ ಬಿಡುಗಡೆಗೊಳಿಸಿದರು.

ಮರವಂತೆಯ ಮೊಯ್ದಿನಬ್ಬ, ಖಾಲಿದ್ ತಣ್ಣೀರುಬಾವಿ, ಆಸಿಯಾ ಮೂಡುಬಿದಿರೆ ಹಜ್ ಫಾರ್ಮ್ ಗಳನ್ನು ಪಡೆದುಕೊಂಡರು. ಮುಹಮ್ಮದ್ ಮುಸ್ಲಿಯಾರ್ ಜೆಪ್ಪು ದುಆ ಮಾಡಿದರು.
ಈ ಸಂದರ್ಭ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಅರ್ಜಿಗಳನ್ನು ಕಚೇರಿಯಿಂದ ಉಚಿತವಾಗಿ ಪಡೆದುಕೊಂಡು ಪಾಸ್‌ಪೋರ್ಟ್‌ನೊಂದಿಗೆ ಫೆ.20ರೊಳಗೆ ಮರಳಿಸಬೇಕು’ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಹಾಜಿ ಶರೀಫ್ ಚೊಕ್ಕಬೆಟ್ಟು, ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಸಿ.ಮಹ್ಮೂದ್ ಹಾಜಿ, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಬಂದರ್, ಜಮೀಯತುಲ್ ಫಲಾಹ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಜಿ ಬಿ.ಎಸ್.ಬಶೀರ್ ಜೆಪ್ಪು, ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಎಫ್.ಎಂ.ಬಶೀರ್, ಉಪಾಧ್ಯಕ್ಷ ಜಿ.ಎ.ಇಮ್ತಿಯಾಝ್, ಮಂಗಳೂರು ಹಜ್ ನಿರ್ವಾಹಣಾ ಸಮಿತಿಯ ಉಪಾಧ್ಯಕ್ಷ ಅಝೀಝ್ ಬೈಕಂಪಾಡಿ, ಪುತ್ತುಬಾವಾ ಹಾಜಿ, ರಶೀದ್ ವಿಟ್ಲ, ಅಹ್ಮದ್ ಬಾವ ಪಡೀಲ್, ವಿ.ಮುಹಮ್ಮದ್ ಬಜ್ಪೆ, ಅಬ್ದುಲ್ ರಶೀದ್, ಇಕ್ಬಾಲ್ ಮುಲ್ಕಿ, ಉಸ್ಮಾನ್ ಸೂರಿಂಜೆ, ಸಮದ್ ಬಿಕರ್ನಕಟ್ಟೆ, ವಕ್ಫ್ ಅಧಿಕಾರಿ ಹಾಜಿ ಅಬೂಬಕರ್ ಉಪಸ್ಥಿತರಿದ್ದರು.

Write A Comment