ಮಂಗಳೂರು : “ದಿ ಗುಲಾಬಿ ಸ್ಟ್ರೀಟ್ ಗರ್ಲ್” ಕಮರ್ಷಿಯಲ್ ಸಿನೆಮಾ ಚಿತ್ರೀಕರಣ ಬೆಂಗಳೂರು ಆಸುಪಾಸುಗಳಲ್ಲಿ ಭರದಿಂದ ಸಾಗುತ್ತಿದೆ. ಹೊಸ ವರುಷದಲ್ಲಿ ಹೊಸ ತನದೊಂದಿಗೆ ತೆರೆಯ ಮೇಲೆ ಮೂಡಿಬರಲಿರುವ ಈ ಚಿತ್ರ ದ್ವಿ ಭಾಷೆಗಳಲ್ಲಿ ಹೆಸರುಮಾಡುವುದಂತೂ ಗ್ಯಾರಂಟಿ ಎಂಬ ಮಾತು ಗಾಂಧೀನಗರದಲ್ಲಿ ಕೇಳಿಬರುತ್ತಿವೆ.
ಛಲದಿಂದ ಏನನ್ನಾದರೂ ಸಾಧಿಸಬಹುದಾದ ಮಹಿಳೆಯ ಪ್ರತಿನಿಧಿಯಾಗಿ ಮೇಘನಾ ಗಾಂವಕರ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ರೋಲ್ ಒಂದರ ಚಿತ್ರೀಕರಣ ಇದೀಗ ಬೆಂಗಳೂರಿನ ಆಸುಪಾಸಿನಲ್ಲಿ ನಡೆದಿದ್ದು ಅದರ ಒಂದು ಝಲಕ್ ನಮ್ಮ ಓದುಗರಿಗಾಗಿ ನೀಡುತ್ತಿದ್ದೇವೆ.
ಸಂತು ಸಿನಿಮಾಸ್ ಸಹಯೋಗದಲ್ಲಿ ಸ್ಪೇಸ್ ಮೀಡಿಯಾ ಎಂಟರ್ ಟೈನ್ ಮೆಂಟ್ ಪ್ರೈ.ಲಿ ಮತ್ತು ಎರಿಯರ್ ಡ್ರೀಮ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣಮಾಡುತ್ತಿದೆ.