ಕನ್ನಡ ವಾರ್ತೆಗಳು

ಜ.8ರಿಂದ 11: 21ನೆ ವರ್ಷದ ‘ಆಳ್ವಾಸ್ ವಿರಾಸತ್- 2015’ – ಉಸ್ತಾದ್ ಅಮ್ಜದ್ ಅಲಿಖಾನ್‌ ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಅಯ್ಕೆ

Pinterest LinkedIn Tumblr

Alvas_Nudisiri_Press

ಮಂಗಳೂರು, ಜ.6: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ ಸಾಂಸ್ಕೃತಿಕ ಉತ್ಸವ, 21ನೆ ವರ್ಷದ ‘ಆಳ್ವಾಸ್ ವಿರಾಸತ್- 2015’ ಜನವರಿ 8ರಿಂದ 11ರವರೆಗೆ ನಡೆಯಲಿದ್ದು, ಈ ಬಾರಿಯ ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಸರೋದ್ ಮಾಂತ್ರಿಕ ಪದ್ಮಭೂಷಣ ಉಸ್ತಾದ್ ಅಮ್ಜದ್ ಅಲಿಖಾನ್‌ರನ್ನು ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರು ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರೋದ್ ಮಾಂತ್ರಿಕನೆಂದೇ ಹೆಸರು ವಾಸಿಯಾಗಿರುವ ಅಮ್ಜದ್ ಅಲಿಖಾನ್‌ರಿಗೆ ಜ.8ರಂದು ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

Alvas_Nudisiri_Press_3

ಜ.8ರಂದು ಸಂಜೆ 5:15ಕ್ಕೆ ಮೆರವ ಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 5:30ಕ್ಕೆ ಸಭಾ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾ ಟಿಸುವರು. ನಿಟ್ಟೆ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಸಚಿವರಾದ ಬಿ.ರಮಾನಾಥ ರೈ, ಯು.ಟಿ. ಖಾದರ್, ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮತ್ತಿತ ರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Alvas_Nudisiri_Pres_2

ಶಾಸ್ತ್ರೀಯ- ಜಾನಪದ ಕಲರವ

ನಾಲ್ಕು ದಿನಗಳ ಆಳ್ವಾಸ್ ವಿರಾಸತ್‌ನಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ, ಜನಪದ ಸಂಗೀತ, ನೃತ್ಯಗಳು ಮೇಳೈಸಲಿವೆ. ರಾಜಸ್ತಾನದ ಶಾಸ್ತ್ರೀಯ ಹಾಗೂ ಜನಪದ ಕಲಾತಂಡದ ಡೆಸರ್ಟ್ ಸ್ಟೋರ್ಮ್, ಶ್ರೀರಾಮ ನಾಟಕ ನಿಕೇತನ, ಆಂಧ್ರಪ್ರದೇಶದ 25 ವಿದ್ಯಾರ್ಥಿಗಳ ವಿಶೇಷ ನೃತ್ಯ ಪ್ರದರ್ಶನ, ಪಂಜಾಬಿ ನೃತ್ಯ ವೈವಿಧ್ಯ, ಗುಜರಾತಿ ನೃತ್ಯ ವೈವಿಧ್ಯ, ಸ್ಟ್ರಿಂಗ್ ಸ್ಟ್ರಕ್ ಪೂರ್ವ ಪಶ್ಚಿಮ ಅಪೂರ್ವ ವಾದನ ಸಂಗಮ, ಕಲೈಮಾಮಣಿ ಶಿವಮಣಿ ಮೊದಲಾದ ಕಲಾವಿದರ ವಾದನ ಸಂಗಮ ಮಹಾಲೀಲ, ಮೈಸೂರು ಮಂಜುನಾಥ್ ತಂಡದ ನಾದಲೋಕ, ಕರ್ನಾಟಕದ ಆಯ್ದ 30 ಯುವ ಪುರುಷ ಕಲಾವಿದರಿಂದ ಪ್ರಥಮ ಬಾರಿಗೆ ನೃತ್ಯ ಪುರುಷ ಸಂಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ 4 ದಿನಗಳು ಪಂಜಾಬಿನ ಫತೇ ಆರ್ಮಿ ಬ್ಯಾಂಡ್ ಕಲೆಯ ವಿಶೇಷ ಪ್ರದರ್ಶನ ನಡೆಯಲಿವೆೆ ಎಂದು ಡಾ.ಮೋಹನ್ ಆಳ್ವ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕಲಾವಿದ ಜೀವನ್‌ರಾಂ ಸುಳ್ಯ, ಪದ್ಮನಾಭ, ವೇಣು ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.

Write A Comment