ಕನ್ನಡ ವಾರ್ತೆಗಳು

ಕುಂಭಾಸಿ : ರಾಷ್ಟ್ರೀಯ ಹೆದ್ದಾರಿ ವಿಭಾಜಕಕ್ಕೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ | ಗ್ರಾಮಸ್ಥರಿಗೆ ಅನ್ಯಾಯವಾದಲ್ಲಿ ಉಗ್ರ ಹೋರಾಟ: ಗಣಪತಿ ಟಿ. ಶ್ರೀಯಾನ್

Pinterest LinkedIn Tumblr

ಕುಂದಾಪುರ: ಕುಂಭಾಸಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚತುಷ್ಪತ ಕಾಮಗಾರಿ ಅಚಿತಿಮ ಹಂತದಲ್ಲಿದ್ದು,, ಈ ಭಾಗದಲ್ಲಿ ಬಸ್ಸು ನಿಲ್ದಾಣ ಮತ್ತು ಡಿವೈಡರ್ ಸಮಸ್ಯೆ ಏರ್ಪಟ್ಟಿದೆ. ಕುಂಭಾಸಿಯ ರಾ.ಹೆದ್ದಾರಿಯಲ್ಲಿ ಈ ಹಿಂದೆ ಇರುವ ಸ್ಥಳದಲ್ಲಿಯೇ ಮುಂದುವರಿಸಬೇಕು ಹಾಗೂ ಬಸ್ಸು ನಿಲ್ದಾಣವನ್ನು ಇಲ್ಲಿಯೇ ಮುಂದುವರಿಸಬೇಕು ಎಂದು ಆಗ್ರಹಿಸಿ ಕುಂಭಾಸಿಯ ನಾಗರೀಕರು ಕುಂಭಾಸಿ ಬಸ್ಸು ನಿಲ್ದಾಣದ ಎದುರು ರಸ್ತೆ ತಡೆಯುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.

Kumbasi_Road_Protest Kumbasi_Road_Protest (1) Kumbasi_Road_Protest (2)

ಈ ಸಂದರ್ಭ ಮಾತನಾಡಿದ ಉಡುಪಿ ಜಿ.ಪಂ. ಸದಸ್ಯ ಗಣಪತಿ ಟಿ.ಶ್ರೀಯಾನ್, ಹೆದ್ದಾರಿ ಚತುಷ್ಪಪತ ಕಾಮಗಾರಿ ಆರಂಭಗೊಂಡು ೫ ವರ್ಷಗಳಾಗಿದ್ದು, ಹಲವು ಕಡೆಗಳಳಲ್ಲಿ ಹೆದ್ದಾರಿ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ಅನಾನೂಕೂಲವುಂಟಾಗುತ್ತಿದೆ, ಆದರೂ ಕೂಡ ಜನರು ತಾಳ್ಮೆಯಿಂದಲೇ ಇದ್ದಾರೆ. . ಕುಂಭಾಸಿಯಲ್ಲಿ ಚತುಷ್ಪತ ರಸ್ತೆಯನ್ನು ನೇರವಾಗಿ ನಿರ್ಮಿಸುವ ಕಾರಣದಿಂದಾಗಿ ಕರಾವಳಿ ಜನರು ಹಾಗೂ ಈ ಭಾಗದ ಜನರನ್ನು ಬೇರ್ಪಡಿಸುವ ರೀತಿಯ ಕಾರ್ಯವಾಗಿದೆ. ಕುಂಭಾಸಿ ಸೇರಿದಂತೆ ನಾಲ್ಕೈದು ಗ್ರಾಮಗಳಿಗೆ ಹೆದ್ದಾರಿ ಪ್ರಾಧಿಕಾರ ಹಾಗೂ ಸರಕಾರದಿಂದ ಅನ್ಯಾಯವಾಗುತ್ತಿದೆ. ಕುಂಭಾಸಿ ಜನತಾ ಕಾಲೋನಿಯ 2.5 ಮತ್ತು 5 ಸೆಂಟ್ಸ್‌ನಲ್ಲಿ 250 ಕ್ಕೂ ಅಧಿಕ ಮನೆಗಳಲ್ಲಿ ಸಾವಿರಾರು ಜನರು ವಾಸವಾಗಿದ್ದಾರೆ, ಅಲ್ಲದೇ ಪುರಾಣ ಪ್ರಸಿದ್ಧ ಹರಿಹರ ದೇವಸ್ಥಾನ, ನಾಗಾಚಲ ದೇವಸ್ಥಾನಗಳಿದೆ, ಇದೆಲ್ಲಾ ಕಾರಣಗಳಿಂದ ಕುಂಭಾಸಿಯಲ್ಲಿ ಈ ಹಿಂದೆ ಇದ್ದ ಭಾಗದಲ್ಲಿ ಬಸ್ಸು ನಿಲ್ದಾಣ ಹಾಗೂ ಡಿವೈಡರ್ ನಿರ್ಮಾಣವಾಗಲೇಬೇಕು ಇದು ಹೀಗೆ ಮುಂದುವರಿದಲ್ಲಿ ಉಗ್ರಮಟ್ಟದ ಹೋರಾಟಕ್ಕೆ ಈ ಭಾಗದ ನಾಗರರೀಕರು ಮುಂದಾಗಲಿದ್ದಾರೆ ಎಂದು ಹೇಳಿದರು.

ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್, ಕುಂದಾಪುರ ವೃತ್ತನಿರೀಕ್ಷಕ ದಿವಾಕರ್ ಪಿ.ಎಂ., ಹಾಗೂ ರಾ.ಹೆದ್ದಾರಿ ಚತುಷ್ಪತ ಗುತ್ತಿಗೆ ಕಂಪೆನಿಗೆ ನಾಗರೀಕರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕುಂಭಾಸಿ ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯೆ ವಿನೋದಾ ಶೇರಿಗಾರ್, ಸ್ಥಳೀಯರಾದ ಅಣ್ಣಯ್ಯ ಪುತ್ರನ್, ಶ್ರೀಧರ್ ಉಪಾಧ್ಯಯ, ಶ್ರೀಪತಿ ಉಪಾಧ್ಯ, ದಿನೇಶ್ ಕುಂಭಾಸಿ, ಸ್ಥಳೀಯ ನಾಗರೀಕರು, ರಿಕ್ಷಾ ಚಾಲಕರು ಮತ್ತು ಮಾಲಕರು ಮೊದಲಾದವರಿದ್ದರು.

Write A Comment