ಕನ್ನಡ ವಾರ್ತೆಗಳು

ಗೇರು ಬೆಳೆಗೆ ವಿಮಾ ಸೌಲಭ್ಯ

Pinterest LinkedIn Tumblr

cashw_tree_vimama

ಮಂಗಳೂರು,ಜ.13 : ದಕ್ಷಿಣ ಕನ್ನಡ ಜಿಲ್ಲೆಯ ಗೇರು ಬೆಳೆಗಾರರ ಗಮನವನ್ನು ಸೆಳೆಯುತ್ತ, ರಾಷ್ಟೀಯ ಬೆಳೆ ವಿಮಾ ಕಾರ್ಯಕ್ರಮದಡಿ 2014-15 ರ, ಹಿಂಗಾರು ಹಂಗಾಮಿಗೆ ಕರ್ನಾಟಕ ರಾಜ್ಯದಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಗೇರು ಬೆಳೆಗೆ ವಿಮೆ ಸೌಲಭ್ಯ ಕೊಡಲಾಗುತ್ತಿದೆ. ಗೇರು ಬೆಳೆಗೆ ನೈಸರ್ಗಿಕವಾಗಿ ಹಾನಿ ಉಂಟಾದಲ್ಲಿ ವಿಮೆ ಮಾಡಿಸಿದ ಬೆಳೆಗಾರರಿಗೆ ವಿಮಾ ಸೌಲಭ್ಯ ಸಿಗುತ್ತದೆ.

ವಿಮಾ ಮೊತ್ತ ಹಾಗೂ ವಿಮಾ ಕಂತಿನ ವಿವರ-ಇದರಲ್ಲಿ ಗರಿಷ್ಟ ವಿಮೆಯ ಮೊತ್ತ ಪ್ರತಿ ಹೆಕ್ಟೇರಿಗೆ ರೂ.75.000/- ವಾಣಿಜ್ಯ ವಿಮಾ ಕಂತಿನ ದರ ವಿಮಾ ಮೊತ್ತದ ಶೇ. 11.90 .ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. 5.95 .ಉಳಿದ ಅರ್ಧಭಾಗ ಸರ್ಕಾರದಿಂದ ರಿಯಾಯಿತಿ ನೀಡಲಾಗುತ್ತದೆ.ಹಾಗಾಗಿ ಪಾವತಿಸಬೇಕಾದ ಒಟ್ಟು ವಿಮಾ ಕಂತು ರೂ. 8,925 / ಹೆಕ್ಟೇರಿಗೆ. ಇದರಲ್ಲಿ ರೈತರ ಪಾಲು ರೂ. 4,462 /ಹೆಕ್ಟೇರಿಗೆ. ಈ ವಿಮೆಯನ್ನು ಮಾಡಿಸಲು ಅಂತಿಮ ದಿನಾಂಕವನ್ನು 31-01-2015 ರತನಕ ವಿಸ್ತರಿಸಲಾಗಿದೆ ಗೇರು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೌಲಭ್ಯದ ಪ್ರಯೋಜನ ಪಡೆಯಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಕಛೇರಿಗಳ ವಿಳಾಸ : 
ತೋಟಗಾರಿಕೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ಮಂಗಳೂರು 0824-2423628 / ಹಾರ್ಟಿ ಕ್ಲಿನಿಕ್, ತೋಟಗಾರಿಕೆ ಉಪನಿರ್ದೇಶಕರ ಕಛೇರಿ, ಮಂಗಳೂರು 0824-2412628 /ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಮಂಗಳೂರು ತಾಲೂಕು ೦824-2423615/ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಪುತ್ತೂರು ತಾಲೂಕು 08251-230905/ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಸುಳ್ಯ ತಾಲೂಕು 08257-232020 / ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬಂಟ್ವಾಳ ತಾಲೂಕು 08255-234102/ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬೆಳ್ತಂಗಡಿ ತಾಲೂಕು 08256-232148

Write A Comment