ಕನ್ನಡ ವಾರ್ತೆಗಳು

ಕೊಲ್ಲೂರು ಮೂಕಾಂಬಿಕೆಗೆ 5ಲಕ್ಷ ವೆಚ್ಚದ ಬಂಡಿ ರಥ ಸಮರ್ಪಣೆ

Pinterest LinkedIn Tumblr

ಕುಂದಾಪುರ: ಅನಿವಾಸಿ ಭಾರತೀಯ ಕೇರಳದ ಕಾಂಜ್ಞಂಗಾಡಿನ ನೆಲ್ಲಿಕಾಟ್ ನಿವಾಸಿ ದೇವಿಯ ಪರಮ ಭಕ್ತ ಕೆ. ಅರವಿಂದಾಕ್ಷನ್ ನಾಯರ್ ಇವರು ಸುಮಾರು 5ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಬಂಡಿ ರಥವನ್ನು  ಪೂಜಾ ವಿಧಿ ವಿಧಾನಗಳೊಂದಿಗೆ ಶ್ರೀ ದೇವಿಗೆ ಸಮರ್ಪಿಸಲಾಯಿತು.

Kolluru_Bandi Ratha_Distribution Kolluru_Bandi Ratha_Distribution (1) Kolluru_Bandi Ratha_Distribution (2)

 

ಈ ಕಾರ್ಯಕ್ರಮವನ್ನು ದೇವಳದ ತಂತ್ರಿಗಳಾದ ರಾಮಚಂದ್ರ ಅಡಿಗ ಇವರ ನೇತ್ರತ್ವದಲ್ಲಿ ನೆರವೇರಿಸಲಾಯಿತು.

ಅರ್ಚಕರಾದ ಗೋವಿಂದ ಅಡಿಗ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣಪ್ರಸಾದ ಅಡ್ಯಂತಾಯ,  ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಣ್ಣಪ್ಪ ಖಾರ್ವಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ  ಹೆಚ್. ಕೃಷ್ಣಮೂರ್ತಿ, ಅಧೀಕ್ಷಕ ರಾಮಕೃಷ್ಣ ಅಡಿಗ ಮತ್ತು ರಥ ನಿರ್ಮಿಸಿದ ಶಿಲ್ಪಿಗಳಾದ ಪ್ರಭಾಕರ ಆಚಾರ್ಯ, ಕೃಷ್ಣಯ್ಯ ಆಚಾರ್ಯ  ಗೋಪಾಡಿ ಕೋಟೇಶ್ವರ ಇವರು ಉಪಸ್ಥಿತರಿದ್ದರು.

Write A Comment