ಕನ್ನಡ ವಾರ್ತೆಗಳು

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ: ಬಡವರಿಗೆ ವರದಾನ –  ಕೆ ವಸಂತ ಬಂಗೇರ,

Pinterest LinkedIn Tumblr

vasant_bangera_photo

ಮಂಗಳೂರು,ಡಿ.30: ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಬಡ ಕುಟುಂಬಗಳಿಗೆ ಒಂದು ವರದಾನವಾಗಿದೆಯೆಂದು, ಈ ಯೋಜನೆ ಅಡಿ ಬಡ ಕುಟುಂಬದ ಮತ್ತು ಕೆಲವೊಂದು ವರ್ಗದ ಕಾರ್ಮಿಕರು ಆರೋಗ್ಯ ವಿಮೆ ಮೂಲಕ ಹಲವಾರು ಖಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆ ಹಾಗೂ ಗುರುತಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ  30000 ಸಾವಿರದವರೆಗೆ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದಯೆಂದು ತಿಳಿಸಿ, ಅರ್ಹ ಫಲಾನುಬವಿಗಳು ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ನೋಂದಣಿ ಮಾಡಿಕೊಳ್ಳಬೇಕೆಂದು ಬೆಳ್ತಂಗಡಿ ತಾಲ್ಲೂಕಿನ ಮಾನ್ಯ ಶಾಸಕರಾದ ಶ್ರೀ ಕೆ. ವಸಂತ ಬಂಗೇರಾ ರವರು ಕರೆ ನೀಡಿದ್ದಾರೆ.

ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ನಿಯೋಜಿಸಲ್ಪಟ್ಟ ಫೀಲ್ಡ್ ಕಿ ಆಫಿಸರ್‍ಸ್ ರವರುಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಮತ್ತು ಆದೇಶ ಪ್ರತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಈ ಯೋಜನೆಯನ್ನು ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಅರ್ಹ ಬಡ ಕುಟುಂಬಗಳಿಗೆ ತಲುಪಿಸಲು, ನಿಯೋಜಿತ ಫೀಲ್ಡ್ ಕಿ ಆಫಿಸರ್‍ಸ್ ರವರುಗಳು ಶ್ರಮಿಸುವಂತೆ ಕರೆನೀಡಿದರು.

ಫೀಲ್ಡ್ ಕಿ ಆಫಿಸರ್‍ಸ್ ರವರುಗಳಿಗೆ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಶ್ರೀ ಡಿ ಜೆ ನಾಗೇಶ್ ರವರು ತರಬೇತಿಯನ್ನು ನೀಡುತ್ತಾ, ಈ ಯೋಜನೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಇದನ್ನು ಅನುಷ್ಠಾನ ಗೊಳಿಸಲು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಲವಾರು ಇಲಾಖೆಗಳು ಶ್ರ್ರಮಿಸುತ್ತಿದ್ದು, ಪಂಚಾಯತಿಗಳ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಸಂಪೂರ್ಣ ಸಹಕಾರ ಅತ್ಯಗತ್ಯವಾಗಿದೆಯೆಂದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿದರು. ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ ಬಿಪಿ‌ಎಲ್ ಮತ್ತು ಬೀಡಿ ಕಾರ್ಮಿಕರ ಒಟ್ಟು 38,544  ಕುಟುಂಬಗಳು ಈ ಯೋಜನೆಯಡಿ ಫಲಾನುಭವಿಗಳಾಗಿದ್ದಾರೆಂದು ತಿಳಿಸಿದರು.

ಬೆಳ್ತಂಗಡಿ ತಾಲ್ಲೂಕು ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಕೆ ಎನ್ ಮಹಾಂತೇಶ್ ರವರು ಮಾತನಾಡಿ, ತಮ್ಮ ವತಿಯಿಂದ ಈ ಯೋಜನೆ ಅನುಷ್ಠಾನಗೊಳಿಸಲು ಸಂಪೂರ್ಣ ಸಹಕಾರವಿದೆಯೆಂದು, ಪಿ ಡಿ ಒ ಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ತಿಳಿಸಿದರು ಬೆಳ್ತಂಗಡಿತಾಲ್ಲೂಕು ಪಂಚಾಯತ್‌ನ ಉಪಾದ್ಯಕ್ಷರಾದ ಶ್ರಿ ವಿಷ್ಠು ಮರಾಠೆ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಈ ಯೋಜನೆಯನ್ನು ಬೆಳ್ತಂಗಡಿ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಯಶಸ್ವಿಗೊಳಿಸಲು ಜನಪ್ರತಿನಿಧಿಗಳು ಇಲಾಖೆಯೊಂದಿಗೆ ಸಹಕರಿಸಲು ಬದ್ಧರಿದ್ದೇವೆಂದು, ಬಡವರಿಗೆ ಈ ಯೋಜನೆಯ ಪ್ರಯೋಜನ ತಲುಪಲು ಸರ್ವರೂ ಶ್ರಮಿಸಬೇಕೆಂದು ತಿಳಿಸಿದರು.

ಬೆಳ್ತಂಗಡಿ ತಾಲ್ಲೂಕಿನ ತಹಶಿಲ್ದಾರರಾದ ಶ್ರೀ ಬಿ ಎಸ್ ಪುಟ್ಟಶೆಟ್ಟಿ, ಕೆ.ಎ.ಎಸ್. ರವರು ಸಮಾರಂಭದ ಅದ್ಯಕ್ಷತೆಯನ್ನು ವಹಿಸಿ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿ, ಬಡವರಿಗೆ ಸಹಕಾರಿಯಾಗಿರುವ ಈ ಯೋಜನೆಯ ಮಹತ್ವವನ್ನು ಅರ್ಹ ಫಲಾನುಭವಿಗಳಿಗೆ ತಿಳಿಸುವುದೇ ಅಲ್ಲದೆ ನಿಗದಿತ ದಿನದಂದು ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಸ್ಥಳಕ್ಕೆ ಬಂದು ಯೋಜನೆಯ ಸದಸ್ಯಯರಾಗಿ ನೋಂದಣಿ ಮಾಡಿಕೊಳ್ಳುವಂತೆ ಮನವರಿಕೆ ಮಡಿಕೊಡಬೇಕೆಂದು ಸೂಚಿಸಿದರು.

ಸಮಾರಂಭದಲ್ಲಿ ಶ್ರೀ ಮಹೇಶ್, ಕಾರ್ಮಿಕ ಅಧಿಕಾರಿ, ಮಂಗಳೂರು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಾದ ಶ್ರೀಮತಿ ಜೆಸಿಂತಾ ಲೂವೀಸ್, ಶಿಶು ಕಲ್ಯಾಣಾಭಿವೃದ್ಧಿ ಅಧಿಕಾರಿ ಶ್ರೀ ಪುಟ್ಟಸ್ವಾಮಿ, ತಾಲ್ಲೂಕು ಆರೋಗ್ಯಾ ಧಿಕಾರಿ  ಡಾ. ಕಲಾಮಧು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಮಾರಂಭಕ್ಕೆ ಯಶಸ್ಸು ಕೋರಿದರು.

ಬೆಳ್ತಂಗಡಿ ವೃತ್ತದ ಕಾರ್ಮಿಕ ನಿರೀಕ್ಷರಾದ ಶ್ರೀ ರಾಮಮೂರ್ತಿ ಎಸ್. ಎಸ್. ರವರು ಗಣ್ಯರನ್ನು ಸ್ವಾಗಿತಿಸಿ, ಯೋಜನೆಯ ಮಹತ್ವವನ್ನು ವಿವರಿಸಿ, ಬೆಳ್ತಂಗಡಿ ತಾಲ್ಲೂಕಿನಲ್ಲಿ ದಿನಾಂಕ 9-1-2015  ರಂದು ನಾರಾವಿ, ಮರೋಡಿ, ಕಾಶಿಪಟ್ಟಣ, ಹೊಸಂಗಡಿ, ಆರಂಬೋಡಿ, ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರಂಭವಾಗುತ್ತಿದ್ದು, ಯೋಜನೆಯ ಅನುಷ್ಠಾನಕ್ಕಾಗಿ ಸರ್ವರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಪುತ್ತೂರು ತಾಲ್ಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರಾದ ಶ್ರೀ ರಾಮಚಂದ್ರ ಹೆಬ್ಬಾರ್ ರವರು ವಂದನಾರ್ಪಣೆ ಸಲ್ಲಿಸಿದರು.

Write A Comment