ಕನ್ನಡ ವಾರ್ತೆಗಳು

ಇನ್ನೊಂದು ತುಳು ಸಿನೆಮೋತ್ಸವಕ್ಕೆ ಸಿದ್ದತೆ – 2015ರ ಟ್ರೋಫಿ ಅನಾವರಣ

Pinterest LinkedIn Tumblr

tulu_filme_fest_2

ಮಂಗಳೂರು,ಜ.05: ತುಳು ಸಿನೆಮೋತ್ಸವ – 2015ರ ಟ್ರೋಫಿಯನ್ನು ಜ. 4ರಂದು ಇಲ್ಲಿನ ಫೋರಂ ಫಿಜಾ ಮಾಲ್‌ನಲ್ಲಿ ತುಳುಚಿತ್ರ ಕಲಾವಿದರಾದ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌, ಅರವಿಂದ ಬೋಳಾರ್‌ ಮತ್ತು ಭೋಜರಾಜ್‌ ವಾಮಂಜೂರು ಅವರು ಟ್ರೋಫಿಯನ್ನು ಅನಾವರಣ ಮಾಡಿದರು.

ಮೆಗಾ ಫೈನಲ್‌ ಪ್ರಶಸ್ತಿ ಕೊಡುಗೆಯು ಜ. 31ರಂದು ಇದೇ ಸ್ಥಳದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಮಲಾನಿ ಟಾಕೀಸ್‌ನ ಸಂದೀಪ್‌ ಮಲಾನಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಉತ್ತಮ ನಟ- ನಟಿ, ಅತ್ಯುತ್ತಮ ಚಿತ್ರ, ಶ್ರೇಷ್ಠ ನಿರ್ದೇಶಕ, ಉತ್ತಮ ಪೋಷಕ ನಟ- ನಟಿ, ಖಳ ನಾಯಕ, ಸಂಗೀತ, ಹಿನ್ನೆಲೆ ಗಾಯಕ- ಗಾಯಕಿ, ಛಾಯಾಗ್ರಾಹಕ, ನೃತ್ಯ ನಿರ್ದೇಶಕ ಇತ್ಯಾದಿಯಾಗಿ 30 ಪ್ರಶಸ್ತಿಗಳನ್ನು ತುಳು ಸಿನೆಮೋತ್ಸವ 2015ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿತರಿಸಲಾಗುವುದು. 2012, 2013 ಮತ್ತು 2014 ವರ್ಷದ ಚಿತ್ರಗಳನ್ನು ಇದಕ್ಕೆ ಪರಿಗಣಿಸಲಾಗುತ್ತದೆ ಎಂದು ವಿವರಿಸಿದರು.

ಬಂಗಾರ್ದ ಕುರಲ್‌, ಆಮೇಟ್‌ ಅಸಲ್‌ ಈಮೇಟ್‌ ಕುಸಲ್‌, ಸೋಂಪ, ತೆಲಿಕೆದ ಬೊಳ್ಳಿ, ರಿಕ್ಷಾ ಡ್ರೈವರ್‌, ಪಕ್ಕಿಲು ಮೂಜಿ, ಬರ್ಕೆ, ನಿರೆಲ್‌, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ, ರಂಗ್‌, ಚಾಲಿಪೋಲಿಲು, ಮದಿಮೆ- ಈ ಚಿತ್ರಗಳು ಪ್ರಶಸ್ತಿ ಸ್ಪರ್ಧಾ ಸುತ್ತಿನಲ್ಲಿವೆ.ಇದೇ ವೇಳೆ ಹಳೆಯ ತುಳು ಸಿನೆಮಾಗಳನ್ನು ಪರಿಗಣಿಸಿ ಜೀವಮಾನ ಸಾಧನಾ ಪ್ರಶಸ್ತಿ ನೀಡಲಾಗುವುದು. ಅಲ್ಲದೆ ತುಳು ನಾಡಿನ ಬ್ಯಾರಿ, ಕೊಂಕಣಿ ಭಾಷಾ ಸಿನೆಮಾಗಳನ್ನೂ ಗೌರವಿಸಲಾಗುವುದು ಎಂದರು.

ತುಳು ಸಿನೆಮೋತ್ಸವದ ಮಾಧ್ಯಮ ಪ್ರಸಾರ ಪಾಲುದಾರರಾದ ವಿ4 ನ್ಯೂಸ್‌ ಅವರು ಈಗಾಗಲೇ ಈ ನಿಟ್ಟಿನಲ್ಲಿ ಸಿನೆಮಾ ಸಂಬಂಧಿತ ಸಂದರ್ಶನ, ಸಿನೆಮೋತ್ಸವದ ಬಗೆಗೆ ಮಾಹಿತಿ, ಸಿನೆಮಾ ತುಣುಕುಗಳನ್ನು ಪ್ರದರ್ಶಿಸುತ್ತಿದ್ದಾರೆ. ಒಂದು ತಿಂಗಳ ಕಾಲ 50ರಷ್ಟು ತುಳು ಸಿನೆಮಾ ದಿಗ್ಗಜರ ಸಂದರ್ಶನ ವಿ4 ನ್ಯೂಸ್‌ನಲ್ಲಿ ಪ್ರಸಾರವಾಗುತ್ತಲಿದೆ. ಅವಿನಾಶ್‌ ಮಲಾಡ್‌ ನಿರ್ದೇಶನದಲ್ಲಿ ಶರತ್‌ ಎಂ.ಎಸ್‌. ಗೌಡ ಅವರು ಇದನ್ನು ಸಂಕಲಿಸಿದ್ದಾರೆ.ಮುಖ್ಯ ಸಮಾರಂಭಕ್ಕೆ ಸ್ಕಂದ ಸೊಲ್ಯೂಶನ್ಸ್‌, ಸಿ19 ನೆಟ್‌ವರ್ಕ್‌ನವರಿಂದ ವ್ಯವಸ್ಥೆ ಮಾಡಲಾಗುತ್ತಿದ್ದು, ಫ್ಯಾಶನ್‌ ಎಬಿಸಿಡಿ, ವಿ4 ನ್ಯೂಸ್‌ ಸಹಕಾರ ಸಿಕ್ಕಿದೆ ಎಂದು ವಿವರಿಸಿದರು.
ಸ್ಕಂದ ಸೊಲ್ಯೂಶನ್ಸ್‌ ಸಂಸ್ಥೆಯ ಅರವಿಂದ ದೇವಾಡಿಗ, ಸಿ19 ನೆಟ್‌ವರ್ಕ್‌ನ ಚೇತನ್‌, ವಿ4 ನ್ಯೂಸ್‌ನ ಲಕ್ಷ್ಮಣ ಕುಂದರ್‌, ಫ್ಯಾಶನ್‌ ಎಬಿಸಿಡಿ ಸಂಸ್ಥೆಯ ಚರಣ್‌ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.

Write A Comment