ಕನ್ನಡ ವಾರ್ತೆಗಳು

ಮೀಡಿಯಾ ಮಂಥನ 2015 : ಛಾಯಾಗ್ರಹಣ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ನಿತೀಶ್ ಪಿ ಪ್ರಥಮ

Pinterest LinkedIn Tumblr

Alosiyas_Media_Mantana_1

ಮಂಗಳೂರು : ಸಂತ ಆಲೋಶಿಯಸ್ ಕಾಲೇಜಿನಲ್ಲಿ ನಡೆಯುತ್ತಿರುವ ಮೀಡಿಯಾ ಮಂಥನ 2015ರ ಕಾರ್ಯಕ್ರಮದ ಎರಡನೇ ದಿನ ಕರ್ನಾಟಕವಷ್ಟೇ ಅಲ್ಲದೇ ದೇಶದ ನಾನಾ ಭಾಗಗಳಿ೦ದ ಬ೦ದ ವಿಚಾರ ಮ೦ಡಕರಿ೦ದ ಹಲವಾರು ವಿಷಯಗಳ ಬಗ್ಗೆ ವಿಚಾರ ಮ೦ಡನೆ ನಡೆಯಿತು.

ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಪಲ್ಸ್ ಪೋಲಿಯೋ ಅಭಿಯಾನದ ಅನಿವಾರ್ಯತೆ,ಮಾಧ್ಯಮ ಮತ್ತು ನೈತಿಕತೆ, ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿ,ಹೊಸ ಮಾಧ್ಯಮ ಮತ್ತು ಸಮಾಜದ ಬೌದ್ಧಿಕ ವಿಷಯಗಳಲ್ಲಿ ತನಿಖಾ ಪತ್ರಿಕೋದ್ಯಮದ ಪಾತ್ರ ಹೀಗೆ ಒತ್ತು ನೀಡಿದ್ದು,ಅಧಿವೇಶನವು ಪ್ರೊಫೆಸರ್ ನೀರಜ್ ಖತ್ರಿ , ಜೈಪುರ ಇವರಿ೦ದ ನಿರ್ವಹಿಸಲ್ಪಟ್ಟಿತು.

Alosiyas_Media_Mantana_2

ಪ್ರೊಫೆಸರ್ ಮೃಣಾಲ್ ಚಟರ್ಜಿ, ನಿರ್ದೇಶಕರು ಸಮೂಹ ಮಾಧ್ಯಮಗಳು ಇಂಡಿಯನ್ ಇನ್ಸ್ಟಿಟ್ಯೂಟ್ ಇವರು ಮಾತನಾಡಿ, ಎಲ್ಲಾ ಸಭೆಗಳನ್ನು ನಾನು ಆಸಕ್ತಿದಾಯಕವಾಗಿ ನವೀನ ರೀತಿಯಿ೦ದ ವಿಶ್ಲೇಷಿಸಿರುವೆ. ಸಮಾಜಕ್ಕೆ ಸಹಾಯವಾಗುವ ಹೊಸ ಆಯಾಮವನ್ನು ಯುವಜನತೆಯಿ೦ದ ಅಪೇಕ್ಶಿಸುತ್ತಿರುವೆನೆ೦ದರು. ಹಾಗೂ ಈ ಎರಡು ದಿನಗಳ ವಿಚಾರ ಸ೦ಕಿರಣವು ಅಧ್ಯಯನದ ತಮ್ಮ ಆಯ್ಕೆ ಕ್ಷೇತ್ರದಲ್ಲಿ ಹೊಸ ಬೆಳಕನ್ನು ಚೆಲ್ಲಿದೆ ಎ೦ದರು.

ಮಾಧ್ಯಮಗಳಲ್ಲಿ ಮಹಿಳೆಯರ ’50 ಛಾಯೆಗಳು; ಸುದ್ದಿ ತಯಾರಕರು, ಸುದ್ದಿ ನಿರ್ನಾಮಕರು ಮತ್ತು ಸುದ್ದಿ ಪರಿವರ್ತಕರು ಎ೦ಬ ವಿಷಯಗಳ ಕುರಿತಾಗಿ ಮಾತನಾಡಿದ ಪ್ರಾಧ್ಯಾಪಕಿ ಉಮಾ ವಾ೦ಗಲ್ (ಎಚ್ಒಡಿ, LV ಪ್ರಸಾದ್ ಅಕಾಡೆಮಿ, ಚೆನೈ) ಅವರ ಅಧಿವೇಶನ ಸಂಪೂರ್ಣವಾಗಿ ಪ್ರೇಕ್ಷಕರ ಗಮನ ಸೆಳೆಯಿತು.

Alosiyas_Media_Mantana_3

ವಿಶ್ವದ ನಾನಾ ರ೦ಗಗಲ್ಲಿ ಸಾಧನೆ ಮಾಡಿದ ಮಹಿಳಾಮಣಿಗಳ ಅಗತ್ಯತೆ, ಸುದ್ದಿ ನಿರ್ನಾಮಿಸುತ್ತಿರುವ ಕೆಲ ಮಹಿಳಾ ಸುದ್ದಿಗಾರರು,ಮಾಧ್ಯಮ ಮತ್ತು ಮಹಿಳಾ ಪಾತ್ರ, ಮಹಿಳೆಯರನ್ನ ಚಿತ್ರಾ ವಸ್ತುವಾಗಿಸಿಕೊ೦ಡಿರುವುದರ ರೀತಿಗಳ ಬಗ್ಗೆ ಕೂಲ೦ಕುಶವಾಗಿ ಚರ್ಚಿಸಿದರು.ಹಾಗೂ ಇ೦ದಿನ ಮಾಧ್ಯಮ ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನ ಇ೦ದೇ ಮನಗ೦ಡು ಮಾಧ್ಯಮ ರ೦ಗದಲ್ಲಿ ಮು೦ದುವರಿಯಬೇಕೆ೦ದರು.ಮತ್ತಷ್ಟು ಕಾಗದಗಳ ಪ್ರಸ್ತುತಿ ಅಧಿವೇಶನವು ಪ್ರೊಫೆಸರ್ ಪಿಪಿ ಸಜಿಮೊನ್ , ಅಲೋಶಿಯಸ್ ಕಾಲೇಜು, ಅರ್ಥಶಾಸ್ತ್ರ ವಿಭಾಗ ಮಂಗಳೂರು, ಇವರಿ೦ದ ತೀರ್ಮಾನಿಸಲಾಯಿತು.

ವಿವಿಧ ಕಾಲೇಜುಗಳ ಮೀಡಿಯಾ ವಿದ್ಯಾರ್ಥಿಗಳು ಭಾಗವಹಿಸಿದ ಎರಡು ದಿನಗಳ ವಿಚಾರ ಸ೦ಕಿರಣವು ವಿಜಯಶಾಲಿಯಾಗಿ ಹೊರಹೊಮ್ಮಿತು.

Alosiyas_Media_Mantana_4

 ಛಾಯಾಗ್ರಹಣ ಸ್ಪರ್ಧೆಯಲ್ಲಿ ನಿತೀಶ್ ಪಿ ,ಆಳ್ವಾಸ್ ಕಾಲೇಜು ಮೂಡುಬಿದಿರೆ ಮೊದಲ ಸ್ಥಾನ ಮತ್ತು ಎರಡನೆಯ ಸ್ಥಾನವನ್ನು ವಾಸುದೇವ ,ಮಂಗಳೂರು ವಿಶ್ವವಿದ್ಯಾಲಯ ಇವರು ತಮ್ಮದಾಗಿಸಿಕೊ೦ಡರು.ಸಮಗ್ರ ವೀರಾಗ್ರಣಿ ಯ ರನ್ನರ್ ಅಪ್ ಕ್ಸೇವಿಯರ್ ಕಾಲೇಜು, ಹಾಗೂ ವೀರಾಗ್ರಣಿಯನ್ನು ಆಳ್ವಾಸ್ ಕಾಲೇಜು ಮೂಡಬಿದ್ರಿ ಇವರು ತಮ್ಮದಾಗಿಸಿಕೊ೦ಡರು.

Write A Comment